![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Mar 19, 2021, 8:02 PM IST
ಚಿಕ್ಕಮಗಳೂರು: ಬ್ಯಾಂಕ್ ನಕಲಿ ಸೀಲ್ ಬಳಸಿಕೊಂಡು ನಗರಸಭೆ ತೆರಿಗೆ ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡದೆ ವಂಚಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ.
ನಗರದ ಕೋಟೆ ಬಡಾವಣೆ ಯೋಗೀಶ್ ಎಂಬುವವರು ಆಸ್ತಿ ತೆರಿಗೆ ಪಾವತಿಸಲು ನಗರಸಭೆ ಬಿಲ್ ಕಲೆಕ್ಟರ್ ಶ್ಯಾಮ್ ಅವರಿಗೆ 10,300 ರೂ. ಹಣ ನೀಡಿದ್ದಾರೆ. ಶ್ಯಾಮ್ ಆ ಹಣವನ್ನು ಬ್ರೋಕರ್ ಕೇಶವ ಅವರ ಕೈಗೆ ನೀಡಿದ್ದು, ಕೇಶವ ಬ್ಯಾಂಕ್‌ನ ನಕಲಿಸೀಲ್ ಬಳಸಿಕೊಂಡು ಹಣ ಜಮೆ ಮಾಡಿದಂತೆ ತೋರಿಸಿ ನಗರಸಭೆ ಖಜಾನೆಗೆ ವಂಚಿಸಿದ್ದಾರೆ.
ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಗರಸಭೆ ಆಯುಕ್ತ ಬಸವರಾಜ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ದೂರು ದಾಖಲಿಸಿಕೊಂಡ ಪೊಲೀಸರು ನಗರಸಭೆ ಬಿಲ್‌ಕಲೆಕ್ಟರ್ ಶ್ಯಾಮ್ ಹಾಗೂ ಬ್ರೋಕರ್ ಕೇಶವನನ್ನು ವಶಕ್ಕೆ ಪಡೆದು ತನಿಖೆಗೆ ಮುಂದಾಗಿದ್ದಾರೆ. ಪ್ರಕರಣ ಬೆಳಕಿಗೆ ಬಂದದ್ದು ಹೇಗೆ? ನಗರದ ಕೋಟೆ ಬಡಾವಣೆಯ ಯೋಗೀಶ್ ಎಂಬುವರು ಆಸ್ತಿ ತೆರಿಗೆ ಪಾವತಿಸಲು ಮಾ.5ರಂದು ನಗರಸಭೆ ಬಿಲ್ ಕಲೆಕ್ಟರ್ ಶ್ಯಾಮ್ ಅವರ ಬಳಿ 10,300 ರೂ. ನೀಡಿದ್ದಾರೆ. ಶ್ಯಾಮ್ ಬ್ರೋಕರ್ ಕೇಶವ ಎಂಬಾತನಿಗೆ ಹಣ ನೀಡಿದ್ದಾನೆ. ನಂತರ ಶ್ಯಾಮ್ ತೆರಿಗೆ ಪಾವತಿ ಚಲನ್‌ನನ್ನು ಯೋಗೀಶ್ ಅವರಿಗೆ ನೀಡಿದ್ದು ಚಲನ್ ಪರಿಶೀಲನೆ ನಡೆಸಿದಾಗ ಅದರಲ್ಲಿ ಒಂದು ವಾರದ ಹಿಂದಿನ ದಿನಾಂಕ ನಮೂದಾಗಿರುವುದು ಕಂಡು ಬಂದಿದೆ.
ತಕ್ಷಣ ಎಚ್ಚೆತ್ತುಕೊಂಡ ಯೋಗೀಶ್ ಈ ವಿಚಾರವನ್ನು ನಗರಸಭೆ ಆಯುಕ್ತ ಬಸವರಾಜ್ ಗಮನಕ್ಕೆ ತಂದಿದ್ದಾರೆ. ಆಯಕ್ತರು ಪರಿಶೀಲನೆ ನಡೆಸಿದಾಗ ಬ್ಯಾಂಕ್ ನಕಲಿ ಸೀಲ್ ಬಳಸಿಕೊಂಡು ನಗರಸಭೆ ಖಾತೆಗೆ ಹಣ ಜಮೆ ಮಾಡದೆ ವಂಚಿಸಿರುವುದು ತಿಳಿದು ಬಂದಿದೆ. ಪರಿಶೀಲನೆ ವೇಳೆ ಮತ್ತೂಂದು ಇಂತದ್ದೇ ಪ್ರಕರಣ ಬೆಳಕಿಗೆ: ತೆರಿಗೆ ಪಾವತಿ ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕಾರ್ಯಪ್ರವೃತ್ತರಾದ ನಗರಸಭೆ ಸಿಬ್ಬಂದಿ ಪರಿಶೀಲನೆ ನಡೆಸುವಾಗ ಇಂತದ್ದೇ ಮತ್ತೂಂದು ಪ್ರಕರಣ ಬೆಳಕಿಗೆ ಬಂದಿದೆ. ನಗರದ ಉಪ್ಪಳ್ಳಿ ಬಡಾವಣೆಯ ನೆಹರು ನಗರದ ನಾಸೀರ್ ಉನ್ನಿಸಾ ಎಂಬುವರು 2021 ಜ.7ರಂದು 22 ಸಾವಿರ ರೂ. ಅಭಿವೃದ್ಧಿ ತೆರಿಗೆ ಪಾವತಿ ಮಾಡಿದ್ದು, ಚಲನ್ ನೀಡಲಾಗಿದೆ.
ಬ್ಯಾಂಕ್ ಖಾತೆ ಪರಿಶೀಲನೆ ನಡೆಸಿದಾಗ ಹಣ ಜಮೆಯಾಗಿರುವುದು ದಾಖಲಾಗಿಲ್ಲ, ಈ ಪ್ರಕರಣದಲ್ಲೂ ನಕಲಿ ಬ್ಯಾಂಕ್ ಸೀಲ್ ಬಳಸಿಕೊಂಡು ಹಣ ವಂಚಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ. ಪ್ರಕರಣ ಇದೇ ಮೊದಲಲ್ಲ?: ನಗರಸಭೆ ಖಾತೆಗೆ ತೆರಿಗೆ ಹಣ ಪಾವತಿ ಮಾಡದೇ ವಂಚಿಸುತ್ತಿರುವ ಪ್ರಕರಣ ಇದೇ ಮೊದಲಲ್ಲ ಎಂದು ಹೇಳಲಾಗುತ್ತಿದೆ. ಈ ಹಿಂದೆ ಪರಮೇಶ್ ಎಂಬ ಆಯುಕ್ತರು ಇದ್ದ ಸಂದರ್ಭದಲ್ಲಿ ಈ ಟೀಮ್‌ನವರು ವಂಚನೆ ಮಾಡಿ ಸಿಕ್ಕಿಬಿದಿದ್ದರು.
ಅವರಿಗೆ ಎಚ್ಚರಿಕೆ ನೀಡಿ ಕಳಿಸಿದ್ದರು ಎಂಬ ಮಾತುಗಳು ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ಅನೇಕ ವರ್ಷಗಳಿಂದ ನಗರಸಭೆ ಖಜಾನೆಗೆ ಕನ್ನ ಹಾಕಲಾಗುತ್ತಿತ್ತು ಎಂಬ ಮಾತು ಸಾರ್ವಜ ನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಕಳೆದ ದಿನಗಳಿಂದ ನಗರಸಭೆ ಆವರಣದಲ್ಲಿ ಗುಸು ಗುಸು ಶುರುವಾಗಿತ್ತು ಎನ್ನಲಾಗುತ್ತಿದೆ. ಅ ಧಿಕಾರಿಗಳು ಇಲ್ಲದ ಸಮಯದಲ್ಲಿ ಬ್ರೋಕರ್‌ಗಳ ಹಾವಳಿ: ನಗರಸಭೆಯಲ್ಲಿ ಬ್ರೋಕರ್‌ಗಳ ಹಾವಳಿ ನಡೆಯುತ್ತಿದೆ ಎಂದು ಅನೇಕ ವರ್ಷಗಳಿಂದ ಸಾರ್ವಜನಿಕರು ಆರೋಪಿಸುತ್ತಾ ಬಂದಿದ್ದರು.
ಈ ಹಿನ್ನೆಲೆಯಲ್ಲಿ ಬ್ರೋಕರ್‌ಗಳ ತಡೆಗೆ ನಗರಸಭೆ ಕಠಿಣ ಕ್ರಮ ಕೈಗೊಂಡ ಪರಿಣಾಮ ಬ್ರೋಕರ್‌ಗಳ ಹಾವಳಿಗೆ ತಡೆ ಬಿದಿತ್ತು. ಆದರೆ, ಅವರ ಆಟವನ್ನು ನಿಲ್ಲಿಸದ ಬ್ರೋಕರ್‌ಗಳು ಅ ಧಿಕಾರಿಗಳು ಕೆಲಸದ ಒತ್ತಡದಲ್ಲಿರುವ ಸಂದರ್ಭ ಮತ್ತು ಅಧಿ ಕಾರಿಗಳು ಇಲ್ಲದ ಸಂದರ್ಭವನ್ನು ಬಳಸಿಕೊಳ್ಳುತ್ತಿದ್ದರು ಎಂದು ಹೇಳಲಾಗುತ್ತಿದೆ.
You seem to have an Ad Blocker on.
To continue reading, please turn it off or whitelist Udayavani.