Kottigehara; ಅಪರಿಚಿತ ಜಿಪ್ಸಿ ಢಿಕ್ಕಿ:ವ್ಯಕ್ತಿಗೆ ಗಂಭೀರ ಗಾಯ
Team Udayavani, Sep 30, 2023, 9:48 PM IST
ಕೊಟ್ಟಿಗೆಹಾರ: ಬಣಕಲ್ ಪೇಟೆಯಲ್ಲಿ ಮೂಡಿಗೆರೆಯಿಂದ ಕೊಟ್ಟಿಗೆಹಾರ ಕಡೆಗೆ ಸಾಗುತ್ತಿದ್ದ ಅಪರಿಚಿತ ಜಿಪ್ಸಿ ವಾಹನ ವ್ಯಕ್ತಿಗೆ ಢಿಕ್ಕಿ ಹೊಡೆದು ವಾಹನ ನಿಲ್ಲಿಸದೇ ಹೋಗಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.ವಿನಯ್ ಎಂಬ ಯುವಕ ಗಾಯಾಳು.
ಬಣಕಲ್ ಸಮೀಪದ ಮತ್ತಿಕಟ್ಟೆಯಿಂದ ಬಿ.ಎಸ್ ರಕ್ಷಿತ್ ಅವರ ಬೈಕ್ನಲ್ಲಿ ವಿನಯ್ ಸೇರಿ ಅಂಗಡಿ ದಿನಸಿ ತರಲು ಬಣಕಲ್ ಗೆ ಬಂದಿದ್ದರು.ಬೈಕನ್ನು ಆಲಂ ಸೂಪರ್ ಮಾರ್ಕೆಟ್ ಬಳಿ ನಿಲ್ಲಿಸಿ ಇತರ ವಸ್ತುಗಳನ್ನು ಖರೀದಿಸಲು ರಾತ್ರಿ 8ಗಂಟೆ ಸಮಯದಲ್ಲಿ ವಿನಯ್ ರಸ್ತೆ ದಾಟುತ್ತಿದ್ದಾಗ ಮೂಡಿಗೆರೆ ಕಡೆಯಿಂದ ಕೊಟ್ಟಿಗೆಹಾರ ಕಡೆ ಸಾಗುವ ವಾಹನವು ಚಾಲಕನ ಅತಿಯಾದ ವೇಗದಿಂದ ವಿನಯ್ ಗೆ ಢಿಕ್ಕಿ ಹೊಡೆದಿದೆ.ವಿನಯ್ ಗಂಭೀರ ಗಾಯಗೊಂಡು ತಲೆಗೆ, ಕಾಲಿಗೆ ಪೆಟ್ಟಾಗಿತ್ತು.ಆದರೆ ಅಪರಿಚಿತ ಜಿಪ್ಸಿ ವಾಹನ ನಿಲ್ಲಿಸದೇ ಕೊಟ್ಟಿಗೆಹಾರ ಕಡೆಗೆ ಸಾಗಿತ್ತು.ಕೂಡಲೆ ಸ್ಥಳೀಯ ಯುವಕರು ನಮ್ಮ ಊರು ಬಣಕಲ್ ವ್ಯಾಟ್ಸಾಪ್ ಗ್ರೂಪಿನಲ್ಲಿ ಒಬ್ಬರಿಂದೊಬ್ಬರಿಗೆ ಜಿಪ್ಸಿ ಹಿಡಿಯುವಂತೆ ಬಾಳೂರು ಪೊಲೀಸ್ ಠಾಣೆ ಸುತ್ತಮುತ್ತ ಮಾಹಿತಿ ತಲುಪಿಸಿದ್ದಾರೆ.
ಬಾಳೂರು ಪೊಲೀಸರು ಬ್ಯಾರಿಕೇಡ್ ಗಳನ್ನು ಹಾಕಿ ವಾಹನ ನಿಲ್ಲಿಸಲು ಹೇಳಿದರೆ ಚಾಲಕ ಬ್ಯಾರಿಕೇಡ್ ಗೆ ಗುದ್ದಿ ಎಲ್ಲಿಯೂ ನಿಲ್ಲಿಸದೇ ಗಬ್ಗಲ್ ಮೂಲಕ ನಾಪತ್ತೆಯಾಯಿತು.ಕೆಲವು ಯುವಕರು ರಾತ್ರಿವರೆಗೂ ಬೆನ್ನಟ್ಟಿದರೂ ಇವರ ಸುಳಿವು ಸಿಗಲಿಲ್ಲ.ಬಾಳೂರು ಠಾಣೆಯ ಪೊಲೀಸರು ಹಿರೇಬೈಲ್, ಬಿಳಗಲಿ ಬಳಿ ಜಿಪ್ಸಿ ವಾಹನವನ್ನು ಹಿಡಿದು ಪೊಲೀಸ್ ಠಾಣೆಗೆ ತಂದರು.ಘಟನೆ ಬಣಕಲ್ ನಲ್ಲಿ ಆದುದರಿಂದ ಜಿಪ್ಸಿ ವಾಹನವನ್ನು ಬಣಕಲ್ ಗೆ ತಂದು ಪ್ರಕರಣ ದಾಖಲಿಸಲಾಯಿತು.ಗಾಯಾಳು ವಿನಯ್ ಗಂಭೀರ ಸ್ಥಿತಿಯಲ್ಲಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Chikkamagaluru: ಮೂರು ದಿನದ ಬಾಣಂತಿ ಮೃತ್ಯು; ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪ
Kottigehara: ನಿರ್ದೇಶಕ ಉಪೇಂದ್ರ ಅವರ ‘ಯುಐ’ ಚಿತ್ರದಲ್ಲಿ ಖಳನಟನಾಗಿ ನಟಿಸಿದ ಬಣಕಲ್ ನಿವಾಸಿ
MUST WATCH
ಹೊಸ ಸೇರ್ಪಡೆ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.