75 ವರ್ಷಕ್ಕೆ ಅಧಿಕಾರ ರಾಜಕೀಯದಿಂದ ನಿವೃತ್ತಿ: ಬಿಎಸ್ ವೈಗೆ ಪರೋಕ್ಷವಾಗಿ ಕುಟುಕಿದ ಸಿ.ಟಿ ರವಿ
Team Udayavani, Oct 2, 2020, 5:14 PM IST
ಚಿಕ್ಕಮಗಳೂರು: ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ, 75 ವರ್ಷ ನಂತರ ಅಧಿಕಾರ ರಾಜಕೀಯದಿಂದ ನಿವೃತ್ತಿ ಎಂಬ ಅಲಿಖಿತ ನಿಯಮ ಬಿಜೆಪಿ ಪಕ್ಷದೊಳಗಿದೆ. ಅಲಿಖಿತ ನಿಯಮಗಳನ್ನು ಕೆಲವೊಮ್ಮೆ ಬದಲಾಯಿಸಿದ ನಿದರ್ಶನಗಳು ಇವೆ. ಅದು ಪಕ್ಷದ ವರಿಷ್ಠರ ಮಂಡಳಿ ನಿರ್ಧಾರ. ನನ್ನ ರಾಜೀನಾಮೆ ಸಂಬಂಧ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಸಚಿವ ಸ್ಥಾನದಲ್ಲಿ ಮುಂದುವರೆಯಬೇಕೆ, ಬೇಡವೇ ಎಂಬುದು ವರಿಷ್ಠರ ತೀರ್ಮಾನಕ್ಕೆ ಬಿಟ್ಟಿದ್ದು ಎಂದು ಸಚಿವ ಸಿ.ಟಿ.ರವಿ ತಿಳಿಸಿದರು.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಷ್ಟ್ರ ರಾಜಕಾರಣದ ಬಗ್ಗೆ ವೈಯಕ್ತಿಕ ನಿರೀಕ್ಷೆ ಇರಲಿಲ್ಲ, ಪಕ್ಷದ ವರಿಷ್ಠರ ಮುಂದೇ ಅಭಿಪ್ರಾಯವನ್ನು ವ್ಯಕ್ತಪಡಿಸಿರಲಿಲ್ಲ, ಅನಿರೀಕ್ಷಿತವಾಗ ಅವಕಾಶ ಬಂದಿದೆ. ನನ್ನ ಜೀವನ ರೈತಚಳುವಳಿಯಿಂದ ಆರಂಭಗೊಂಡು, ವಿದ್ಯಾರ್ಥಿ ಪರಿಷತ್‌ನಿಂದ ರಾಜಕೀಯ ಜೀವನಕ್ಕೆ ತಿರುವು ಸಿಕ್ಕಿದೆ. ಇದೇ ರೀತಿ ಅನೇಕ ತಿರುವು ಸಿಕ್ಕಿದ್ದು, ರಾಷ್ಟ್ರ ರಾಜಕೀಯದಲ್ಲಿ ಸ್ಥಾನ ಸಿಕ್ಕಿರುವುದು ನನ್ನ ಜೀವನದ ದೊಡ್ಡ ತಿರುವು ಎಂದರು.
ಇದನ್ನೂ ಓದಿ:ಆರ್.ಆರ್.ನಗರ ಮಿನಿಫೈಟ್: ಕಾಂಗ್ರೆಸ್ ನಿಂದ ಕುಸುಮಾ ರವಿ ಸೇರಿ ಮೂವರ ಹೆಸರು ಅಂತಿಮ!
ಪಕ್ಷದ ವರಿಷ್ಠರು ನಿಮ್ಮ ಆದ್ಯತೆ ಅಧಿಕಾರ ಅಥವಾ ಪಕ್ಷ ಸಂಘಟನೆ ಎಂದು ಕೇಳಿದಾಗ ಪಕ್ಷ ಸಂಘಟನೆ ಎಂದು ಹೇಳಿದ್ದೇ, ಅವರು ರಾಷ್ಟ್ರೀಯ ತಂಡದಲ್ಲಿ ನೀವು ಇರುತ್ತೀರಾ ಎಂದಿದ್ದರು. ಯಾವ ಹುದ್ದೆ ನೀಡುತ್ತಾರೆ ಎಂಬುದು ಗೊತ್ತಿರಲಿಲ್ಲ, ಇಂದು ವರಿಷ್ಠರು ದೊಡ್ಡ ಜವಬ್ದಾರಿ ನೀಡಿದ್ದಾರೆ. ಜವಾಬ್ದಾರಿ ನಿಭಾಯಿಸುವುದು ಅಷ್ಟು ಸುಲಭವಲ್ಲ ಎಂಬ ಅರಿವು ನನಗಿದೆ. ಅನಂತ್ ಕುಮಾರ್ ಅವರ ಬಳಿಕ ದೊಡ್ಡ ಹುದ್ಧೆ ಚಿಕ್ಕಮಗಳೂರಿಗೆ ದೊರಕಿರುವುದು ನನ್ನ ಸೌಭಾಗ್ಯ ಎಂದ ಅವರು ಸ್ಥಾನಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.