“ಜಲಧಾರೆ’ಯಲ್ಲಿ ದುಡ್ಡು ಹೊಡೆಯಲ್ಲ: ಕುಮಾರಸ್ವಾಮಿ
ಕೇಂದ್ರ ಸರ್ಕಾರಕ್ಕೆ ಈ ರಾಜ್ಯದ ಜನ ಕಟ್ಟುತ್ತಿರುವ ತೆರಿಗೆ ಹಣದಲ್ಲಿ ಎರಡನೇ ಸ್ಥಾನದಲ್ಲಿ ನಾವಿದ್ದೇವೆ.
Team Udayavani, Apr 19, 2022, 5:48 PM IST
ಚಿಕ್ಕಮಗಳೂರು: ಜಲಧಾರೆಯ ಮುಖಾಂತರ 5 ಲಕ್ಷ ಕೋಟಿ ಹಣ ನೀರಾವರಿ ಯೋಜನೆಗೆ ಬೇಕಾಗಿದ್ದು, ಐದು ವರ್ಷದಲ್ಲಿ ಇದನ್ನು ಹೊಂದಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುತ್ತೇನೆ. ಆದರೆ ಇದರಲ್ಲಿ ದುಡ್ಡು ಹೊಡೆಯುವ ಕೆಲಸ ನಾವು ಮಾಡುವುದಿಲ್ಲ. ಇದರಲ್ಲಿ ಯಾರಾದರೂ ಒಬ್ಬ ಮಂತ್ರಿ ಪರ್ಸಂಟೇಜ್ ತೆಗೆದುಕೊಂಡರೆ ಅಂತವರನ್ನು ಸಾರ್ವಜನಿಕವಾಗಿ ನೇಣಿಗೆ ಹಾಕುವಂತ ಕೆಲಸ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್ .ಡಿ. ಕುಮಾರಸ್ವಾಮಿ ಹೇಳಿದರು.
ಸೋಮವಾರ ಕಳಸ ಪಟ್ಟಣದಲ್ಲಿ ನಡೆದ “ಜನತಾ ಜಲಧಾರೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರ್ಸಂಟೇಜ್ ಕೆಲಸವನ್ನು ನಾವು ಮಾಡುವುದಿಲ್ಲ. ನಮಗೆ ಬೇಕಾಗಿದ್ದು ಹಣವಲ್ಲ ಬದಲಾಗಿ ಬದುಕಿನ ಮೂರು ದಿನದ ಆಟದಲ್ಲಿ ಶಾಶ್ವತವಾಗಿ ಜನರ ಪ್ರೀತಿಯನ್ನು ಉಳಿಸಿಕೊಳ್ಳಬೇಕು. ಅಷ್ಟೇ ನನಗೆ ಬೇಕಾಗಿರುವುದು ಎಂದರು.
ಈಗ ಮಾಡುತ್ತಿರುವ ನನ್ನ ಹೋರಾಟ ಸರ್ವ ಜನಾಂಗದ ಶಾಂತಿಯ ತೋಟ ಮಾಡಲು ಹೊರತು ಬೆಂಕಿ ಹಚ್ಚುವ ಕೆಲಸಕ್ಕೆ ಅಲ್ಲ. ಸಮಾಜ- ಸಮಾಜದ ಮಧ್ಯೆ ಸಂಘರ್ಷ ಹುಟ್ಟು ಹಾಕಿ ಬಡವರ ಬದುಕನ್ನು ಕಿತ್ತುಕೊಳ್ಳುತ್ತಿದ್ದಾರೆ. ಇಂತವರ ಜೊತೆ ಸೇರಿ ನಾನು ಸರ್ಕಾರ ಮಾಡಬೇಕಾ ಎಂದು ಪ್ರಶ್ನಿಸಿದರು.
ನೀರನ್ನು ಬಳಕೆ ಮಾಡುವುದರಲ್ಲಿ ರಾಷ್ಟ್ರೀಯ ಪಕ್ಷಗಳು ಈ ರಾಜ್ಯದ ಜನತೆಗೆ ಅನ್ಯಾಯ ಮಾಡಿದ್ದಾರೆ. ರಾಜ್ಯದಲ್ಲಿ 43 ಉಪ ನದಿಗಳಿವೆ. ಆ ನದಿಗಳ ನೀರನ್ನು ರೈತರಿಗೆ ಮತ್ತು ಪ್ರತೀ ಮನೆಗಳಿಗೆ ಶುದ್ಧವಾದ ಕುಡಿಯುವ ನೀರನ್ನು ಕೊಡುವ ಉದ್ದೇಶವೇ ಈ ಜನತಾ ಜಲಧಾರೆ ಕಾರ್ಯಕ್ರಮವಾಗಿದೆ.
ರಸ್ತೆಗಳು, ಸೇತುವೆಗಳು, ಕುಡಿಯುವ ನೀರು ಇದೆಲ್ಲ ಪ್ರಾರಂಭವಾಗಿದ್ದು ಜನತಾದಳ ಎಂಟು ವರ್ಷ ಆಡಳಿತ ಮಾಡಿದ ಸಂದರ್ಭದಲ್ಲಿ. ಗ್ರಾಮೀಣ ಪ್ರದೇಶಗಳು ಅಭಿವೃದ್ಧಿ ಕಂಡಿದ್ದೇ ಅಂದಿನಿಂದ. ಕಾಂಗ್ರೆಸ್ಸಿನ ಡಿಪಿಆರ್‌ನಲ್ಲಿ ಕಳಸ ಭದ್ರಾ ಮೇಲ್ದಂಡೆ ಯೋಜನೆ ಯಿಂದ ಕಳಸ ಮುಳುಗಡೆಯಾಗುವುದನ್ನು ಉಳಿಸಿಕೊಟ್ಟಿರುವುದು ನಾವು. ಕಳಸ ವನ್ನು ತಾಲೂಕು ಕೇಂದ್ರವನ್ನಾಗಿ ಮಾಡಿರುವುದು ನಾವು. ಇನಾಂ ಭೂಮಿಯಿಂದ ರೈತರನ್ನು ಉಳಿಸಿದ್ದು ನಾವು. ಆದರೆ ಊರಿಗೆ ಬಂದಾಗ ಪ್ರೀತಿಯಿಂದ ಮನೆ ಮಗನಂತೆ ನೋಡಿಕೊಂಡು ಪ್ರೀತಿ ತೋರಿಸ್ತೀರಿ. ಓಟು ಮಾತ್ರ ಕೊಡಲ್ಲ. ಇದು ನನ್ನ ದೌಭಾಗ್ಯ ಅಲ್ಲ. ನಾಡಿನ ಜನತೆಯ ದೌಭಾಗ್ಯ ಎಂದರು.
ಕೇಂದ್ರ ಸರ್ಕಾರಕ್ಕೆ ಈ ರಾಜ್ಯದ ಜನ ಕಟ್ಟುತ್ತಿರುವ ತೆರಿಗೆ ಹಣದಲ್ಲಿ ಎರಡನೇ ಸ್ಥಾನದಲ್ಲಿ ನಾವಿದ್ದೇವೆ. ಆದರೆ ನಮ್ಮ ರಾಜ್ಯಕ್ಕೆ ಕೊಡುತ್ತಿರುವ ಹಣ ಚೌಕಾಶಿ. ಯಾವನೋ ಕದ್ದ ಹ್ಯೂಬ್ಲೋಟ್ ವಾಚನ್ನು ಕಟ್ಟಿಕೊಂಡ ಮಾಜಿ ಮುಖ್ಯಮಂತ್ರಿಗೆ ದೇವೇಗೌಡರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ನಮ್ಮನ್ನು “ಬಿ’ ಟೀಮ್ ಎಂದು ಹೀಯಾಳಿಸುತ್ತೀರಾ. ನಮ್ಮ ಪಕ್ಷವನ್ನು ಯಾವನಿಗೋ ಗುತ್ತಿಗೆ ನೀಡಿಲ್ಲ ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಮಾತನಾಡಿ, ಚುನಾವಣೆಯ ದೃಷ್ಟಿಯಲ್ಲಿ ಈ ಕಾರ್ಯಕ್ರಮ ಮಾಡುತ್ತಿಲ್ಲ. ಧರ್ಮ, ದೇವರನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿಲ್ಲ. ಬದಲಾಗಿ ಈ ನಾಡಿ ಬಡವರ, ದೀನದಲಿತರ ಉದ್ದಾರಕ್ಕಾಗಿ ರಾಜಕೀಯ ಮಾಡುತ್ತಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನ ಕಳಸದ ಮುಖ್ಯ ರಸ್ತೆಗಳಲ್ಲಿ ಬೈಕ್‌ರ್ಯಾಲಿ ನಡೆಸಲಾಯಿತು. ಪಂಚತೀರ್ಥದಲ್ಲಿ ಒಂದಾದ ಕೋಟಿ ತೀರ್ಥದಿಂದ ನೀರನ್ನು ಸಂಗ್ರಹಿಸಿ ತರಲಾಯಿತು. ಜೆಡಿಎಸ್ ಜಿಲ್ಲಾಧ್ಯಕ್ಷ ಅಜಿತ್ ರಂಜನ್ ಕುಮಾರ್, ಕಳಸ ತಾಲೂಕು ಅಧ್ಯಕ್ಷ ಎಂ.ಬಿ. ಸಂತೋಷ್ ಹಿನಾರಿ, ಕಾರ್ಯದರ್ಶಿ ಬ್ರಹ್ಮದೇವ, ಕೆಸಿಎ ಬ್ಯಾಂಕ್ ಅಧ್ಯಕ್ಷ ಜಿ.ಕೆ. ಮಂಜಪ್ಪಯ್ಯ, ರಾಜ್ಯ ಉಪಾಧ್ಯಕ್ಷ ಜ್ವಾಲನಯ್ಯ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Chikkamagaluru: ಮೂರು ದಿನದ ಬಾಣಂತಿ ಮೃತ್ಯು; ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪ
Kottigehara: ನಿರ್ದೇಶಕ ಉಪೇಂದ್ರ ಅವರ ‘ಯುಐ’ ಚಿತ್ರದಲ್ಲಿ ಖಳನಟನಾಗಿ ನಟಿಸಿದ ಬಣಕಲ್ ನಿವಾಸಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Elephant: ಕಾಫಿನಾಡಿನಲ್ಲಿ ಕಾಡಾನೆ ನೈಟ್ ರೌಂಡ್ಸ್… ಇದು ಮುಗಿಯದ ಗೋಳು ಎಂದ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.