ಮದ್ಯದಂಗಡಿ ಪರವಾನಗಿ ನವೀಕರಣಕ್ಕೆ ವಿರೋಧ
Team Udayavani, Jul 4, 2017, 12:09 PM IST
ಬೀರೂರು: ವಿವೇಚನ ರಹಿತವಾಗಿ ಅಬಕಾರಿ ಇಲಾಖೆ ಮದ್ಯದಂಗಡಿ ಪರವಾನಗಿಗಳನ್ನು ನವೀಕರಣಗೊಳಿಸುತ್ತಿದೆ ಎಂದು ಆರೋಪಿಸಿ ರೈಲ್ವೆನಿಲ್ದಾಣದ ಹತ್ತಿರ ಸೋಮವಾರ ನಾಗರಿಕರು ಪ್ರತಿಭಟನೆ ನಡೆಸಿದರು.
ಸುಪ್ರೀಂಕೋರ್ಟ್‌ನ ನಿರ್ದೇಶನದಂತೆ ಪಟ್ಟಣದಲ್ಲಿನ ಮದ್ಯದಂಗಡಿಗಳು ಮುಚ್ಚಿದ್ದು, ಬಳ್ಳಾರಿ ಕ್ಯಾಂಪಿನ ಒಂದು ಅಂಗಡಿಮಾತ್ರ ಪ್ರತಿಭಟನೆಯ ನಡುವೆಯೂ ಕಾನೂನಿನ ರಕ್ಷಣೆ ನೆಪದಲ್ಲಿ ಮುಂದುವರಿದಿದೆ. ಇದನ್ನು ಮುಚ್ಚುವಂತೆ ಪ್ರತಿಭಟನೆಗಳು ನಡೆದಿರುವ ಬೆನ್ನಲ್ಲೆ ಶನಿವಾರ ದಿಢೀರ್ ರೈಲ್ವೆ ನಿಲ್ದಾಣದ ಹತ್ತಿರ ಮದ್ಯದಂಗಡಿ ಆರಂಭಗೊಂಡಿದ್ದಕ್ಕೆ
ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ರೈಲ್ವೆ ನಿಲ್ದಾಣದ ಮುಂಭಾಗ ಮದ್ಯದ ಪರವಾನಗಿ ನೀಡಿರುವ ಅಂಗಡಿಮುಂದೆ ಜಮಾವಣೆಗೊಂಡ ಈ ಭಾಗದ ಕ್ರಿಸ್ತಶರಣ ವಿದ್ಯಾಲಯದ ಶಿಕ್ಷಕರು ಮತ್ತು ಸಿಬ್ಬಂದಿ, ಅಕ್ಕಪಕ್ಕದ ನಿವಾಸಿಗಳು, ಪುರಸಭೆ ಸದಸ್ಯರು ಸ್ಥಳಕ್ಕಾಗಮಿಸಿದ ಅಬಕಾರಿ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು.
ಜಿಲ್ಲಾಡಳಿತ ಸ್ಥಳೀಯ ಆಡಳಿತದ ಗಮನಕ್ಕೆ ತರದಂತೆ ಏಕಾಏಕಿ ನಿರ್ಧಾರಗಳನ್ನು ಕೈಗೊಂಡರೆ ನಾವೂ ಈ ಭಾಗದ ಪ್ರತಿನಿಧಿಗಳಾಗಿ ಜನರಿಗೆ ಉತ್ತರಿಸುವುದು ಹೇಗೆ ಪುರಸಭೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಕನಿಷ್ಠ ಈ ಭಾಗದ
ನಾಗರಿಕರ ಅಭಿಪ್ರಾಯ ಮತ್ತು ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ಸೂಕ್ತರೀತಿಯ ತೀರ್ಮಾನಕ್ಕೆ ಬರದೇ ಸರ್ವಾ ಧಿಕಾರಿ ಧೋರಣೆ ಅನುಸರಿಸಿ ಪರವಾನಗಿ ನೀಡಿರುವ ಅಬಕಾರಿ ಇಲಾಖೆ ಮತ್ತು ಸರ್ಕಾರದ ನಡೆ ಜನಪ್ರತಿನಿ ಧಿಗಳಿಗೆ ಮಾಡಿದ ದ್ರೋಹ ಎಂದರು. ಅಬಕಾರಿ ಅಧಿಕಾರಿ ನೌಶದ್ ಅಹಮದ್ ಖಾನ್ ಮನವಿ ಸ್ವೀಕರಿಸಿ ಈ ಕುರಿತು
ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು. ಜಿಲ್ಲಾಡಳಿತ, ಅಬಕಾರಿ ಇಲಾಖೆ ಮದ್ಯದಂಗಡಿಗಳ ಪರವಾನಗಿಯನ್ನು ವಾಪಸ್ ಪಡೆದು ಸಾರ್ವಜನಿಕರ ರಕ್ಷಣೆಗೆ ಬರದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರದ ಜೊತೆ ಉಪವಾಸ ಸತ್ಯಾಗ್ರಹ ಮಾಡಲಾಗವುದುಉ ನಿವಾಸಿಗಳು ಎಚ್ಚರಿಸಿದರು.
ಕ್ರಿಸ್ತಶರಣ ಶಾಲೆಯ ಮುಖ್ಯಸ್ಥ ತಾರಾಸೆರಾವೋ, ಶಿಕ್ಷಕರು, ಪುರಸಭೆ ಸದಸ್ಯರಾದ ಎಂ.ಪಿ.ಸುದರ್ಶನ್, ಮಾರ್ಗದಮಧು, ಎಸ್. ಎಸ್. ದೇವರಾಜ್, ಶರತ್, ಶಶಿಧರ್, ಹಾಗೂ ರೈಲ್ವೆ ರಸ್ತೆ ನಿವಾಸಿಗಳಾದ ಚಂದ್ರಶೇಖರ್,
ಶಾಮಿಲ್ ಚಂದ್ರಪ್ಪ, ಶಶಿಕುಮಾರ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.