‘ಕುಟುಂಬದಲ್ಲಿ ಐಕ್ಯತೆಯಿಂದ ಸಹಬಾಳ್ವೆ ಸಾಧ್ಯ’ : ಮನೋಹರ್ ಡಿಸೋಜ
Team Udayavani, Sep 8, 2021, 4:26 PM IST
ಕೊಟ್ಟಿಗೆಹಾರ: ‘ಕುಟುಂಬದಲ್ಲಿ ಐಕ್ಯತೆಯಿಂದ ಬದುಕಿ ಸಹಬಾಳ್ವೆ ನಡೆಸುವುದರಿಂದ ಕುಟುಂಬ ನೆಮ್ಮದಿಯಿಂದ ಬದುಕಲು ಸಾಧ್ಯ’ ಎಂದು ದಯಾಳ್‌ಭಾಗ್ ಚರ್ಚಿನ ಧರ್ಮಗುರು ಮನೋಹರ್ ಡಿಸೋಜ ಹೇಳಿದರು.
ಅವರು ಬುಧವಾರದಂದು ಬಣಕಲ್ ಬಾಲಿಕಾ ಮರಿಯ ಚರ್ಚ್ನಲ್ಲಿ ಮಾತೆ ಮರಿಯಮ್ಮನವರ ಹಬ್ಬದ ಪೂಜೆ ನೆರವೇರಿಸಿ ಮಾತನಾಡಿದರು. ‘ಜನರಲ್ಲಿ ಹಿಂದಿನ ಕಾಲದ ಮಾನವ ಸಂಬಂಧದ ಸರಪಳಿಗಳ ಕೊಂಡಿ ಕಳಚಿಕೊಳ್ಳುತ್ತಿದ್ದು, ಆಧುನಿಕತೆಯಿಂದ ಸಮಾಜದಲ್ಲಿ ಏಕತೆಗೆ ಧಕ್ಕೆಯಾಗಿದೆ. ಪ್ರಕೃತಿ ತಾಯಿಯನ್ನು ನಾವು ಪ್ರೀತಿಸಬೇಕು. ಆಗ ಮಾತ್ರ ಪ್ರಕ್ರತಿಯು ಉತ್ತಮ ಫಲವನ್ನು ನೀಡಬಲ್ಲದು. ಕುಟುಂಬದಲ್ಲಿ ನಮ್ಮ ಮಾತೆಗೆ ನಾವು ಗೌರವಿಸಿದರೆ ನಮ್ಮ ಕುಟುಂಬವು ಏಕತೆಯಿಂದ ಬಾಳುತ್ತದೆ’ ಎಂದರು. ಧರ್ಮಗುರು ಆಲ್ಬರ್ಟ್ಡಿಸಿಲ್ವ, ಅಂತೋನಿ ಡಿಸೋಜ ಇದ್ದರು.
ಕೂವೆ ಹೋಲಿ ಕ್ರಾಸ್ ಚರ್ಚಿನಲ್ಲಿ ಧರ್ಮಗುರು ಸ್ಟ್ಯಾನಿ ಕಾರ್ಡೋಜಾ ಹಬ್ಬದ ಪೂಜೆ ನೆರವೇರಿಸಿ ಮಾತನಾಡಿ, ‘ಸೌಹಾರ್ದ ಜಗತ್ತನ್ನು ನಿರ್ಮಿಸಲು ಪ್ರತಿಯೊಬ್ಬರಿಗೂ ಪ್ರೀತಿ ಹಂಚುವ ಅಗತ್ಯವಿದೆ. ಮಾತೆ ಮರಿಯಮ್ಮನವರ ಜನ್ಮ ದಿನಾಚರಣೆಯು ನಮ್ಮೆಲ್ಲರಿಗೂ ಅತ್ಯಂತ ಶುಭದಿನವಾಗಿದೆ. ಕುಟುಂಬದವರು ಐಕ್ಯತೆಯಿಂದ ಸೇರಿ ಆಚರಿಸುವ ಹಬ್ಬ ಇದಾಗಿದ್ದು, ಹೊಸಕ್ಕಿ ಸೇವಿಸುವ ಮೂಲಕ ಕುಟುಂಬದವರೆಲ್ಲ ಅನ್ಯೋನ್ಯವಾಗಿ ಬದುಕುವ ಸಂದೇಶವನ್ನು ಜಗತ್ತಿಗೆ ಸಾರಲಾಗಿದೆ’ ಎಂದರು.
ಇದನ್ನೂ ಓದಿ:ಕೋವಿಡ್ : ಮನೆಮನೆಗೆ ತೆರಳಿ ಲಸಿಕೆ ನೀಡಿಯೆಂದು ಆದೇಶಿಸಲು ಸಾಧ್ಯವಿಲ್ಲ : ಸುಪ್ರೀಂ ಅಭಿಪ್ರಾಯ
ಕೆಳಗೂರು ಹಾಗೂ ಹಿರೇಬೈಲ್ ಚರ್ಚಿನಲ್ಲಿ ಧರ್ಮಗುರು ವಿನ್ಸೆಂಟ್ ಡಿಸೋಜ ಮಾತನಾಡಿ, ‘ಕುಟುಂಬದಲ್ಲಿ ಏಕತೆ, ಸೌಹಾರ್ದತೆ ಕಾಪಾಡಿಕೊಂಡು, ಸಮಾಜದಲ್ಲೂ ಅದೇ ಪಾಲನೆ ಮಾಡಿಕೊಂಡು ಜವಾಬ್ದಾರಿಯುತ ವ್ಯಕ್ತಿಯಾಗಬೇಕು. ಸಮಾಜದಲ್ಲಿ ಶಾಂತಿಯುತ ಬದುಕು ನಡೆಸಿ ಪರಸ್ಪರ ನೆರೆಹೊರೆಯವರಿಗೂ ಮಾರ್ಗದರ್ಶಿಗಳಾಗಬೇಕು’ ಎಂದರು.
ವಿವಿಧ ಚರ್ಚುಗಳಲ್ಲಿ ನವದಿನಗಳ ಕಾಲ ನೊವೇನಾ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಹೂಗಳನ್ನು ತಂದು ಮಾತೆ ಮರಿಯಮ್ಮನವರಿಗೆ ಅರ್ಪಿಸಿದ ಪುಟಾಣಿಗಳಿಗೆ ಹಾಗೂ ಭಕ್ತಾದಿಗಳಿಗೆ ಕಬ್ಬು ಮತ್ತು ಸಿಹಿ ವಿತರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Baba Budan Dargah: ಗೋರಿಗಳ ಮೇಲೆ ಕುಂಕುಮ ಹಚ್ಚಿರುವ ಆರೋಪ
Naxal leader Vikram Gowda Encounter: ಕುದುರೆಮುಖ: ಶೋಧ ಕಾರ್ಯ ಚುರುಕು
Naxal: ಎನ್‌ಕೌಂಟರ್‌ಗೆ ಜಾಲತಾಣದಲ್ಲಿ ಮಾಜಿ ನಕ್ಸಲ್ ಪತ್ನಿ ಆಕ್ರೋಶ
Congress ಶಾಸಕರಿಗೆ ಬಿಜೆಪಿ ಆಫರ್; ರವಿ ಗಣಿಗ ಆರೋಪಕ್ಕೆ ಶಾಸಕ ತಮ್ಮಯ್ಯ ಸ್ಪಷ್ಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.