ಶೃಂಗೇರಿ ಶಾಸಕ ರಾಜೇಗೌಡ ವಿರುದ್ಧ ಆಕ್ರೋಶ; ಪ್ರತಿಕೃತಿ ದಹನ
Team Udayavani, Jan 24, 2023, 9:18 PM IST
![1-sa-dad](https://www.udayavani.com/wp-content/uploads/2023/01/1-sa-dad-620x347.jpg)
![1-sa-dad](https://www.udayavani.com/wp-content/uploads/2023/01/1-sa-dad-620x347.jpg)
ಚಿಕ್ಕಮಗಳೂರು : ದತ್ತಪೀಠ, ಅಯೋಧ್ಯೆ ಬಗ್ಗೆ ಶೃಂಗೇರಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ವಿವಾದಾತ್ಮಕ ಹೇಳಿಕೆ ಖಂಡಿಸಿ ಎನ್.ಆರ್.ಪುರ ತಾಲೂಕಿನ ಖಾಂಡ್ಯದಲ್ಲಿ ಬಜರಂಗದಳ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ಮಾಡಲಾಯಿತು.
ನೂರಾರು ಬಜರಂಗದಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿ ಶಾಸಕ ರಾಜೇಗೌಡರ ಪ್ರತಿಕೃತಿ ದಹನ ಮಾಡಿ ಆಕ್ರೋಶ ಹೊರ ಹಾಕಿದರು.
24 ಗಂಟೆಯೊಳಗೆ ಕ್ಷಮೆಯಾಚಿಸುವಂತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಒತ್ತಾಯ ಮಾಡಿದರು. ಬಜರಂಗದಳ ನಾಳೆ(ಬುಧವಾರ) ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ.
‘ಅವರು ಮನೆ ಹಾಳರು.ರೆಕಾರ್ಡ್ ಮಾಡಿಕೊಳ್ಳ ಬೇಡಿ.ಜನರಿಗೆ ದತ್ತಮಾಲೆ ಹಾಕಿಸಿ, ಕುಂಕುಮವನ್ನು ಹಾಕಿ ಕರೆದುಕೊಂಡು ಹೋಗುತ್ತಾರೆ.ಅಯೋಧ್ಯೆ ಹೋರಾಟದಲ್ಲಿ ಲಕ್ಷಾಂತರ ಜನರನ್ನು ಬಲಿ ಕೊಟ್ಟರು, ಬಾಬ್ರಿ ಮಸೀದಿ ಕೆಡವಲು ಹೋಗಿ ಲಕ್ಷಾಂತರ ಜನರು ಬಲಿಯಾದರು, ನಾನು ಬೈಯುತ್ತೇನೆ, ಜನರನ್ನು ಕರೆದುಕೊಂಡು ಹೋಗುವವರು ಮನೆಹಾಳರು.” ಎಂದು ಅವಾಚ್ಯ ಪದಗಳಿಂದ ಹಿಂದೂಪರ ಸಂಘಟನೆಗಳನ್ನು, ಬಿಜೆಪಿಯನ್ನು ನಿಂದಿಸಿರುವ ಆಡಿಯೋ ವೈರಲ್ ಆಗಿದೆ.