ಕೆಎಫ್‌ಡಿ ನಿಯಂತ್ರಣಕ್ಕೆ ಅಗತ್ಯ ಕ್ರಮ
ಪ್ರತಿ ಮನೆಗಳಿಗೂ ಚುಚ್ಚು ಮದ್ದು ಡಿಎಂಪಿ ಎಣ್ಣೆ ವಿತರಣೆ: ಡಾ| ಪ್ರಭು
Team Udayavani, Feb 12, 2020, 5:25 PM IST
ಎನ್.ಆರ್.ಪುರ: ಕೆಎಫ್‌ಡಿ ನಿಯಂತ್ರಣಕ್ಕಾಗಿ ಅನೇಕ ತಂಡಗಳನ್ನು ರಚಿಸುವುದರ ಮೂಲಕ ರೋಗ ಹರಡಂತೆ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಡಿಎಚ್‌ಒ ಡಾ| ಪ್ರಭು ಹೇಳಿದರು.
ಮಂಗಳವಾರ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಕೆಎಫ್‌ಡಿ ತಡೆಗೆ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, ಜನರು ಈ ಸಮಯದಲ್ಲಿ ಸೊಪ್ಪು, ದರುಗುಗಳನ್ನು ತರಲು ಕಾಡಿಗೆ ಹೋಗುವುದು ಜಾಸ್ತಿ. ಆದ್ದರಿಂದ ಇಲಾಖೆಯಲ್ಲಿ ಸಾಕಾಗುವಷ್ಟು ಪ್ರಮಾಣದಲ್ಲಿ ಡಿಎಂಪಿ ಎಣ್ಣೆ ಹಾಗೂ ಚುಚ್ಚು ಮದ್ದುಗಳು ಲಭ್ಯವಿದ್ದು, ಶಂಕಿತ ಪ್ರದೇಶಗಳಲ್ಲಿ ಕೆಎಫ್‌ಡಿ ತೀವ್ರತೆ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ಪ್ರತಿ ಮನೆಗಳಿಗೂ ತೆರಳಿ ಚುಚ್ಚುಮದ್ದುಗಳನ್ನು, ಡಿಎಂಪಿ ಎಣ್ಣೆ ವಿತರಿಸಲಾಗುತ್ತಿದೆ. ಈಗಾಗಲೇ ತಾಲೂಕಿನಲ್ಲಿ ಕೆಎಫ್‌ಡಿ ಪ್ರಕರಣ ಪತ್ತೆಯಾಗಿದೆ. ಆದರೆ ಇದು ಇನ್ನೂ ಹರಡದಂತೆ ಎಚ್ಚರಿಕೆ ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಇಲಾಖಾ ಅಧಿ ಕಾರಿಗಳು, ಜನಪ್ರತಿನಿಧಿಗಳ ಸಹಕಾರ ಬೇಕು. ಜನರಲ್ಲಿ ಮೊದಲು ಮಂಗನ ಕಾಯಿಲೆ ಬಗ್ಗೆ ಅರಿವನ್ನು ಮೂಡಿಸಬೇಕು.
ಕರಪತ್ರಗಳನ್ನು ಹಂಚುವ ಮೂಲಕ, ಐಇಸಿ ಚಟುವಟಿಕೆಮಾಡುವುದರ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಆನರು ಕೆಎಫ್‌ಡಿ ಬಗ್ಗೆ ಆತಂಕಪಡುವ ಅವಶ್ಯಕತೆಯಿಲ್ಲ. ಈಗಾಗಲೇ ಈ ಸೋಂಕು ಹರಡದಂತೆ ಇಲಾಖೆಯಿಂದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಜನರು ತಮಗೆ ಜ್ವರ ಬಂದಾಗ ಸ್ಥಳೀಯ ಆರೋಗ್ಯ ಕೇಂದ್ರಗಳಲ್ಲಿಯೇ ಮಾತ್ರೆಗಳನ್ನು ನುಂಗಿ, ಕಡಿಮೆಯಾಯಿತು ಎಂದು ಭಾವಿಸಬಾರದು.
ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಜ್ವರದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಸರ್ಕಾರಿ ಆಸ್ಪತ್ರೆಗೆ ಆಗಮಿಸಿ, ಅಗತ್ಯ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು. ವೈದ್ಯರು ಎಲ್ಲ ರೀತಿಯ ರಕ್ತ ಪರೀಕ್ಷೆ ಮಾಡುತ್ತಾರೆ. ಜ್ವರ ನಂತರವೂ ಕಂಡುಬಂದಲ್ಲಿ ರಕ್ತದ ಮಾದರಿಯನ್ನು ಸಂಶೋಧನಾ ಕೇಂದ್ರಕ್ಕೆ ಕಳುಹಿಸಿಕೊಡಲಾಗುತ್ತದೆ. ಈಗಾಗಲೇ ಸೋಂಕು ಕಂಡು ಬಂದಿರುವ ಮಡಬೂರು ಎಸ್ಟೇಟ್‌ಗೆ ತೆರಳಿ 39 ಜನರಿಗೆ ಚುಚ್ಚು ಮದ್ದು ನೀಡಲಾಗಿದೆ. 4 ರಿಂದ 5 ಮಕ್ಕಳು 6 ವರ್ಷಕ್ಕಿಂತ ಚಿಕ್ಕವರಾಗಿದ್ದು, ಅವರಿಗೆ ಚುಚ್ಚುಮದ್ದು ನೀಡುವುದಿಲ್ಲ. 6 ವರ್ಷ ಮೇಲ್ಪಟ್ಟ ಎಲ್ಲರಿಗೂ ಚುಚ್ಚುಮದ್ದು ನೀಡಲಾಗಿದೆ.
ಜಿಲ್ಲಾ ಆರೋಗ್ಯ ಇಲಾಖೆಯಿಂದ ಎರಡು ವಾಹನಗಳನ್ನು ಎನ್.ಆರ್.ಪುರ ತಾಲೂಕಿನ ಆರೋಗ್ಯ ಕೇಂದ್ರಕ್ಕೆ ನಿಯೋಜಿಸಿದ್ದು, ನಿಯಂತ್ರಣ ತಂಡಗಳು ಪ್ರತಿ ಮನೆ ಮನೆಗೂ ಭೇಟಿಯನ್ನು ನೀಡಲಿದ್ದು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರೂ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ರ್ಯಾಪಿಡ್ ರೆಸ್ಪಾಂಡ್ ಟೀಂ ರಚಿಸಿ ಜನರಲ್ಲಿ ಅರಿವನ್ನು ಮೂಡಿಸುವ ಕಾರ್ಯವಾಗುತ್ತಿದೆ ಎಂದರು.
ಡಾ.ಎಲ್ದೋಸ್ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿ, 1957ರಲ್ಲಿ ಶಿವಮೊಗ್ಗ ಜಿಲ್ಲೆಯ ಕ್ಯಾಸನೂರು ಎಂಬಲ್ಲಿ ಮಂಗಗಳು ಒಟ್ಟಾಗಿ ಸಾವನ್ನಪ್ಪಿದ್ದವು. ಒಂದು ಮಂಗ ಸತ್ತಿದ್ದರೆ ಸೋಂಕು ಪತ್ತೆ ಹಚ್ಚುತ್ತಿರಲಿಲ್ಲ. ಆದರೆ ನೂರಾರು ಮಂಗಳು ಸಾಮೂಹಿಕವಾಗಿ ಮರಣ ಹೊಂದಿದ್ದರಿಂದ ಈ ಬಗ್ಗೆ ಸಂಶೋಧನೆ ನಡೆಸಿದಾಗ ಮಂಗನ ಕಾಯಿಲೆ ಪತ್ತೆಯಾಗಿದೆ. ಅದಕ್ಕಾಗಿ ಈ ಸೋಂಕಿಗೆ ಕ್ಯಾಸನೂರು ಕಾಡಿನ ರೋಗ ಎಂದೇ ಹೆಸರಿಡಲಾಗಿದೆ.
ತಾಲೂಕಿಗೆ ಈಗಾಗಲೇ ಕೆಎಫ್‌ಡಿ ಪ್ರಕರಣ ಪತ್ತೆಯಾಗಿದೆ. ಇನ್ನು ಯಾರಿಗೂ ಹರಡದಂಎತ ನಾವು ಎಚ್ಚರವಹಿಸಬೇಕು ಎಂದರು. ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ.ವಿಜಯಕುಮಾರ್ ಮಾತನಾಡಿ, ಆರೋಗ್ಯ ಇಲಾಖೆಯ ರೀತಿಯಲ್ಲಿ ಪಶು ಇಲಾಖೆಯೂ ಕೂಡ ಅಗತ್ಯ ಕ್ರಮಗಳ ಬಗ್ಗೆ ಕಾರ್ಯಾಚರಣೆ ಮಾಡುತ್ತಿದೆ. ಜಾನುವಾರುಗಳ ಮೈ ಮೇಲಿನ ಹಾಗೂ ಒಣಗಿದ ದರ್ಗು, ಸೊಪ್ಪುಗಳ ಉಣ್ಣೆಯಿಂದ ಈ ಸೋಂಕು ಹರುಡುವುದರಿಂದ ಜಾನುವಾರುಗಳು ಕಾಡಿಗೆ ಹೋಗಿ ಬಂದ ಕೂಡಲೇ ಸೈಪರ್ ಮೆಥ್ರಿನ್ ಹಾಗೂ ಡೆಲ್ಟಾ ಮೆಥ್ರಿನ್ ಎಂಬ ಔಷಧ ಇಲಾಖೆಯಲ್ಲಿ ಸಾಕಾಗುವಷ್ಟು ದಾಸ್ತಾನು ಇರಿಸಲಾಗಿದ್ದು, ರೈತರಿಗೆ ವಿತರಿಸಲಾಗುತ್ತಿದೆ ಎಂದರು.
ತಹಶೀಲ್ದಾರ್ ನಾಗರಾಜ್ ಮಾತನಾಡಿ, ಕಂದಾಯ ಇಲಾಖೆ ಗ್ರಾಮಲೆಕ್ಕಿಗರಿಗೆ, ಕಂದಾಯ ನಿರೀಕ್ಷಕರಿಗೂ ಈ ಸೋಂಕಿನ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸಲು ಕರಪತ್ರ ಹಂಚಲು ಸೂಚಿಸಲಾಗಿದೆ ಎಂದರು. ತಾಪಂ ಇಒ ಎಸ್ .ನಯನ, ವೈದ್ಯಾಧಿಕಾರಿಗಳಾದ ಡಾ.ವಿನಯ್, ಡಾ| ನರಸಿಂಹಮೂರ್ತಿ, ಡಾ.ಸುರೇಶ್, ಉಪ ಅರಣ್ಯ ವಲಯಾ ಧಿಕಾರಿ ಗೌಸ್ ಹಿಯುದ್ದೀನ್, ಪ್ರಭಾರ ಬಿಇಒ ಧನಂಜಯ ಮೇದೂರು,
ಆರೋಗ್ಯ ಹಿರಿಯ ನಿರೀಕ್ಷಕರಾದ ಪಿ.ಪ್ರಬಾಕರ್, ಬೇಬಿ, ವೈ.ಲಲಿತಾ ಮತ್ತಿತರರು ಇದ್ದರು. ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
CT Ravi: ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Parliament: ಸಂಸದರ ತಳ್ಳಾಟ: ಇಂದು ಸಂಸತ್ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?
Former Supreme Court Judge ವಿ.ಸುಬ್ರಹ್ಮಣಿಯನ್ ಎನ್‌ಎಚ್‌ಆರ್‌ಸಿ ಮುಖ್ಯಸ್ಥ
Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್ ವಿವಾದಾಸ್ಪದ ಹೇಳಿಕೆ
Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್ ರೈಲು!
Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.