![KSRT](https://www.udayavani.com/wp-content/uploads/2025/02/KSRT-415x249.jpg)
![KSRT](https://www.udayavani.com/wp-content/uploads/2025/02/KSRT-415x249.jpg)
Team Udayavani, Mar 3, 2019, 12:14 PM IST
ತರೀಕೆರೆ: ಪ್ರತಿಯೊಬ್ಬ ರೈತರು ತಮ್ಮ ಜಮೀನಿನ ಮಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಶಾಸಕ ಡಿ.ಎಸ್. ಸುರೇಶ್ ಹೇಳಿದರು.
ಅವರು ಪಟ್ಟಣದ ಆದಿತ್ಯ ಕಲ್ಯಾಣ ಮಂದಿರದಲ್ಲಿ ನಡೆದ ರೈತರ ತಾಲೂಕು ಮಟ್ಟದ ಕಾರ್ಯಾಗಾರದ ಅಧ್ಯಕ್ಷತೆವಹಿಸಿ ಮಾತನಾಡಿದರು. ರೈತರು ತಮ್ಮ ಜಮೀನಿನ ಮಣ್ಣಿನ ಗುಣಲಕ್ಷಣಗಳನ್ನು ತಿಳಿಯದೆ, ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಜೊತೆಗೆ ರಾಸಾಯನಿಕ ಗೊಬ್ಬರ ಬಳಸುತ್ತಿದ್ದಾರೆ. ಯಾವ ಮಣ್ಣಿಗೆ ಯಾವ ರೀತಿ ಗೊಬ್ಬರ ಕೊಡಬೇಕು ಎನ್ನುವುದನ್ನು ತಿಳಿಯದೆ ತಪ್ಪುಗಳಾಗುತ್ತಿವೆ. ಬೆಳೆಗಳಿಗೆ ಬರುವ ರೋಗಗಳಿಗೆ ಔಷಧ ಸಿಂಪರಣೆಯನ್ನು ಆಗ್ರೋ ಕೇಂದ್ರಗಳಿಂದ ತಂದು ಬೆಳೆಗಳ ಮೇಲೆ ಸಿಂಪಡಣೆ ಮಾಡುತ್ತಿದ್ದೇವೆ. ಇದು ಸರಿಯಾದ ಕ್ರಮವಲ್ಲ ಎಂದರು. ಸರಕಾರ ಹಲವಾರು ಯೋಜನೆಗಳನ್ನು ರೈತರಿಗೆ ನೀಡುತ್ತಿದೆ ಅವುಗಳನ್ನು ರೈತರು ಅರಿತು ಸೌಲಭ್ಯವನ್ನು ಪಡೆದುಕೊಳ್ಳಬೇಕು. ಕೃಷಿ ಕ್ಷೇತ್ರದಲ್ಲಿ ತಾಂತ್ರಿಕವಾಗಿ ಮುಂದೆ ಬಂದಿದ್ದೇವೆ. ಆಧುನಿಕ ಯುಗದಲ್ಲಿ ತಾಂತ್ರಿಕತೆ ಬಳಸಿಕೊಳ್ಳಬೇಕಾಗಿದೆ ಎಂದರು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಜಿಪಂ ಉಪಾಧ್ಯಕ್ಷ ಕೆ.ಆರ್.ಆನಂದಪ್ಪ, ರೈತರಿಗೆ ಭೂ ಸಂಪನ್ಮೂಲನ ಮಾಹಿತಿ ನೀಡುವ ಕಾರ್ಯಾಗಾರಗಳು ಕೇವಲ ನೆಪ ಮಾತ್ರಕ್ಕೆ ನಡೆಯಬಾರದು ಎಂದರು.
ತಾಪಂ ಅಧ್ಯಕ್ಷೆ ಪದ್ಮಾವತಿ ಭೂ ಸಂಪನ್ಮೂಲ ಮಾಹಿತಿ ಕೈಪಿಡಿ ಬಿಡುಗಡೆ ಮಾಡಿದರು. ಉಪಾಧ್ಯಕ್ಷೆ ಮಂಜುಳಾ ಮಾತನಾಡಿದರು. ಜಂಟಿ ಕೃಷಿ ನಿರ್ದೇಶಕ ಕೆ.ಎಂ. ಸೋಮಸುಂದರ್, ಉಪ ನಿರ್ದೇಶಕ ಕೃಷ್ಣಮೂರ್ತಿ, ಉಪನ್ಯಾಸಕ ಕೆ.ಟಿ.ಗುರುಮೂರ್ತಿ, ಟಿ.ಎನ್.ಚಿತ್ರಸೇನ, ಕೃಷಿಕ ಸಮಾಜದ ಪದಾಧಿ ಕಾರಿಗಳು ಇದ್ದರು.
ರೈತರು ಇಲಾಖೆಗಳ ಜೊತೆ ಸಂಪರ್ಕದಲ್ಲಿದ್ದರೆ ಮಾತ್ರ ರೈತರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ದೊರಕುತ್ತದೆ. ರೈತರು ಭೂಮಿಯಲ್ಲಿ ಬೆಳೆದಿರುವ ಬೆಳೆಗಳಿಗೆ ವೈಜ್ಞಾನಿಕ ರೀತಿಯಲ್ಲಿ ನೀರು, ಗೊಬ್ಬರ, ಔಷಧಗಳನ್ನು ಬಳಸುತ್ತಿಲ್ಲ, ತಮಗೆ ತೋಚಿದ ರೀತಿಯಲ್ಲಿ ಗೊಬ್ಬರ, ಔಷಧ ಬಳಸುತ್ತಿದ್ದಾರೆ. ಇದು ಸರಿಯಲ್ಲ
ಕೆ.ಆರ್.ಆನಂದಪ್ಪ, ಜಿಪಂ ಉಪಾಧ್ಯಕ್ಷ
You seem to have an Ad Blocker on.
To continue reading, please turn it off or whitelist Udayavani.