ಈ ಭಾರಿಯೂ ಕಾಫಿ ಬೆಳೆಯಲ್ಲಿ ಭಾರಿ ನಷ್ಟ ಖಚಿತ

Team Udayavani, Oct 12, 2021, 10:42 AM IST

cofee story – nk strangers

ಚಿಕ್ಕಮಗಳೂರು.ಅ.12: ಗಿಡದಲ್ಲಿ ಕಾಫಿ ಹಣ್ಣು ನಳನಳಿಸ್ತಿದೆ. ಆಕಾಶದಲ್ಲಿ ಕಡುಗಟ್ಟಿರೋ ಮೋಡ ನಿರಂತರ ಮಳೆ ಸುರಿಸುತ್ತಿದೆ. ನೆಲದಲ್ಲಿ ಶೀಥ ಹೆಚ್ಚಾಗಿದೆ. ಮಳೆ ಜೊತೆ ಹಣ್ಣು ನೆಲಕುದುರುತ್ತಿದೆ. ಬೆಳೆಗಾರರು ಗಿಡದಲ್ಲಿರೋ ಕಾಫಿಯನ್ನೂ ಉಳಿಸಿಕೊಳ್ಳೋಕು ಆಗುತ್ತಿಲ್ಲ. ಕೊಯ್ದ ಕಾಫಿಯನ್ನ ಒಣಗಿಸಿಕೊಳ್ಳೋದಕ್ಕೂ ಆಗುತ್ತಿಲ್ಲ.

ಕಾಫಿನಾಡ ಸದ್ಯದ ವಾತಾವರಣ ಮಲೆನಾಡಿಗರ ಜೀವಾಳ ಕಾಫಿ ಈ ವರ್ಷವೂ ಮಣ್ಣು ಪಾಲಾಗುತ್ತಾ ಎಂಬ ಅನುಮಾನ ದಟ್ಟವಾಗಿದೆ. ಜಿಲ್ಲೆಯಲ್ಲಿ ಅಂದಾಜು ಒಂದು ಲಕ್ಷ ಹೆಕ್ಟೇರ್‍ನಲ್ಲಿ ಅರೇಬಿಕಾ ಹಾಗೂ ರೋಬೋಸ್ಟಾ ಕಾಫಿಯನ್ನ ಬೆಳೆದಿದ್ದಾರೆ. ಆದರೆ, ಕಾಫಿ ಈ ವರ್ಷವೂ ಬೆಳೆಗಾರರ ಕೈಸೇರವುದು ಅನುಮಾನವೆನಿಸಿ ಬೆಳೆಗಾರರು ಕಂಗಾಲಾಗಿದ್ದಾರೆ.

ಯಾಕಂದ್ರೆ, ಕಾಫಿನಾಡ ಮಲೆನಾಡು ಭಾಗದಲ್ಲಿ ಕಳೆದೊಂದು ವಾರದಿಂದ ನಿರಂತರ ಮಳೆಯಾಗುತ್ತಿದೆ. ಹೀಗೆ ನಿರಂತರ ಮಳೆ ಆಗುತ್ತಿರುವುದರಿಂದ ಕೆಲ ಭಾಗದಲ್ಲಿ ಕಾಫಿ ಅವಧಿಗೆ ಮುನ್ನವೇ ಹಣ್ಣಾಗಿ ನೆಲಕುದುರುತ್ತಿದೆ. ಗಿಡದಲ್ಲೇ ಹಣ್ಣಾಗಿರೋ ಕಾಫಿಯನ್ನ ಕೊಯ್ಯೋದಕ್ಕೂ ವರುಣದೇವ ಅಡ್ಡಗಾಲಾಗಿದ್ದಾನೆ. ಇದರಿಂದ ಕಾಫಿ ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ. ಸುರಿಯೋ ಮಳೆಯಲ್ಲೇ ಕಾಫಿ ಹಣ್ಣನ್ನ ಕೊಯ್ಯುವಂತಹಾ ಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ:- ಮೂರು ವರ್ಷದಿಂದ ಜಿಲ್ಲೆಗಿಲ್ಲ ಬರ ಬಾಧೆ!

ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಸಮೀಪದ ಕಾರ್ ಬೈಲ್ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಕಾಫಿ ಬೆಳೆಗಾರರು ಈಗಾಗಲೇ ಮಳೆಯಲ್ಲೇ ಕಾಫಿ ಹಣ್ಣನ್ನ ಕೊಯ್ಯಲು ಮುಂದಾಗುತ್ತಿದ್ದಾರೆ. ಒಂದೆಡೆ ಕೂಲಿಗಾರರ ಸಮಸ್ಯೆ. ಮತ್ತೊಂದೆಡೆ ಕೊಯ್ದ ಕಾಫಿಯನ್ನ ಒಣಗಿಸಲು ಬಿಸಿಲು ಇಲ್ಲದೆ ಬೆಳೆಗಾರರು ಪರಿಪಾಟಲು ಅನುಭವಿಸುತ್ತಿದ್ದಾರೆ. ಕೆಲ ಕಾಫಿ ತೋಟದಲ್ಲಿ ಮಳೆಯಿಂದ ಕಾಫಿಯನ್ನ ಕಟಾವು ಮಾಡಲಾಗದೆ ಕೈಚೆಲ್ಲಿದ್ದಾರೆ. ಹೀಗೆ ಬಿಟ್ಟ ಕಾಫಿ ನೆಲಕ್ಕುದುರಿ ಇಡೀ ತೋಟದಾದ್ಯಂತ ಕೆಟ್ಟ ವಾಸನೆಗೆ ತಿರುಗಿದೆ. ನಿರಂತರ ಮಳೆ-ಮೋಡದಿಂದ ಬೆಳೆಗಾರರು ಹೈರಾಣಾಗಿದ್ದಾರೆ.

ಕಳೆದ ಮೂರ್ನಾಲ್ಕು ವರ್ಷದಿಂದಲೂ ಕಾಫಿ ಬೆಳೆಗಾರರ ಗೋಡಾನ್ ಸೇರಿದ್ದಕ್ಕಿಂತ ಮಣ್ಣು ಸೇರಿ ಅದೇ ತೋಟಕ್ಕೆ ಗೊಬ್ಬರವಾಗಿದ್ದೆ ಹೆಚ್ಚು. ಮಳೆಯಿಂದ ರೈತರು ಸಾಲಗಾರರಾಗಿದ್ದೇ ಜಾಸ್ತಿ. ಈ ವರ್ಷ ಮುಂಗಾರು ಆಶಾದಾಯಕವಾಗಿತ್ತು. ಕಾಫಿಗೆ ಸಕಾಲಕ್ಕೆ ಮಳೆಯಾಗಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದರು. ಆದರೆ, ಕಾಫಿನಾಡಲ್ಲಿ ವಾತಾವರಣ ಸಂಪೂರ್ಣ ಹದಗೆಟ್ಟಿದೆ. ಯಾವಾಗಂದರೆ ಆವಾಗ ಮಳೆ-ಮೋಡ-ಬಿಸಿಲಿನಿಂದ ಬೆಳೆಗಾರರು ಬಸವಳಿದಿದ್ದಾರೆ.

ಪ್ರಕೃತಿ ಮುಂದೆ ಸೋತು ಕೈಚೆಲ್ಲಿ ಕೂತಿದ್ದಾರೆ. ಮಳೆಯಲ್ಲೇ ಕಾಫಿಯನ್ನ ಕೊಯ್ಲು ಮಾಡೋಣವೆಂದರೆ ಕೂಲಿ ಕಾರ್ಮಿಕರ ಸಮಸ್ಯೆ. ಹೆಚ್ಚಿನ ಕೂಲಿ ನೀಡಿ ಕೊಯ್ಲು ಮಾಡೋದಕ್ಕೂ ಭಯ. ಮಳೆಯಲ್ಲಿ ತೊಯ್ದು-ತೊಪ್ಪೆಯಾದ ಕಾಫಿಯನ್ನ ಸಕಾಲದಲ್ಲಿ ಒಣಗಿಸಿಲ್ಲ ಅಂದರೆ ಅದೂ ಕೂಡ ಸಮಸ್ಯೆ. ಶೀಥಕ್ಕೆ ಇಟ್ಟ ಜಾಗದಲ್ಲೇ ಕೊಳೆಯುತ್ತದೆ. ಕೊಟ್ಟ ಕೂಲಿಯೂ ವ್ಯರ್ಥವಾಗುವಂತಹಾ ಸ್ಥಿತಿ ಕಾಫಿ ಬೆಳೆಗಾರರನ್ನ ಹಿಂಡಿ ಹಿಪ್ಪೆ ಮಾಡುತ್ತಿದೆ.

ಇದು ಒಬ್ಬಿಬ್ಬರ ರೈತರ ನೋವಲ್ಲ. ಕಾಫಿನಾಡ ಬಹುತೇಕ ರೈತರ ಅಳಲು. ಹಾಗಾಗಿ, ಸರ್ಕಾರ ಕೂಡಲೇ ಸಣ್ಣ ಹಾಗೂ ಮಧ್ಯಮ ವರ್ಗದ ಕಾಫಿ ಬೆಳೆಗಾರರ ನೆರವಿಗೆ ನಿಲ್ಲದಿದ್ದರೆ ಸಾವಿರಾರು ಕುಟುಂಬಗಳು ಬೀದಿಗೆ ಬೀಳೋದು ಗ್ಯಾರಂಟಿ ಎಂದು ಬೆಳೆಗಾರರ ಪರಿಸ್ಥಿತಿಯನ್ನ ಬೆಳೆಗಾರರೇ ವಿಶ್ಲೇಷಿಸಿದ್ದಾರೆ.

ಟಾಪ್ ನ್ಯೂಸ್

ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ: ರವಿ

CT Ravi: ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

1-a-bb

Pro Kabaddi: ಬೆಂಗಳೂರು ಬುಲ್ಸ್‌ ಗೆ 18ನೇ ಸೋಲು

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

“ರವಿ ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

“CT Ravi ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ: ರವಿ

CT Ravi: ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

9

Chikkamagaluru: 5 ವರ್ಷದ ಮಗು ಮೇಲೆ ಬೀದಿ ನಾಯಿ ದಾಳಿ

8

Chikkamagaluru: ಪ್ರವಾಸಕ್ಕೆ ಬಂದಿದ್ದ ಶಾಲಾ ಮಕ್ಕಳ ವ್ಯಾನ್ ಪಲ್ಟಿ; ಗಾಯ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ: ರವಿ

CT Ravi: ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

1-a-bb

Pro Kabaddi: ಬೆಂಗಳೂರು ಬುಲ್ಸ್‌ ಗೆ 18ನೇ ಸೋಲು

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.