ಕೂಡಿ ಬಾಳಿದರೆ ಸ್ವರ್ಗ ಸುಖ: ರಂಭಾಪುರಿ ಜಗದ್ಗುರು
Team Udayavani, Oct 27, 2020, 5:05 PM IST
ಬಾಳೆಹೊನ್ನೂರು: ಮನುಷ್ಯ ಯಾವಾಗಲೂ ಸಂಘ ಜೀವಿ. ಸಂಘ ಜೀವನದಿಂದ ಸಮಾಜ ನಿರ್ಮಾಣ ಸಾಧ್ಯ. ಪರಸ್ಪರ ಅರಿತು ಬೆರೆತು ಬಾಳಿದರೆ ಜೀವನದಲ್ಲಿ ಸುಖ- ಸಮೃದ್ಧಿ- ಶಾಂತಿ ಪ್ರಾಪ್ತವಾಗುವುದೆಂದು ಶ್ರೀ ರಂಭಾಪುರಿಡಾ| ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ಭಾನುವಾರ ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದಲ್ಲಿ ಜರುಗಿದ29ನೇ ವರ್ಷದ ಸಾಂಪ್ರದಾಯಕ ಸರಳಶರನ್ನವರಾತ್ರಿ ಆಚರಣೆಯ 9ನೇ ದಿನದಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಗಳಿಸುವುದನ್ನು ಕಲಿತಂತೆ ಬದುಕುವುದನ್ನು ಕಲಿಸುವುದೇ ನಿಜವಾದ ಧರ್ಮ. ಪ್ರತಿಯೊಬ್ಬರಿಗೂ ನೀರು, ಅನ್ನಮತ್ತು ಸುಭಾಷಿತ ಎಂಬ ಮೂರುರತ್ನಗಳು ಬೇಕೇ ಬೇಕು ಎಂದರು.
ಪಾದಯಾತ್ರೆ: ಕೋವಿಡ್ ಹಿನ್ನೆಲೆಯಲ್ಲಿ ವಿಜಯ ದಶಮಿಯಂದು ಜರುಗಬೇಕಾಗಿದ್ದ ಅಡ್ಡಪಲ್ಲಕ್ಕಿ ಉತ್ಸವದ ಬದಲಾಗಿ ಪಾದ ಯಾತ್ರೆಯ ಮೂಲಕ ಬನ್ನಿ ಮಂಟಪಕ್ಕೆ ತೆರಳಿ ಶಮಿ ಪೂಜೆ ಸಲ್ಲಿಸುವುದಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ತಿಳಿಸಿದರು.
ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು ನಾಂದಿ ನುಡಿಯಲ್ಲಿ ಗುರಿ ತಲುಪಿಸಲು ಗುರು ಮಾರ್ಗದರ್ಶನದ ಅವಶ್ಯಕ ಎಂದರು.ರಂಭಾಪುರಿ ಜಗದ್ಗುರುಗಳವರ ವಿಶೇಷ ಭಾವಚಿತ್ರವನ್ನು ಬೇಲೂರ ಶಾಸಕ ಕೆ.ಎಸ್. ಲಿಂಗೇಶ್ ಅನಾವರಣಗೊಳಿಸಿದರು.
ಸಹಾಯಕ ಕಾರ್ಯಪಾಲಕ ಅಭಿಯಂತ ವಿ. ನಟರಾಜ, ಶಿವಶರಣಪ್ಪ ಸೀರಿ ಕಲಬುರ್ಗಿ ಹಾಗೂ ಅ.ಭಾ. ವೀರಶೈವ ಮಹಾಸಭಾ ಎನ್.ಅರ್.ಪುರ ತಾಲೂಕು ಘಟಕದ ಅಧ್ಯಕ್ಷ ರವಿಕುಮಾರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಪಡೆದರು. ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿ ಮಾತನಾಡಿದರು. ಬೇರುಗಂಡಿ ಬೃಹನ್ಮಠದ, ಜಕ್ಕಲಿ ಹಿರೇಮಠದ, ಕುಮಾರಪಟ್ಟಣ ಪುಣ್ಯಕೋಟಿಮಠದ, ಮಹಾರಾಷ್ಟ್ರದ ವಾಯಿಕರ್ ಶ್ರೀಗಳು ಸಮಾರಂಭದಲ್ಲಿ ಇದ್ದರು.
ಸಾತಿಕ ಶಕ್ತಿಗೆ ಗೆಲುವು ಉಂಟಾಗಲಿ: ರಂಭಾಪುರಿ ಶ್ರೀ :
ಬಾಳೆಹೊನ್ನೂರು: ಸಮಾಜದ ಎಲ್ಲ ರಂಗಗಳಲ್ಲೂ ಒಂದಿಲ್ಲ ಒಂದು ಸಂಘರ್ಷಗಳು ಸದಾ ನಡೆಯುತ್ತವೆ. ಕೆಟ್ಟದ್ದರ ವಿರುದ್ಧ ಹೋರಾಟ ಮಾಡಬೇಕಾಗುವುದು ಅನಿವಾರ್ಯ. ದುಷ್ಟ ಶಕ್ತಿಗಳು ಇಲ್ಲದಂತಾಗಿ ಸಾತ್ವಿಕ ಶಕ್ತಿಗಳಿಗೆ ಯಾವಾಗಲೂ ಗೆಲುವು ಉಂಟಾಗಬೇಕೆಂದು ಶ್ರೀ ರಂಭಾಪುರಿ ಡಾ| ಪ್ರಸನ್ನ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಸೋಮವಾರ ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದಲ್ಲಿ ಜರುಗಿದ 29ನೇ ವರ್ಷದ ಸಾಂಪ್ರದಾಯಕ ಸರಳ ಶರನ್ನವರಾತ್ರಿ ವಿಜಯ ದಶಮಿಯಂದು ಶಮಿಪೂಜೆ ಸಲ್ಲಿಸಿ ಸಿಂಹಾಸನಾರೋಹಣಗೈದು ಅವರು ಆಶೀರ್ವಚನ ನೀಡಿದರು.
ಮುಂದಿನ ವರ್ಷ ಹಾಸನ ಜಿಲ್ಲೆ
ಬೇಲೂರು ತಾಲೂಕು ಕೇಂದ್ರದಲ್ಲಿ 30ನೇ ವರ್ಷದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ಜರುಗಲಿದೆ ಎಂದುಪ್ರಕಟಪಡಿಸಿದರು. ಸಮಾರಂಭದ ನೇತೃತ್ವ ವಹಿಸಿದ್ದ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ರಂಭಾಪುರಿ ಬೆಳಗು ದಸರಾ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಶ್ರೀ ರಂಭಾಪುರಿ ಜಗದ್ಗುರುಗಳಿಗೆ ಬಿನ್ನವತ್ತಳೆಯನ್ನು ಅರ್ಪಿಸುವ ಸಂದರ್ಭದಲ್ಲಿ ಬೆಳಗೊಳದ ಬಿ.ಎ. ಶಿವಶಂಕರ, ಕಲಬುರ್ಗಿಯ ಶಿವಶರಣಪ್ಪ ಸೀರಿ, ಹರಪನಹಳ್ಳಿಯ ಎಂ. ಕೊಟ್ರೇಶಪ್ಪ ಹಾಗೂ ಶ್ರೀಪೀಠದ ಆಡಳಿತಾಧಿಕಾರಿ ಎಸ್.ಬಿ. ಹಿರೇಮಠ ಇದ್ದರು. ಕುಪ್ಪೂರು ಗದ್ದಿಗೆಮಠದ ಡಾ| ಯತೀಶ್ವರ ಶಿವಾಚಾರ್ಯ ಸ್ವಾಮಿಗಳು ನಾಂದಿ ನುಡಿ ಸೇವೆ ಸಲ್ಲಿಸಿದರು. ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ತಮ್ಮ ಸೇವಾ ನುಡಿ ನುಡಿದರು. ಮಳಲಿಮಠದ ಡಾ| ನಾಗಭೂಷಣಶಿವಾಚಾರ್ಯ ಸ್ವಾಮಿಗಳು, ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು, ಹಣ್ಣೆ ಮಠದ ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಪಾಲ್ಗೊಂಡಿದ್ದರು. ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ ಜರುಗಿತು.
ತಾವರೆಕೆರೆ ಶಿಲಾ ಮಠದ ಡಾ| ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಸ್ವಾಗತಿಸಿದರು. ಸುಪ್ರಸಿದ್ಧ ಗಾಯಕ ಗುರುಲಿಂಗಯ್ಯ ಸ್ವಾಮಿ ಹಿತ್ತಲಶಿರೂರ ಪ್ರಾರ್ಥನೆ ಹಾಡಿದರು. ಶಾಂತಾ ಆನಂದ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Baba Budan Dargah: ಗೋರಿಗಳ ಮೇಲೆ ಕುಂಕುಮ ಹಚ್ಚಿರುವ ಆರೋಪ
Naxal leader Vikram Gowda Encounter: ಕುದುರೆಮುಖ: ಶೋಧ ಕಾರ್ಯ ಚುರುಕು
Naxal: ಎನ್‌ಕೌಂಟರ್‌ಗೆ ಜಾಲತಾಣದಲ್ಲಿ ಮಾಜಿ ನಕ್ಸಲ್ ಪತ್ನಿ ಆಕ್ರೋಶ
Congress ಶಾಸಕರಿಗೆ ಬಿಜೆಪಿ ಆಫರ್; ರವಿ ಗಣಿಗ ಆರೋಪಕ್ಕೆ ಶಾಸಕ ತಮ್ಮಯ್ಯ ಸ್ಪಷ್ಟನೆ
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.