ಕೈಗಾರಿಕೆ ಸ್ಥಾಪಿಸದ ಭೂಮಿ ವಶಪಡಿಸಿಕೊಳ್ಳಿ
•ಅರ್ಹರಿಗೆ ಭೂಮಿ ನೀಡಲು ಅಧಿಕಾರಿಗಳಿಗೆ ಸೂಚನೆ •ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸಿ.ಟಿ.ರವಿ ಚಾಲನೆ
Team Udayavani, Jun 18, 2019, 11:01 AM IST
ಚಿಕ್ಕಮಗಳೂರು: ಕೈಗಾರಿಕಾ ವಸಾಹತುನಲ್ಲಿ ಮೂಲಭೂತ ಸೌಕರ್ಯಗಳ ವಿವಿಧ ಕಾಮಗಾರಿಗಳಿಗೆ ಶಾಸಕ ಸಿ.ಟಿ.ರವಿ ಗುದ್ದಲಿ ಪೂಜೆ ನೆರವೇರಿಸಿದರು.
ಚಿಕ್ಕಮಗಳೂರು: ಕೈಗಾರಿಕಾ ವಸಾಹತುಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಭೂಮಿ ಪಡೆದು ಕೈಗಾರಿಕೆ ಸ್ಥಾಪನೆ ಮಾಡದಿರುವ ಪ್ರಕರಣಗಳಲ್ಲಿ ಭೂಮಿಯನ್ನು ಮುಟ್ಟುಗೋಲು ಹಾಕಿಕೊಂಡು ಯುವ ಉತ್ಸಾಹಿ ಕೈಗಾರಿಕೋದ್ಯಮಿಗಳಿಗೆ ಹಂಚಿಕೆ ಮಾಡಬೇಕೆಂದು ಶಾಸಕ ಸಿ.ಟಿ.ರವಿ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಮೀಪದ ಕೈಗಾರಿಕಾ ವಸಾಹತಿನಲ್ಲಿ ಮೂಲಭೂತ ಸೌಕರ್ಯ ಒದಗಿಸಲು ವಿವಿಧ ಕಾಮಗಾರಿಗಳಿಗೆ ಸೋಮವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಸರ್ಕಾರ ನಿಯಮಕ್ಕೆ ತಿದ್ದುಪಡಿ ತಂದು ಅಥವಾ ಕಾಯ್ದೆ ರೂಪಿಸಿ ಕೈಗಾರಿಕೆ ಆರಂಭದ ಹೆಸರಿನಲ್ಲಿ ಭೂಮಿ ಪಡೆದು ಅದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ರಿಯಲ್ ಎಸ್ಟೇಟ್ ದಂಧೆಗೆ ಅವಕಾಶವಾಗದಂತೆ ತಕ್ಷಣ ಈ ಭೂ ಮಂಜೂರಾತಿಯನ್ನು ರದ್ದುಪಡಿಸಬೇಕೆಂದು ಹೇಳಿದರು.
ರಿಯಲ್ ಎಸ್ಟೇಟ್ ದಂಧೆ: ಈ ಹಿನ್ನೆಲೆಯಲ್ಲಿ ಮುಂದಿನ ಅಧಿವೇಶನದಲ್ಲಿ ವಿಷಯವನ್ನು ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದ ಶಾಸಕರು, ಜಿಲ್ಲೆಯಲ್ಲಿ ರಿಯಲ್ ಎಸ್ಟೇಟ್ ದಂಧೆ ತೀವ್ರವಾಗಿರದೇ ಇರಬಹುದು. ಆದರೆ, ಬೆಂಗಳೂರು ಹಾಗೂ ದೊಡ್ಡ ನಗರಗಳಲ್ಲಿ ಇದೊಂದು ದೊಡ್ಡ ದಂಧೆಯಾಗಿ ಮಾರ್ಪಟ್ಟಿದೆ ಎಂದು ಹೇಳಿದರು.
ಗುಣಮಟ್ಟ ಕಾಪಾಡದಿದ್ದರೆ ಕ್ರಮ: ನಗರದ ಕೈಗಾರಿಕಾ ವಸಾಹತಿನಲ್ಲಿ 2.42 ಕೋಟಿ ರೂ. ವೆಚ್ಚದಲ್ಲಿ 1,700 ಮೀಟರ್ ಡಾಂಬರು ರಸ್ತೆ ನಿರ್ಮಾಣ, 2,725 ಮೀಟರ್ ಚರಂಡಿ ದುರಸ್ತಿ, 820 ಮೀಟರ್ ಹೊಸ ಚರಂಡಿ ನಿರ್ಮಾಣ ಹಾಗೂ ನೀರು ಸರಬರಾಜು ವ್ಯವಸ್ಥೆಗೆ ಗುದ್ದಲಿ ಪೂಜೆ ನೆರವೇರಿಸಿದ್ದು, ಕಾಮಗಾರಿಯನ್ನು ಗುಣಮಟ್ಟದಲ್ಲಿ ಮಾಡದಿದ್ದರೆ ಕ್ರಮ ಕೈಗೊಳ್ಳುವುದಾಗಿ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು. ವಸಾಹತಿನಲ್ಲಿರುವ ಕೈಗಾರಿಕೋದ್ಯಮಿಗಳು ಕಾಮಗಾರಿ ಬಗ್ಗೆ ಗಮನ ಹರಿಸಿ ಲೋಪಗಳು ಕಂಡು ಬಂದಲ್ಲಿ ತಕ್ಷಣ ತಿಳಿಸಬೇಕೆಂದು ಹೇಳಿದರು.
ಜನಸಂಖ್ಯೆ ಪ್ರಗತಿಗೆ ವಿರೋಧವಲ್ಲ. ಆದರೆ, ಅದನ್ನು ಮಾನವ ಸಂಪನ್ಮೂಲವಾಗಿ ಪರಿವರ್ತಿಸಬೇಕಾಗಿದೆ. ಜನ ಒಂದು ಕಸುಬಿನಲ್ಲಿ ಪರಿಣತಿ ಪಡೆದರೆ ಆಗ ಅದು ಕೌಶಲ್ಯಪೂರ್ಣ ಸಂಪನ್ಮೂಲವಾಗುತ್ತದೆ. ಇಂದು ಕೇಂದ್ರ ಸರ್ಕಾರ ಯಾವುದೇ ಭದ್ರತೆ ಇಲ್ಲದೆ 5 ಸಾವಿರ ರೂ.ನಿಂದ 10 ಲಕ್ಷ ರೂ.ವರೆಗೆ ಮುದ್ರಾ ಯೋಜನೆಯಡಿ ಹಾಗೂ ಇನ್ನು ಕೆಲವು ಯೋಜನೆಗಳ ಮೂಲಕ 50 ಲಕ್ಷ ರೂ. ವರೆಗೆ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಸಾಲ ನೀಡುವ ವ್ಯವಸ್ಥೆ ಜಾರಿಗೆ ತಂದಿದೆ. ಇದನ್ನು ಉಪಯೋಗಿಸಿಕೊಳ್ಳಬೇಕು. ಸಾಲಕ್ಕಾಗಿ ಕೈಗಾರಿಕಾ ಯೋಜನಾ ವರದಿ ರೂಪಿಸದೇ ಕೈಗಾರಿಕಾ ಯೋಜನಾ ವರದಿ ರೂಪಿಸಿ ಸಾಲ ಪಡೆದು ಕೈಗಾರಿಕೆಗಳನ್ನು ಸ್ಥಾಪಿಸಬೇಕೆಂದು ಸಲಹೆ ಮಾಡಿದರು.
ಚತುಷ್ಪಥ ರಸ್ತೆಗೆ ಮನವಿ: ಈ ಕೈಗಾರಿಕಾ ವಸಾಹತಿನಲ್ಲಿ ಡಿಸೆಂಬರ್ ತಿಂಗಳೊಳಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಗುವುದು. ಜೂ.20ರಂದು ಚಿಕ್ಕಮಗಳೂರು-ಬೇಲೂರು-ಹಾಸನಕ್ಕೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸಂಪರ್ಕ ಖಾತೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಹಣ ಮಂಜೂರಾತಿಗೆ ಮನವಿ ಮಾಡಲಾಗುವುದು. ಚಿಕ್ಕಮಗಳೂರು-ಸಕಲೇಶಪುರ ರೈಲ್ವೆ ಮಾರ್ಗದ ಬದಲು ಯಾವುದೇ ಕಾಡು ನಾಶವಾಗದ, ಏರುತಿಟ್ಟುಗಳಿಲ್ಲದ ಸಮತಟ್ಟು ಭೂಮಿಯಲ್ಲಿ ಸಾಗುವ ಚಿಕ್ಕಮಗಳೂರು-ಬೇಲೂರು-ಹಾಸನ ರೈಲ್ವೆ ಮಾರ್ಗ ನಿರ್ಮಾಣಕ್ಕೆ ರೈಲ್ವೆ ಖಾತೆ ಸಚಿವ ಪಿಯೂಷ್ ಗೋಯೆಲ್ ಅವರನ್ನು ಸಂಸದರೊಂದಿಗೆ ಭೇಟಿ ಮಾಡಿ ಮಾರ್ಗ ಬದಲಾವಣೆಗೆ ಒತ್ತಾಯಿಸಲಾಗುವುದು ಎಂದು ಹೇಳಿದರು.
ಹೊಸ ವಸಾಹತಿಗೆ ಭೂಮಿ: ತಾಲೂಕಿನ ಕಳಸಾಪುರ, ಹಿರೇಗೌಜದಲ್ಲಿ ಅಥವಾ ಮಾಗಡಿ-ಕಳಸಾಪುರ ಮಧ್ಯದಲ್ಲಿ ಕೈಗಾರಿಕಾ ವಸಾಹತು ಸ್ಥಾಪನೆಗೆ ಭೂಮಿ ಪಡೆಯಲು ಕೈಗಾರಿಕಾ ಇಲಾಖೆ ಆಲೋಚಿಸಬೇಕು. ಈಗಾಗಲೇ ದೇವನೂರು ಸಮೀಪ ಕೈಗಾರಿಕಾ ವಸಾಹತು ನಿರ್ಮಿಸಿ ಜವಳಿ ಪಾರ್ಕ್ ನಿರ್ಮಿಸಲು ಸರ್ವೆ ಕಾರ್ಯ ಕೈಗೊಳ್ಳಲಾಗಿದೆ. ಈ ಭಾಗದ 3 ರಿಂದ 4 ಸಾವಿರಕ್ಕೂ ಹೆಚ್ಚು ಯುವಜನರು ಬೆಂಗಳೂರಿನಲ್ಲಿ ಟೆಕ್ಸ್‌ಟೈಲ್ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇಲ್ಲೇ ಪಾರ್ಕ್ ನಿರ್ಮಿಸಿದರೆ ಅವರಿಗೆ ಮನೆ ಸಮೀಪವೇ ಉದ್ಯೋಗ ನೀಡಬಹುದೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಕೈಗಾರಿಕೋದ್ಯಮಿ ಹಾಗೂ ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಮುನೀರ್ ಅಹಮ್ಮದ್, ಕೈಗಾರಿಕೋದ್ಯಮಿ ಎಂ.ಎಸ್.ಜಯರಾಮ್, ನಾಸೀರ್, ಇಂದ್ರೇಶ್, ಸುಭಾಷ್‌ಚಂದ್ರ ಭಟ್, ಇಲಾಖೆಯ ಜಂಟಿ ನಿರ್ದೇಶಕ ಗಣೇಶ್, ಸಹಾಯಕ ನಿರ್ದೇಶಕ ರವಿಕುಮಾರ್ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Chikkamagaluru: ತಾಯಿ ಮನೆಗೆ ಬರಲಿಲ್ಲ ಎಂದು ಮಾವನ ಮೇಲೆ ಮಚ್ಚು ಬೀಸಿದ ಅಳಿಯ
Chikkamagaluru: ರಾಜ್ಯ ಹೆದ್ದಾರಿ ರಸ್ತೆಯಲ್ಲಿ ರೌಂಡ್ಸ್ ಹಾಕಿದ ಒಂಟಿಸಲಗ
CT Ravi ಪರ ಪ್ರತಿಭಟನೆ: 30 ಕ್ಕೂ ಹೆಚ್ಚು ಮಂದಿಗೆ ನೋಟಿಸ್
ನೇತ್ರಾವತಿ ನದಿಯಲ್ಲಿ ಗೋಮಾಂಸ ಪತ್ತೆ ಮತಾಂಧತೆ ತೋರಿಸುತ್ತದೆ: ಸಿ.ಟಿ. ರವಿ ಕಿಡಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Editorial: ರಾಜ್ಯದ ಸರಕಾರಿ ಆಸ್ಪತ್ರೆಗಳಿಗೆ ಬೇಕಿದೆ ತುರ್ತು ಕಾಯಕಲ್ಪ
Mangaluru: ದಿಢೀರ್ ಆಗಿ ಕಾಣಿಸಿಕೊಂಡ ನಟ ಯಶ್
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
Dinner Politics: ಮುಖ್ಯಮಂತ್ರಿ ಊಟಕ್ಕೆ ಹೋದ್ರೆ ತಪ್ಪೇನಿದೆ?: ಸಚಿವ ಎಂ.ಬಿ.ಪಾಟೀಲ್
Assault: ನಾಗಮಂಗಲದಲ್ಲಿ ಎಎಸ್‌ಐಯ ಹಿಡಿದು ಎಳೆದಾಡಿ, ಹಲ್ಲೆ ಮಾಡಿದ ಆರೋಪಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.