ತನ್ನಂತೆ ಪರರೆಂದು ಭಾವಿಸುವುದೇ ಜೀವನ: ನಟರಾಜ್
Team Udayavani, Jul 7, 2018, 5:21 PM IST
ಚಿಕ್ಕಮಗಳೂರು: ತನ್ನಂತೆ ಪರರು ಎಂದು ಭಾವಿಸುವುದೇ ಜೀವನ ಎಂಬುದು ಮುಳ್ಳೇಗೌಡರ ಪ್ರತಿಪಾದನೆಯಾಗಿತ್ತೆಂದು ಸಾಂಸ್ಕೃತಿಕ ಚಿಂತಕ ಡಿ.ಎಚ್.ನಟರಾಜ್ ಅಭಿಪ್ರಾಯಪಟ್ಟರು.
ಸಿರಿವಾಸೆಯ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಎಸ್.ಬಿ.ಮುಳ್ಳೇಗೌಡರ 88 ನೇ ಜಯಂತಿ ಉದ್ಘಾಟಿಸಿ ಮಾತನಾಡಿದರು. ಸದಾ ಕ್ರಿಯಾಶೀಲರಾಗಿದ್ದ ಮುಳ್ಳೇಗೌಡರು ಉತ್ತಮ ಚಿಂತಕರೂ ಆಗಿದ್ದರು. ಲೌಕಿಕದ ಜೊತೆಗೆ ಪಾರಮಾರ್ಥಿಕ ಜೀವನವನ್ನು ತಮ್ಮದೇ ಆದ ರೀತಿಯಲ್ಲಿ ಅರ್ಥೈಯಿಸುತ್ತಿದ್ದರು. ಲೋಕಕ್ಕೆ ಉಪಕಾರಿಯಾಗಿ ಬದುಕಬೇಕೆಂಬುದು ಅವರ ಜೀವನ ಸಂದೇಶವಾಗಿತ್ತು. ಆಡುಮುಟ್ಟದ ಸೊಪ್ಪಿಲ್ಲ ಎಂಬಂತೆ ಮುಳ್ಳೇಗೌಡರು ದೃಷ್ಟಿ ಹರಿಸದ ಕ್ಷೇತ್ರವಿರಲಿಲ್ಲ. ಕೃಷಿ, ಪರಿಸರ, ತೋಟಗಾರಿಕೆ, ಸಹಕಾರ, ಶಿಕ್ಷಣ, ಆಡಳಿತ, ಕ್ರೀಡೆ, ಸಾರಿಗೆ, ಕಲೆ, ಧರ್ಮ ಹೀಗೆ ಹತ್ತಾರು ಕ್ಷೇತ್ರಗಳಲ್ಲಿ ಅವರ ಪರಿಶ್ರಮವನ್ನು ಗುರುತಿಸುವಂತಾಗಿದೆ ಎಂದರು.
ಪ್ರಗತಿಪರ ಕೃಷಿಕ ಚಂದ್ರಶೇಖರ ನಾರಣಾಪುರ ಮಾತನಾಡಿ, ದೇಶೀಯ ಮನಸ್ಥಿತಿಯ ಮುಳ್ಳೇಗೌಡರು ಕೃಷಿ ಕ್ಷೇತ್ರವನ್ನು ಪ್ರೀತಿಯಿಂದ ಅವಲಂಬಿಸಿದ್ದರು. ಶರಣ ಸಾಹಿತ್ಯ ಪರಿಷತ್ತಿನಲ್ಲೂ ಸಕ್ರೀಯರಾಗಿದ್ದರು. ರಾಸಾಯನಿಕಗಳ ಅತಿಯಾದ ಬಳಕೆಯ ಪರಿಣಾಮ ನಿತ್ಯ ವಿಷವನ್ನೆ ಸೇವಿಸುತ್ತಿದ್ದೇವೆಂಬ ಆತಂಕ ಅವರಲ್ಲಿತ್ತು.
ಶಿಸ್ತಿನ ಜೀವನ, ಯೋಜನೆಯೊಂದಿಗೆ ಮುನ್ನಡೆಯುವ ಕಾರ್ಯಶೈಲಿ, ಸಾವಯವ ಕೃಷಿಯ ಬಗ್ಗೆ ಆಸಕ್ತಿಯನ್ನು ಅವರಿಂದಲೇ ತಾವು ರೂಢಿಸಿಕೊಂಡಿರುವುದಾಗಿ ಹೇಳಿದರು. ಸಿರಿವಾಸೆ ಗ್ರಾ.ಪಂ.ಅಧ್ಯಕ್ಷೆ ರೂಪಾ ಕೃಷ್ಣಮೂರ್ತಿ, ನಿರ್ದೇಶಕ ಎಸ್. ಎಂ.ಪ್ರಸನ್ನಕುಮಾರ ಮಾತನಾಡಿದರು.
ವಿವೇಕಾನಂದ ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಎಂ.ಭೋಜೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ಸಿ.ಕೆ. ಚಂದ್ರಯ್ಯ, ವಿವೇಕಾನಂದ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಸ್.ಎಂ.ದೇವಣ್ಣಗೌಡ ನೂತನ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿದರು.
ಕನ್ನಡದಲ್ಲಿ ಅತಿಹೆಚ್ಚು ಅಂಕ ಪಡೆದವರಿಗಾಗಿ ಸರಾಫ್ ಕೃಷ್ಣಸ್ವಾಮಿ ದತ್ತಿನಿಧಿಯ 5,000 ರೂ. ಗಳ ನಗದು ಬಹುಮಾನವನ್ನು 122 ಅಂಕ ಗಳಿಸಿದ ಸುಷ್ಮಿತಾಗೆ ಗ್ರಾಮದ ಮುಖಂಡರಾದ ಮಂಜುನಾಥ್ ವಿತರಿಸಿದರು. ಮಾಧ್ಯಮಸಂಸ್ಕೃತಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಪ್ರಭುಲಿಂಗಶಾಸ್ತ್ರಿ, ನಿರ್ದೇಶಕರುಗಳಾದ ಕಲಾಪ್ರಸನ್ನ, ಮಲ್ಲೇಶ್, ಮಂಜಪ್ಪಗೌಡ, ಪ್ರಾಧ್ಯಾಪಕ ದಿನೇಶ್, ಕೊಳಗಾಮೆಯ ಎಸ್.ಎಂ.ನಂಜುಂಡೇಗೌಡ ವೇದಿಕೆಯಲ್ಲಿದ್ದರು. ಮುಖ್ಯಶಿಕ್ಷಕಿ ಅನುಸೂಯ ವಿಶ್ವನಾಥ್ ಸ್ವಾಗತಿಸಿ, ಶಿಕ್ಷಕಿ ಶಶಿಕಲಾ ನಿರೂಪಿಸಿ, ಶಿಕ್ಷಕ ಬಸವರಾಜ ವಂದಿಸಿದರು. ಪುಷ್ಪಾ ದಿನೇಶ್ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Chikkamagaluru: ಮೂರು ದಿನದ ಬಾಣಂತಿ ಮೃತ್ಯು; ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.