Kottigehara: ಪಿತೃ ಪಕ್ಷದ ಊಟಕ್ಕೆ ಮಾವನ ಮನೆಗೆ ಹೋಗಲು ಪೊಲೀಸ್ ಜೀಪ್ ಕರೆಸಿಕೊಂಡ ಭೂಪ
Team Udayavani, Sep 27, 2024, 10:21 AM IST
ಚಿಕ್ಕಮಗಳೂರು: ಜಗತ್ತಿನಲ್ಲಿ ಯಾವೆಲ್ಲಾ ರೀತಿಯ ಜನರಿರುತ್ತಾರೆ ಎಂದು ತಿಳಿಯಲು ಕೊಟ್ಟಿಗೆಹಾರದ ಈ ವ್ಯಕ್ತಿಯೇ ಸಾಕ್ಷಿ,
ಹೌದು ಇಲ್ಲೊಬ್ಬ ವ್ಯಕ್ತಿ ಪಿತೃ ಪಕ್ಷದ ಊಟಕ್ಕೆ ಮಾವನ ಮನೆಗೆ ಹೋಗಲು ಗಾಡಿ ವ್ಯವಸ್ಥೆ ಇಲ್ಲ ಎಂದು ಪೊಲೀಸ್ ಠಾಣೆಗೆ ಕರೆ ಮಾಡಿ ಪೊಲೀಸರನ್ನೇ ಕರೆಸಿದ ವಿಚಿತ್ರ ಘಟನೆ ಕೊಟ್ಟಿಗೆಹಾರದ ತರುವೆ ಗ್ರಾಮದಳ್ಳಿ ನಡೆದಿದೆ.
ತರುವೆ ಗ್ರಾಮದ ಅಶೋಕ್ ಎಂಬ ವ್ಯಕ್ತಿಯೇ ಪೊಲೀಸರಿಗೆ ಕರೆ ಮಾಡಿ ತನ್ನನ್ನು ಮಾವನ ಮನೆಗೆ ಡ್ರಾಪ್ ಮಾಡುವಂತೆ ಕೇಳಿಕೊಂಡಿದ್ದಾನೆ.
ಏನಿದು ಘಟನೆ:
ಪಿತೃಪಕ್ಷದ ಹಿನ್ನೆಲೆಯಲ್ಲಿ ತರುವೆ ಗ್ರಾಮದ ಅಶೋಕ್ ನಿಗೆ ಮಾವನ ಮನೆಯಾದ ಪಲ್ಗುಣಿ ಗ್ರಾಮಕ್ಕೆ ಹೋಗಬೇಕಾಗಿತ್ತು ಆದರೆ ಅಲ್ಲಿಗೆ ಹೋಗಲು ಸರಿಯಾದ ಬಸ್ಸಿನ ವ್ಯವಸ್ಥೆ ಇರಲಿಲ್ಲ ಅಲ್ಲದೆ ಒಂದೆಡೆ ಮಳೆ ಕೂಡ ಬರುತ್ತಿತ್ತು ಆದರೂ ಮಾವನ ಮನೆಗೆ ಹೋಗದೆ ವಿಧಿಯಿಲ್ಲ ಕೊನೆಗೆ ಅಶೋಕ್ ಒಂದು ಪ್ಲಾನ್ ಮಾಡಿ (ಪೊಲೀಸರಿಗೆ) 112 ಗೆ ಫೋನ್ ಮಾಡಿ ಸರ್… ಪಲ್ಗುಣಿ ಗ್ರಾಮದಲ್ಲಿ ಗಲಾಟೆ ನಡೆಯುತ್ತಿದೆ ಬೇಗ ಬನ್ನಿ ಅಂತ ಮನವಿ ಮಾಡಿಕೊಂಡಿದ್ದಾನೆ ವ್ಯಕ್ತಿಯ ಮಾತು ಕೇಳಿ ತುರುವೇ ಗ್ರಾಮಕ್ಕೆ ಪೊಲೀಸ್ ಬಂದಿದ್ದಾರೆ ಆದರೆ ಗ್ರಾಮದಲ್ಲಿ ಎಲ್ಲೂ ಗಲಾಟೆ ನಡೆದ ವಿಚಾರ ಗೊತ್ತಾಗಿಲ್ಲ. ಬಳಿಕ ಅಶೋಕ್ ಬಳಿ ವಿಚಾರಿಸಿದಾಗ ಸರ್ ನನ್ನನ್ನೊಂದು ಮಾವನ ಮನೆಗೆ ಡ್ರಾಪ್ ಮಾಡಿ ಸರ್ ಅಲ್ಲಿಗೆ ಹೋಗಲು ಮಳೆ ಕೂಡ ಬರುತ್ತಿದೆ, ಗಾಡಿ ಬೇರೆ ಇಲ್ಲ ಎಂದು ಪೊಲೀಸರ ಬಳಿ ಅಶೋಕ್ ಕೇಳಿಕೊಂಡಿದ್ದಾನೆ ಇದರಿಂದ ಪೊಲೀಸರಿಗೆ ಒಂದು ಕ್ಷಣ ಬೈಯ್ಯಬೇಕೋ… ನಗಬೇಕೋ… ತಿಳಿಯಲಿಲ್ಲ, ಕೊನೆಗೆ ಅಶೋಕ್ ಗೆ ಬುದ್ದಿವಾದ ಹೇಳಿ ಪೊಲೀಸರೇ ರಸ್ತೆಯಲ್ಲಿ ಬರುತ್ತಿದ್ದ ಲಾರಿಯೊಂದನ್ನು ನಿಲ್ಲಿಸಿ ಡ್ರಾಪ್ ನೀಡುವಂತೆ ಹೇಳಿ ಕಳುಹಿಸಿಕೊಟ್ಟಿದ್ದಾರೆ.
ಇದನ್ನೂ ಓದಿ: K. Lakshminarayanana: ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ. ಲಕ್ಷ್ಮೀ ನಾರಾಯಣ ನಿಧನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮ*ಹತ್ಯೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
MUST WATCH
ಹೊಸ ಸೇರ್ಪಡೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.