Naxal Surrender: ಕೊನೆಗೂ ಕರ್ನಾಟಕ ರಾಜ್ಯ ಸಂಪೂರ್ಣ ನಕ್ಸಲ್ ಮುಕ್ತವಾಯಿತೇ?
ಚಿಕ್ಕಮಗಳೂರು ಜಿಲ್ಲಾಡಳಿತದ ಎದುರು ಇಂದು 6 ನಕ್ಸಲರ ಶರಣಾಗತಿ, ಮಾವೋವಾದಿ-ರಾಜ್ಯ ಸರಕಾರದ ನಡುವಿನ ಮಾತುಕತೆ ಸಫಲ
Team Udayavani, Jan 8, 2025, 7:40 AM IST
ಚಿಕ್ಕಮಗಳೂರು: ದಶಕಗ ಳಿಂದ ಭೂಗತರಾಗಿದ್ದ 6 ಜನ ನಕ್ಸಲರು ಬುಧವಾರ ಸಮಾಜದ ಮುಖ್ಯವಾಹಿ ನಿಗೆ ಮರಳುವುದು ಬಹುತೇಕ ಖಚಿತ ವಾಗಿದೆ. ಇದೇ ಮೊದಲ ಬಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ನಕ್ಸಲರು ಶರಣಾಗುತ್ತಿದ್ದಾರೆ. ಈ ಮೂಲಕ ಕರ್ನಾಟಕ ನಕ್ಸಲ್ ಚಟುವಟಿಕೆ ಮುಕ್ತವಾಗಲಿದೆ.
ನಕ್ಸಲರಾದ ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರಪ್ಪ ಅರೋಲಿ, ಕೆ.ವಸಂತ್ ಹಾಗೂ ಟಿ.ಎನ್.ಜೀಶ್ ಅವರು, ಜ. 8ರಂದು ಚಿಕ್ಕಮಗಳೂರು ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಮುಂದೆ ಶರಣಾಗಲಿದ್ದಾರೆ. ಈ ನಿಟ್ಟಿನಲ್ಲಿ ನಕ್ಸಲ್ ಶರಣಾಗತಿ ಸಮಿತಿ ಹಾಗೂ ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರು ನಕ್ಸಲರು ಹಾಗೂ ರಾಜ್ಯ ಸರಕಾರದ ಜತೆ ನಡೆಸಿದ ಮಾತುಕತೆ ಸಫಲವಾಗಿದೆ ಎನ್ನಲಾಗಿದೆ.
ಮಾಜಿ ನಕ್ಸಲ್ ನೂರ್ ಜುಲ್ಫಿಕರ್ ಶ್ರೀಧರ್ ನೇತೃತ್ವದಲ್ಲಿ ಈ ಶರಣಾಗತಿ ನಡೆಯುತ್ತಿದ್ದು, ಶಾಂತಿಗಾಗಿ ನಾಗರಿಕ ವೇದಿಕೆಯ ಕೆ.ಎಲ್. ಅಶೋಕ್, ಬಿ. ಟಿ. ಲಲಿತಾನಾಯ್ಕ, ಎನ್. ವೆಂಕಟೇಶ್, ವೀರಸಂಗಯ್ಯ, ಬಂಜಗೆರೆ ಜಯ ಪ್ರಕಾಶ್, ಕೆ.ಪಿ. ಶ್ರೀಪಾಲ್ ಹಾಗೂ ಸಿರಿಮನೆ ನಾಗರಾಜ್ ಮುಂದಾಳತ್ವದಲ್ಲಿ ನಕ್ಸಲರು ಮುಖ್ಯವಾಹಿನಿಗೆ ಬರಲಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ನ. 12ರಂದು ಚಿಕ್ಕಮಗಳೂರು ಜಿಲ್ಲೆಯ ಜಯಪುರ ಸಮೀಪ ಕಡೇಗುಂದಿ ಗ್ರಾಮದ ಸುಬ್ಬಗೌಡ ಅವರ ಮನೆಗೆ ನಕ್ಸಲರು ಭೇಟಿ ನೀಡಿ ಪರಾರಿಯಾಗಿದ್ದರು. ಈ ಘಟನೆ ಬಳಿಕ ಉಡುಪಿ ಜಿಲ್ಲೆ ಕಾರ್ಕಳ ಸಮೀಪ ನಕ್ಸಲ್ ನಾಯಕ ವಿಕ್ರಮ್ ಗೌಡ ಪೊಲೀಸರ ಎನ್‌ಕೌಂಟರ್‌ಗೆ ಹತನಾದ ಬಳಿಕ ನಕ್ಸಲರ ಶರಣಾಗತಿ ವಿಚಾರ ಮುನ್ನೆಲೆಗೆ ಬಂದಿತ್ತು.
ರಾಜ್ಯ ಸರಕಾರ ಈ ಹಿಂದೆ ಘೋಷಿಸಿದ್ದ ನಕ್ಸಲ್ ಶರಣಾಗತಿ ಪ್ಯಾಕೇಜ್‌ನಡಿ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮನವಿ ಮಾಡಿತ್ತು. ಜಿಲ್ಲಾ ಪೊಲೀಸ್ ಇಲಾಖೆ ಕೂಡ ಈ ನಿಟ್ಟಿನಲ್ಲಿ ಶ್ರಮಿಸಿತ್ತು. ನಕ್ಸಲ್ ಶರಣಾಗತಿ ಸಮಿತಿ ಹಾಗೂ ಶಾಂತಿಗಾಗಿ ನಾಗರಿಕ ವೇದಿಕೆ ಕೂಡ ನಕ್ಸಲರು ಹಾಗೂ ರಾಜ್ಯ ಸರ್ಕಾರದೊಂದಿಗೆ ಹಲವು ಬಾರಿ ಚರ್ಚಿಸಿ, ಈ ನಿಟ್ಟಿನಲ್ಲಿ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಸಿದ್ಧತೆಗಳನ್ನು ನಡೆಸಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. 6 ಜನ ನಕ್ಸಲ್ ಹೋರಾಟಗಾರರು ಶರಣಾಗತಿ ಹೊಂದಿ ಮುಖ್ಯವಾಹಿನಿಗೆ ಮರಳುವ ಮುನ್ನ ಸುಮಾರು 18 ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿದ್ದಾರೆ ಎನ್ನಲಾಗಿದೆ.
ಜನಪರ ಹೋರಾಟ ನಿಲ್ಲದು: ಮುಂಡಗಾರು ಲತಾ
ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ ಆರು ಜನ ಮುಖ್ಯವಾಹಿನಿಗೆ ಬರಬೇಕೆಂದು ತೀರ್ಮಾನ ಮಾಡಿ ಎರಡು ಹಂತದ ಚರ್ಚೆ ನಡೆಸಿದ್ದೇವೆ ಎಂದು ಮುಂಡಗಾರು ಲತಾ ತಿಳಿಸಿದ್ದಾರೆ. ಸಮಿತಿಯವರು ಬಂದು ನಡೆದಿರುವ ಬೆಳವಣಿಗೆಗಳ ಬಗ್ಗೆ ತಿಳಿಸಿದ್ದಾರೆ. ಸಕಾರಾತ್ಮಕ ವಿಷಯಗಳು ಖುಷಿ ತಂದಿವೆ. ಎಲ್ಲ ಕಾಮ್ರೇಡ್‌ಗಳು ಕೂಡ ಸ್ವಾಗತಿಸುತ್ತೇವೆ ಹಾಗೂ ಜನರ ಮುಂದೆ ತೆಗೆದುಕೊಂಡು ಹೋಗಲು ಬಯಸುತ್ತೇವೆ. ನಮ್ಮ ಹಕ್ಕೊತ್ತಾಯಗಳನ್ನು ಸರಕಾರ ಈಡೇರಿಸುತ್ತದೆ ಎಂಬ ಭರವಸೆ ಇದೆ. ಜನರ ಪರವಾಗಿ ಹೋರಾಟ ಮಾಡಲು ಹಿಂಜರಿಯುವುದಿಲ್ಲ. ನಮ್ಮ ಉಸಿರಿರುವವರೆಗೂ ಭರವಸೆ ನೀಡುತ್ತೇವೆ ಎಂದು ಹೇಳಿದ್ದಾರೆ.
ಸಂಧಾನಕಾರರು ಮತ್ತು ನಕ್ಸಲರ ಜತೆ ಫೋಟೋ ವೈರಲ್
ಚಿಕ್ಕಮಗಳೂರು: ಆರು ಮಂದಿ ನಕ್ಸಲರು ಶರಣಾಗಲಿದ್ದಾರೆ ಎಂಬ ವದಂತಿ ನಡುವೆಯೇ ಅವರ ಜತೆ ನಡೆದ ಸಂಧಾನದ ಫೋಟೋಗಳು ವೈರಲ್ ಆಗಿವೆ. ನಕ್ಸಲ್ ಶರಣಾಗತಿ ಸಮಿತಿ ಹಾಗೂ ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರು ಮಂಗಳವಾರ ನಕ್ಸಲರ ಜತೆ ಅರಣ್ಯದಲ್ಲಿ ನಡೆಸಿದ್ದರೆನ್ನಲಾದ ಚರ್ಚೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ. ನಕ್ಸಲರು ಹಾಗೂ ಸರಕಾರದ ಮಧ್ಯೆ ಸೇತುವಾಗಿರುವ ಈ ಸಂಧಾನಕಾರರು ನಡೆಸಿದ ಚರ್ಚೆ ವೇಳೆ ನಕ್ಸಲರು ಕೆಲ ಬೇಡಿಕೆಗಳನ್ನು ಮುಂದಿಟ್ಟಿದ್ದು, ಸರಕಾರವೂ ಒಪ್ಪಿಗೆ ಸೂಚಿಸಿದೆ. ಹೀಗಾಗಿ ನಕ್ಸಲರ ಶರಣಾಗತಿಗೆ ವೇದಿಕೆ ಸಿದ್ಧವಾದಂತಾಗಿದೆ ಎಂದು ಹೇಳಲಾಗಿದೆ.
ಶರಣಾಗತಿ ಹಾದಿ
ಈ ಹಿಂದೆ ಸರಕಾರ ಪ್ರಕಟಿಸಿದ್ದ ನಕ್ಸಲ್ ಶರಣಾಗತಿ ಪ್ಯಾಕೇಜ್‌ನಡಿ ಈಗಾಗಲೇ ಹಾಗಲಗಂಚಿ ವೆಂಕಟೇಶ್, ಮಲ್ಲಿಕಾ, ಹೊರ್ಲೆ ಜಯ, ಸಿರಿಮನೆ ನಾಗರಾಜ್, ನೂರ್ ಶ್ರೀಧರ್, ನೀಲಗುಳಿ ಪದ್ಮನಾಭ, ಪರಶುರಾಮ, ಭಾರತಿ, ಕನ್ಯಾಕುಮಾರಿ, ಶಿವು, ಚನ್ನಮ್ಮ ಸೇರಿದಂತೆ ಒಟ್ಟು 14 ಮಂದಿ ನಕ್ಸಲರು ಸಮಾಜದ ಮುಖ್ಯವಾಹಿನಿಗೆ ಮರಳಿದ್ದಾರೆ. ಈಗ ಮತ್ತೆ ಆರು ಮಂದಿ ಒಂದೇ ಬಾರಿಗೆ ಶರಣಾಗುತ್ತಿದ್ದಾರೆ. 3 ದಶಕಗಳಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆ ನಡೆದಿತ್ತು. ಈವರೆಗೆ 10-12 ಮಂದಿ ನಕ್ಸಲರು ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾಗಿದ್ದರೆ; ನಕ್ಸಲರು ಕೂಡ ಪೊಲೀಸ್ ಬಾತ್ಮೀದಾರರು, ಪೊಲೀಸರು ಹಾಗೂ ನಾಗರಿಕರನ್ನು ಹತ್ಯೆ ಮಾಡಿದ್ದಾರೆ.
ಸರಕಾರಕ್ಕೆ 18 ಬೇಡಿಕೆಗಳ ಪಟ್ಟಿ
6 ಜನ ನಕ್ಸಲ್ ಹೋರಾಟಗಾರರು ಶರಣಾಗತಿ ಹೊಂದಿ ಮುಖ್ಯವಾಹಿನಿಗೆ ಮರಳುವ ಮುನ್ನ ಸುಮಾರು 18 ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿದ್ದಾರೆ ಎನ್ನಲಾಗಿದೆ. 3 ರಾಜ್ಯದಲ್ಲಿ ಭೂಮಿ ಇಲ್ಲದ ಪ್ರತೀ ಕುಟುಂಬಕ್ಕೆ 5 ಎಕರೆ ಕೃಷಿ ಯೋಗ್ಯ ಭೂಮಿ ಕೊಡಬೇಕು. ಭೂಮಿ ಇರುವವರಿಗೆ ಶಾಶ್ವತ ಹಕ್ಕುಪತ್ರ ಕೊಡಬೇಕು. ಆದಿವಾಸಿಗಳಿಗೆ ಭೂಮಿ ಮತ್ತು ಶಾಶ್ವತ ಹಕ್ಕುಪತ್ರ ನೀಡಬೇಕು.
ಕೃಷಿ ಯೋಗ್ಯ ಪಾಳು ಭೂಮಿಯನ್ನು ಭೂಹೀನರಿಗೆ ಹಂಚಬೇಕು. ಕಸ್ತೂರಿ ರಂಗನ್ ವರದಿ ರದ್ದುಗೊಳಿಸಬೇಕು. ಪಶ್ಚಿಮ ಘಟ್ಟದಲ್ಲಿ ಪ್ರವಾಸೋದ್ಯಮಕ್ಕಾಗಿ ಪರಿಸರ ನಾಶ ನಿಲ್ಲಿಸಬೇಕು. ನಿರುದ್ಯೋಗಿ ಯುವ ಜನಾಂಗಕ್ಕೆ ಅವರ ಅರ್ಹತೆಗೆ ತಕ್ಕಂತೆ ಸರಕಾರಿ ಉದ್ಯೋಗ ಕೊಡಬೇಕು, ಮುಖ್ಯವಾಹಿನಿಗೆ ಬಂದ 15 ದಿನಗಳೊಳಗೆ ನಮ್ಮ ಎಲ್ಲ ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ರೀತಿಯ ಚಿಕಿತ್ಸೆ ಕೊಡಿಸಬೇಕು ಎಂದು ಒತ್ತಾಯಿಸಲಾಗಿದೆ ಎಂದು ತಿಳಿದುಬಂದಿದೆ.
ಯಾರ್ಯಾರು ಶರಣಾಗತಿ?
ಮುಂಡಗಾರು ಲತಾ
ಸುಂದರಿ ಕುತ್ಲೂರು
ವನಜಾಕ್ಷಿ ಬಾಳೆಹೊಳೆ
ಮಾರಪ್ಪ ಅರೋಲಿ
ಕೆ. ವಸಂತ್
ಟಿ.ಎನ್. ಜೀಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinner Meeting: ಸಭೆ ಮಾಡಬೇಡಿ ಎನ್ನಲು ಇವರೇನು ಪರಿಶಿಷ್ಟ ಸಮುದಾಯದ ವಿರೋಧಿಗಳಾ?: ಸಚಿವ
Bengaluru: ಶಸ್ತ್ರಾಸ್ತ್ರ ತ್ಯಜಿಸಿ ಸಿಎಂ ಮುಂದೆ ಶರಣಾದ 6 ನಕ್ಸಲರು…
Raichur: ಮೂರೂ ದಶಕಗಳ ಬಳಿಕ ನಕ್ಸಲ್ ಮಾರೆಪ್ಪ ಅರೋಳಿ ಶರಣಾಗತಿ… ಕುಟುಂಬದಲ್ಲಿ ಖುಷಿ
ಹೈಕಮಾಂಡ್ ಸೂಚನೆಗೆ ಔತಣಕೂಟ ಮುಂದಕ್ಕೆ ಹಾಕಿದ್ದೇವೆ, ರದ್ದು ಮಾಡಿಲ್ಲ: ಜಿ.ಪರಮೇಶ್ವರ್
ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.