ಮಂಚೇನಹಳ್ಳಿ ತಾಲೂಕಾಗಿ ಅಧಿಕೃತ ಘೋಷಣೆ
Team Udayavani, May 25, 2022, 3:40 PM IST
ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಹೋಬಳಿಯನ್ನು ಕೊನೆಗೂ ಸರ್ಕಾರ ಅಧಿಕೃತವಾಗಿ ತಾಲೂಕು ಕೇಂದ್ರವಾಗಿ ಘೋಷಣೆ ಮಾಡಿ ಅಧಿಸೂಚನೆ ಹೊರಡಿಸಿದೆ.
ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಹೋಬಳಿ ರಾಯನಕಲ್ಲು, ಮಿನಕನಗುರ್ಕಿ, ಶಾಂಪುರ, ವರವಾಣಿ, ಪುರಗ್ರಾಮ, ಬಿಸಿಲಹಳ್ಳಿ, ಹಳೇಹಳ್ಳಿ, ಗುಯ್ನಾಲ, ಉಪ್ಪಾರಹಳ್ಳಿ, ಜರಬಂಡಹಳ್ಳಿ ವೃತ್ತಗಳು ಮತ್ತು ಏಳು ಗ್ರಾಪಂ ಗಳು ಸೇರಿ ಮಂಚೇನಹಳ್ಳಿಯನ್ನು ತಾಲೂಕು ಕೇಂದ್ರವಾಗಿ ಸರ್ಕಾರ ಘೋಷಣೆ ಮಾಡಿದೆ.
ರಾಯನಕಲ್ಲು ವೃತ್ತದ ವ್ಯಾಪ್ತಿಯಲ್ಲಿ ರಾಯನಕಲ್ಲು, ಪೆದ್ದರಡ್ಡಿ ನಾಗೇನಹಳ್ಳಿ(ಮಜರೆ), ದಂಡಿಗಾನಹಳ್ಳಿ,ಹೊಸಹಳ್ಳಿ, ಕಂಬದಾನಹಳ್ಳಿ (ಮಜರೆ), ಕಣಗಾಣ ಕೊಪ್ಪ, ಮಂಚೇನಹಳ್ಳಿ, ಬಂಡಿರಾಮನಹಳ್ಳಿ (ಮಜರೆ), ಮಿನಕನಗುರ್ಕಿ ವೃತ್ತದಲ್ಲಿ ಎಂ ಗುಂಡ್ಲಹಳ್ಳಿ (ಮಜರೆ), ಮೈಲಗಾನಹಳ್ಳಿ (ಮಜರೆ), ಹೆಗ್ಗೇನಹಳ್ಳಿ, ಎಂ.ನಾಗೇನ ಹಳ್ಳಿ,ಶಾಂಪುರ ಗ್ರಾಮಲೆಕ್ಕಾ ಧಿಕಾರಿ ವೃತ್ತದಲ್ಲಿ ಶಾಂಪುರ, ಗುಣಿಬೀಳು (ಮಜರೆ), ಸಾದೇನಹಳ್ಳಿ (ಮಜರೆ), ಕಾಮ ಗಾನಹಳ್ಳಿ (ಮಜರೆ), ಅದ್ದೆಕೊಪ್ಪ, ಗೌಡಗೆರೆ, ವರವಾಣಿ ಗ್ರಾಮ ಲೆಕ್ಕಾಧಿಕಾರಿ ವೃತ್ತದಲ್ಲಿ ವರವಾಣಿ, ಹೊನ್ನಪ್ಪನಹಳ್ಳಿ (ಮಜರೆ), ಕಾಟನಾಗೆನ ಹಳ್ಳಿ (ಮಜರೆ), ಗಿಡ್ಡಗಾನಹಳ್ಳಿ, ಪುರ ಗ್ರಾಮ ಲೆಕ್ಕಾಧಿಕಾರಿ ವೃತ್ತದಲ್ಲಿ ಪುರ, ಭಕ್ತರಹಳ್ಳಿ (ಮಜರೆ), ಅರಕುಂದ, ಅರಸಲಬಂಡೆ, ಪಿ.ನಾಗೇನಹಳ್ಳಿ, ಕೊಡಿಗಾನಹಳ್ಳಿ, ಬಿಸಿಲಹಳ್ಳಿ ಗ್ರಾಮ ಲೆಕ್ಕಾಧಿಕಾರಿ ವೃತ್ತದಲ್ಲಿ ಬಿಸಿಲಹಳ್ಳಿ, ಬೀರಮಂಗಲ, ಕೊಂಡೇನಹಳ್ಳಿ, ರಾಯಮಾಕಲಹಳ್ಳಿ, ದ್ವಾರಗಾನಹಳ್ಳಿ, ಗುವ್ವಲಹಳ್ಳಿ, ಚೆನ್ನ ಬೈರನಹಳ್ಳಿ (ಬೇಚರಾಕ್), ಹಳೇ ಹಳ್ಳಿ ಗ್ರಾಮಲೆಕ್ಕಾಧಿಕಾರಿ ವ್ಯಾಪ್ತಿಯಲ್ಲಿ ಹಳೇಹಳ್ಳಿ, ಕಡಾ ಚಿಕ್ಕನಹಳ್ಳಿ (ಮಜರೆ), ದೇವರಕೊಂಡಹಳ್ಳಿ (ಮಜರೆ), ಕುಲುಮೇನ ಹಳ್ಳಿ(ಮಜರೆ), ನಾಗರಬಾವಿ, ಗುಯ್ಯಲ ಹಳ್ಳಿ ಗ್ರಾಮ ಲೆಕ್ಕಾಧಿಕಾರಿ ವೃತ್ತದಲ್ಲಿ ಗುಯ್ಯಲಹಳ್ಳಿ, ಬಿಕ್ಕಲಹಳ್ಳಿ (ಮಜರೆ), ಕಾಮರೆಡ್ಡಿಹಳ್ಳಿ(ಮಜರೆ), ಅಲಸ್ ತಿಮ್ಮನ ಹಳ್ಳಿ, ಬುಡುಗತ್ತಿಮ್ಮನಹಳ್ಳಿ, ವಸಂತನ ಹಳ್ಳಿ (ಬೇಚರಾಕ್), ಉಪ್ಪಾರಹಳ್ಳಿ ಗ್ರಾಮ ಲೆಕ್ಕಾಧಿಕಾರಿ ವೃತ್ತದ ವ್ಯಾಪ್ತಿಯಲ್ಲಿ ಉಪ್ಪಾರಹಳ್ಳಿ, ಬಂದಾರ‌್ಲಹಳ್ಳಿ (ಮಜರೆ), ಚೀಲನಹಳ್ಳಿ, ಚಿನ್ನನಾಗೇನಹಳ್ಳಿ, ನೇರಳಹಳ್ಳಿ (ಬೇಚರಾಕ್), ಜರಬಂಡ ಹಳ್ಳಿ ಗ್ರಾಮ ಲೆಕ್ಕಾಧಿಕಾರಿ ವೃತ್ತದಲ್ಲಿ ಜರಬಂಡಹಳ್ಳಿ, ಬಾಲರೆಡ್ಡಿಹಳ್ಳಿ, ಕಂಬಾ ಲಹಳ್ಳಿ (ಮಜರೆ), ತೇಕಲಹಳ್ಳಿ, ಪಿಡಿಚಲಹಳ್ಳಿ, ಗೊಲ್ಲಹಳ್ಳಿ, ಗೊಂಡಿಹಳ್ಳಿ (ಬೇಚರಾಕ್), ನುಲುಗುಮ್ಮನ ಹಳ್ಳಿ, ಹನು ಮಂತಪುರ, ಭೂಮನಹಳ್ಳಿ, ದಿನ್ನೇನಹಳ್ಳಿ ಒಳಗೊಂಡಂತೆ ಗ್ರಾಮಗಳನ್ನು ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಮಂಚೇನಹಳ್ಳಿ ತಾಲೂಕು ವ್ಯಾಪ್ತಿಗೆ ಸೇರಿಸಲಾಗಿದೆ.
ಅಂದುಕೊಂಡಂತೆ ಚಿಕ್ಕಬಳ್ಳಾಪುರ ಜಿಲ್ಲೆಯಚೇಳೂರು ಮತ್ತು ಮಂಚೇನಹಳ್ಳಿ ಹೋಬಳಿಯನ್ನು ತಾಲೂಕು ಕೇಂದ್ರಗಳಾಗಿ ಘೋಷಣೆ ಮಾಡಿ ಸರ್ಕಾರಸಾರ್ವಜನಿಕರಿಂದ ಆಕ್ಷೇಪಣೆ ಹಾಗೂ ಸಲಹಸೂಚನೆಗಳನ್ನು ಸ್ವೀಕರಿಸಿ ಅಧಿಕೃತವಾಗಿಅಧಿಸೂಚನೆಯನ್ನು ಸಹ ಹೊರಡಿಸಿದೆ. ಆದರೆ, ಎರಡು ತಾಲೂಕುಗಳ ರಚನೆ ಸಂಬಂಧಿಸಿದಂತೆ ಕಟ್ಟಡಗಳ ನಿರ್ಮಾಣ ಮತ್ತು ಮೂಲ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ತ್ವರಿತವಾಗಿ ಕ್ರಮಕೈಗೊಂಡು ಅಗತ್ಯ ಅಭಿವೃದ್ಧಿಗಳನ್ನು ಮಾಡಬೇಕು ಎಂದು ಸ್ಥಳೀಯ ನಾಗರಿಕರ ಆಶಯವಾಗಿದೆ.
ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಹೋಬಳಿಯನ್ನು ತಾಲೂಕುಕೇಂದ್ರವಾಗಿ ಅಧಿಕೃತವಾಗಿ ಅಧಿಸೂಚನೆ ಹೊರಡಿಸಿರುವುದಕ್ಕೆ ಸಂತಸವಾಗಿದೆ. ಈ ನಿರ್ಧಾರಕೈಗೊಂಡಿರುವ ಸರ್ಕಾರವನ್ನು ಸ್ವಾಗತಿಸುತ್ತೇನೆ. ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಅಸ್ತಿತ್ವಕ್ಕೆಬಂದಿರುವ ತಾಲೂಕು ಕೇಂದ್ರಕ್ಕೆ ಅಗತ್ಯ ಮೂಲ ಸೌಲಭ್ಯಗಳು ಅ ಧಿಕಾರಿಗಳ ನೇಮಕ, ಕಚೇರಿಗಳನ್ನು ನಿರ್ಮಾಣ ಮಾಡಿದಾಗ ಮಾತ್ರ ಆಡಳಿತ ವಿಕೇಂದ್ರೀಕರಣ ಸಾರ್ಥವಾಗುತ್ತದೆ. -ಎನ್.ಎಚ್.ಶಿವಶಂಕರರೆಡ್ಡಿ, ಶಾಸಕರು, ಗೌರಿಬಿದನೂರು ಕ್ಷೇತ್ರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.