ಪೊಲೀಸ್‌ ವಸತಿ ಗೃಹದಲ್ಲಿ ಸೌಲಭ್ಯ ಕೊರತೆ

ಕಳಪೆ ಕಟ್ಟಡ ಕಾಮಗಾರಿ; ಸೋರುತ್ತಿರುವ ವಸತಿ ಗೃಹ ಕಟ್ಟಡದ ಮೇಲ್ಭಾಗ

Team Udayavani, Aug 14, 2021, 5:43 PM IST

ಪೊಲೀಸ್‌ ವಸತಿ ಗೃಹದಲ್ಲಿ ಸೌಲಭ್ಯ ಕೊರತೆ

ಶೃಂಗೇರಿ: ಪೊಲೀಸ್‌ ಅಫೀಸರ್‌ ವಸತಿಗೃಹದ ಹೊರನೋಟ.

ಶೃಂಗೇರಿ: ಪಟ್ಟಣದ ಹೊರವಲಯದ ವಿದ್ಯಾ ನಗರದಲ್ಲಿ ಪೊಲೀಸ್‌ ವಸತಿ ಗೃಹಕ್ಕೆ ಮೀಸಲಾದ ಸ್ಥಳದಲ್ಲಿ ಅಫೀಸರ್‌ ವಸತಿ ಗೃಹ ಹಾಗೂ 38
ಸಿಬ್ಬಂದಿಗೆ ವಸತಿ ಗೃಹವಿದ್ದು, ಸಿಬ್ಬಂದಿಯ ಅಗತ್ಯ ಪೂರೈಸಿದೆ. ಆದರೆ ಕಳೆದ ಎರಡು ವರ್ಷದಲ್ಲಿ ಪೊಲೀಸ್‌ ವಸತಿ ಗೃಹ ಸಮೀಪ ಸಾಕಷ್ಟು ಅಭಿವೃದ್ಧಿ ಕಾಣುತ್ತಿದ್ದರೂ ಒಂದಷ್ಟು ಕೊರತೆಗಳು ಇವೆ.

2019-20 ರಲ್ಲಿ ನಿರ್ಮಾಣವಾದ 12 ವಸತಿ ಗೃಹದ ಕಟ್ಟಡ ಹೊರ ನೋಟಕ್ಕೆ ಸುಂದರವಾಗಿದ್ದರೂ ಕಟ್ಟಡ ಕಾಮಗಾರಿ, ಕಟ್ಟಡದ ಒಳಗಿನ ಕಾಮಗಾರಿಗಳು ಗುಣಮಟ್ಟದಲ್ಲಿಲ್ಲ. ಮಲೆನಾಡಿಗೆ ಹೊಂದಿಕೆಯಾಗದ ಕಟ್ಟಡ ನಿರ್ಮಾಣದ ತಂತ್ರಜ್ಞಾನದಿಂದ ಕಟ್ಟಡದ ಮೇಲ್ಭಾಗದಲ್ಲಿ ನಿರ್ಮಿಸಿರುವ ಶೀಟಿನ ಹೊದಿಕೆ ಅಪೂರ್ಣವಾಗಿದೆ. ಇದರಿಂದ ಕಟ್ಟಡದ ಮೇಲ್ಭಾಗದಲ್ಲಿ ಸೋರಿಕೆಯಾಗುತ್ತಿದೆ.

ಅಫೀಸರ್‌ ವಸತಿ ಗೃಹಕ್ಕೆ ಟಾರ್ಪಲಿನ್‌ ಹೊದಿಕೆ: ವೃತ್ತ ನಿರೀಕ್ಷಕ ಹಾಗೂ ನಿರೀಕ್ಷಕರಿಗೆ ಮೀಸಲಾಗಿರುವ ಎರಡು ವಸತಿ ಗೃಹಗಳು ಸೋರಿಕೆಯಾಗುತ್ತಿವೆ. ಇದೀಗ ಮಳೆಯಿಂದ ರಕ್ಷಣೆ ಪಡೆಯಲು ಟಾರ್ಪಲಿನ್‌ ಹೊದಿಕೆ ಮಾಡಲಾಗಿದೆ. 2005 ರಲ್ಲಿ ನಿರ್ಮಾಣವಾಗಿದ್ದ ವಸತಿ ಗೃಹಕ್ಕೆ ಶೀಟಿನ ಮೇಲ್ಚಾವಣಿಗೆ ಮಂಜೂರಾತಿ ಹಂತದಲ್ಲಿದ್ದರೂ, ಕೋವಿಡ್‌ನಿಂದ ಕಾಮಗಾರಿ ಆಗದೆ ಇದೀಗ ಟಾರ್ಪಲ್‌ ಹೊದೆಸಲಾಗಿದೆ.

2005ರಲ್ಲಿ ನಿರ್ಮಾಣವಾದ 22 ವಸತಿ ಗೃಹದ ಕಾಂಪ್ಲೆಕ್ಸ್‌ಗೆ ಮೇಲ್ಚಾವಣಿ ಸುಸಜ್ಜಿತವಾಗಿದೆ. ಹಳೆಯ ನಾಲ್ಕು ವಸತಿಗೃಹವಿದ್ದರೂ ಹೊಸ ಕಟ್ಟಡ ನಿರ್ಮಾಣದಿಂದ ಹಳೇ ಮನೆಗಳು ಈಗ ಉಪಯೋಗಕ್ಕೆ ಇಲ್ಲವಾಗಿದೆ.

ಇದನ್ನೂ ಓದಿ:ಇನ್ನೂ ಆರಂಭವಾಗಿಲ್ಲ ಆಧಾರ ಸೇವಾ ಕೇಂದ್ರ

ಕುಡಿಯುವ ನೀರಿನ ಸಮಸ್ಯೆ: ವಿದ್ಯಾರಣ್ಯಪುರ ಗ್ರಾಪಂ ವ್ಯಾಪ್ತಿಯಲ್ಲಿರುವ ಈ ಪ್ರದೇಶವಾದರೂ ತುಂಗಾ ನದಿಯಿಂದ ಪ್ರತ್ಯೇಕ ನೀರಿನ ಸರಬರಾಜು ವ್ಯವಸ್ಥೆಯನ್ನು ಪೊಲೀಸ್‌ ಇಲಾಖೆ ಮಾಡಿಕೊಂಡಿದೆ. ಹಿಂದಿನ ಪೈಪ್‌ಲೈನ್‌ ಆಗಾಗ್ಗೆ ಒಡೆದು ಸಮರ್ಪಕ ನೀರು ಸರಬರಾಜಿಗೆ ಅಡ್ಡಿಯಾಗುತ್ತಿದೆ. ಗ್ರಾಪಂನಿಂದ ಹೊಸ ಪೈಪ್‌ಲೈನ್‌ ಭರವಸೆ ದೊರಕಿದ್ದರೂ ಇನ್ನೂ ಕಾರ್ಯಗತಗೊಂಡಿಲ್ಲ. ನದಿಯಿಂದ ನೇರವಾಗಿ
ನೀರೆತ್ತುವುದರಿಂದ ಮಳೆಗಾಲದಲ್ಲಿ ಕೆಂಬಣ್ಣದ ಕಲುಷಿತ ನೀರು ಪೂರೈಕೆಯಾಗುತ್ತದೆ. ವಸತಿಗೃಹದ ಬಳಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವಂತೆ ಶಾಸಕರಿಗೆ ಬೇಡಿಕೆ ಸಲ್ಲಿಸಿದ್ದು ಅದು ಇನ್ನೂ ಈಡೇರಿಲ್ಲ.

ಕೌಂಪಾಂಡ್‌, ಕಾಂಕ್ರೀಟ್‌ ರಸ್ತೆ: ವಸತಿ ಗೃಹಕ್ಕೆ ಕೌಂಪಾಂಡ್‌ ನಿರ್ಮಾಣ ಹಾಗೂ ಕಾಂಕ್ರೀಟ್‌ ರಸ್ತೆ, ಒಳ ಚರಂಡಿ ವ್ಯವಸ್ಥೆಯಾಗುತ್ತಿದ್ದು, ಕಾಮಗಾರಿ ನಡೆಯುತ್ತಿದೆ. ಇದರಲ್ಲೂ ಕಳಪೆ ಕಾಮಗಾರಿ ಮೇಲ್ನೋಟಕ್ಕೆ ಗೋಚರಿಸುವಂತಿದೆ. ವಸತಿ ಗೃಹದ ಬಳಿ ಅಳವಡಿಸಲಾಗಿದ್ದ
ಸೋಲಾರ್‌ ದೀಪಗಳು ಹಾಳಾಗಿದ್ದು ಬದಲಿ ವ್ಯವಸ್ಥೆ ಇನ್ನೂ ಆಗಿಲ್ಲ. ವಿದ್ಯುತ್‌ ಆಗಾಗ್ಗೆ ಕೈಕೊಡುತ್ತಿದ್ದು ಸೋಲಾರ್‌ ದೀಪ ಅಗತ್ಯವಿದೆ. ತಾಲೂಕಿಗೆ ಪೊಲೀಸ್‌ ಸಿಬ್ಬಂದಿ ವರ್ಗಾವಣೆಗೊಂಡರೂ ಬರಲು ಹಿಂದೆ ಸರಿಯುವುದರಿಂದ ಪ್ರತಿ ವರ್ಷವೂ ಒಂದಷ್ಟು ಹುದ್ದೆ ಖಾಲಿ ಇರುತ್ತದೆ. ಹಾಲಿ ಇರುವ ಸಿಬ್ಬಂದಿಗೆ ಅಗತ್ಯವಿರುವಷ್ಟು ವಸತಿಗೃಹ ಲಭ್ಯವಿದ್ದು ಎರಡು ವಸತಿ ಗೃಹ ಖಾಲಿ ಇದೆ.

ತಾಲೂಕಿನಲ್ಲಿ ವಸತಿಗೃಹದ ಸಮಸ್ಯೆ ಇಲ್ಲ. ಹಾಲಿ ಇರುವ ಸಿಬ್ಬಂದಿಗೆ ಸಾಕಾಗುವಷ್ಟು ವಸತಿಗೃಹವಿದೆ. ಕುಡಿಯುವ ನೀರಿನ ಸಮಸ್ಯೆಗೆ ವಿದ್ಯಾರಣ್ಯಪುರ ಗ್ರಾಪಂ ಹೊಸ ಪೈಪ್‌ ಅಳವಡಿಕೊಡುವುದಾಗಿ ತಿಳಿಸಿದೆ.ನಿರ್ಮಾಣವಾಗುತ್ತಿರುವ ಕಾಮಗಾರಿಯ ಬಗ್ಗೆ ಉನ್ನತ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಲಿದೆ. ಕಳಪೆಯಾದಲ್ಲಿ ಗುತ್ತಿಗೆದಾರರಿಗೆ ಬಿಲ್‌ ಪಾವತಿ ತಡೆ ಹಿಡಿಯಲಾಗುತ್ತದೆ. ಸೋಲಾರ್‌ ದೀಪ, ಶುದ್ಧ ನೀರಿನ ಘಟಕದ ಅಗತ್ಯವಿದೆ.
-ಬಿ.ಎಸ್‌. ರವಿ, ವೃತ್ತ ನಿರೀಕ್ಷಕ,
ಶೃಂಗೇರಿ ಪೊಲೀಸ್‌ ಠಾಣೆ

ಟಾಪ್ ನ್ಯೂಸ್

YOutube

Click Bite: ಹಾದಿ ತಪ್ಪಿಸಿದರೆ ವೀಡಿಯೋ ಡಿಲೀಟ್‌: ಯೂಟ್ಯೂಬ್‌!

Mandya-Sahitya

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?

KSG-Terrorist

Kasaragodu: ಸ್ಲೀಪರ್‌ ಸೆಲ್‌ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್‌

Ram Ayodhya

Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ

Joshi

ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

1-pope

Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ: ರವಿ

CT Ravi: ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

9

Chikkamagaluru: 5 ವರ್ಷದ ಮಗು ಮೇಲೆ ಬೀದಿ ನಾಯಿ ದಾಳಿ

8

Chikkamagaluru: ಪ್ರವಾಸಕ್ಕೆ ಬಂದಿದ್ದ ಶಾಲಾ ಮಕ್ಕಳ ವ್ಯಾನ್ ಪಲ್ಟಿ; ಗಾಯ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

YOutube

Click Bite: ಹಾದಿ ತಪ್ಪಿಸಿದರೆ ವೀಡಿಯೋ ಡಿಲೀಟ್‌: ಯೂಟ್ಯೂಬ್‌!

5

Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು

Mandya-Sahitya

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?

KSG-Terrorist

Kasaragodu: ಸ್ಲೀಪರ್‌ ಸೆಲ್‌ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್‌

Ram Ayodhya

Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.