ರಸ್ತೆ ಅಭಿವೃದ್ಧಿಗೆ ಆದ್ಯತೆ ಕೊಡಿ
Team Udayavani, Jan 1, 2019, 11:18 AM IST
ಚಿಕ್ಕಮಗಳೂರು: ಸಂಚಾರಕ್ಕೆ ಅನುಕೂಲವಾಗಲು ನಗರ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು. ಗೌರಿ ಕಾಲುವೆಯಲ್ಲಿ ಬೀದಿ ಹಂದಿ ಮತ್ತು ನಾಯಿಗಳ ಹಾವಳಿಯನ್ನು ನಿಯಂತ್ರಿಸಬೇಕೆಂದು ಸಾರ್ವಜನಿಕರು ನಗರಸಭಾ ಅಧ್ಯಕ್ಷರು ಮತ್ತು ಆಯುಕ್ತರನ್ನು ಒತ್ತಾಯಿಸಿದರು.
ಸೋಮವಾರ ನಗರಸಭೆ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷೆ ಶಿಲ್ಪಾರಾಜಶೇಖರ ಅಧ್ಯಕ್ಷತೆಯಲ್ಲಿ ಎರಡನೆಯ ಹಂತದ ಬಜೆಟ್ ಪೂರ್ವ ಸಿದ್ಧತಾ ಸಾರ್ವಜನಿಕ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಡಾ| ಸುಂದರ್ ಗೌಡ ರಸ್ತೆ ಅಭಿವೃದ್ಧಿ ಪಡಿಸಲು ಮುಂದಾಗುವಂತೆ ಸಲಹೆ ನೀಡಿದರು.
ಹಿರಿಯ ನಾಗರಿಕ ನಂಜುಂಡರಾವ್ ಮಾತನಾಡಿ, ನಗರದಲ್ಲಿರುವ ಪಾರ್ಕ್‌ಗಳ ಅಭಿವೃದ್ಧಿಗೆ ಸ್ಥಳೀಯವಾಗಿ 5 ಜನರ ಸಮಿತಿ ರಚಿಸಬೇಕು. ಇದರಿಂದ ಉದ್ಯಾನವನ ಸ್ವತ್ಛತೆ ಸ್ವತ್ಛವಾಗುವುದರೊಂದಿಗೆ ನಗರಸಭೆಗೂ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಗೌರಿಕಾಲುವೆಯಲ್ಲಿ ಹಂದಿ, ಸೊಳ್ಳೆ, ಮತ್ತು ಬೀದಿನಾಯಿಗಳ ಹಾವಳಿ ಅಧಿ ಕವಾಗಿದೆ. ಈ ಬಡಾವಣೆ ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದ್ದು, ಮಾರಣಾಂತಿಕ ಕಾಯಿಲೆಗಳು ಹರಡುವ ಸಾಧ್ಯತೆ ಇವೆ ಎಂದು ನಾಗರಿಕರೊಬ್ಬರು ಆತಂಕ ವ್ಯಕ್ತಪಡಿಸಿದರು.
ಈ ಪ್ರದೇಶದಲ್ಲಿ ಮನೆಗಳಲ್ಲಿ ನಡೆಯುವ ಸಭೆ ಸಮಾರಂಭಗಳ ಊಟದ ತಟ್ಟೆ, ಲೋಟ ಮತ್ತು ಕಸವನ್ನು ರಾಜಕಾಲುವೆಗೆ ಸುರಿಯಲಾಗುತ್ತಿದೆ. ಇದನ್ನು ತಪ್ಪಿಸಬೇಕು. ತಿಲಕ್ ಪಾರ್ಕನ್ನು ಅಭಿವೃದ್ಧಿ ಪಡಿಸಬೇಕು, ವಿಜಯಪುರ ಮತ್ತು ತಿಲಕ್‌ಪಾರ್ಕ್ ಬಳಿ ಪೋಲಿ ಹುಡುಗರ ಕಾಟ ಹೆಚ್ಚಾಗಿದೆ ಎಂದು ಹೇಳಿದರು.
ನಗರದ ಅಭಿವೃದ್ಧಿಗೆ ಸಾರ್ವಜನಿಕರು ಸಹಕಾರ ನೀಡಬೇಕೆಂದು ಮನವಿ ಮಾಡಿದ ನಗರಸಭೆ ಅಧ್ಯಕ್ಷೆ ಶಿಲ್ಪಾರಾಜಶೇಖರ್, ನಗರಕ್ಕೆ 24 ಗಂಟೆ ನೀರು ನೀಡಲು ಅಮೃತ್ ಯೋಜನೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಮುಖ್ಯರಸ್ತೆಯ ಪೈಪ್‌ಲೈನ್ ಕೆಲಸ ಮುಗಿದ ತಕ್ಷಣ ಕೆಲವು ವಾರ್ಡ್‌ಗಳಿಗೆ ನೀರು ನೀಡಲಾಗುವುದು. 6 ತಿಂಗಳೊಳಗೆ ಸಂಪೂರ್ಣ ಕಾಮಗಾರಿ ಮುಗಿಯಲಿದೆ ಎಂದು ತಿಳಿಸಿದರು.
ನಗರಸಭೆ ವ್ಯಾಪ್ತಿಯಲ್ಲಿರುವ ಎಂ.ಜಿ.ರಸ್ತೆ, ಐ.ಜಿ.ರಸ್ತೆ, ರತ್ನಗಿರಿ ರಸ್ತೆ ಹಾಗೂ ಅಂಬೇಡ್ಕರ್ ರಸ್ತೆಗಳಲ್ಲಿ ನಿಲ್ಲಿಸುವ 4 ಚಕ್ರ ವಾಹನಗಳ ಪಾರ್ಕಿಂಗ್‌ಗೆ ಒಂದು ಗಂಟೆಗೆ 10 ರೂ. ನಂತರ ಒಂದೊಂದು ಗಂಟೆಗೆ 5 ರೂ. ನಂತೆ ಶುಲ್ಕ ವಸೂಲಾತಿ ಮಾಡಲು ಟೆಂಡರ್ ಕರೆಯಲಾಗುವುದು ಎಂದರು. ನಗರಸಭೆ ಆಯುಕ್ತೆ ತುಷಾರಮಣಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudigere; ಕಾಫಿ ಎಸ್ಟೇಟ್ ನಲ್ಲಿ ಕಾಡುಕೋಣ ದಾಳಿ: ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೃ*ತ್ಯು
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Naxal ಶರಣಾಗತಿ; ಚಿಕ್ಕಮಗಳೂರು ಡಿಸಿ ಕಚೇರಿ ಸುತ್ತಮುತ್ತ ಬಿಗಿ ಭದ್ರತೆ
Kadur; ತಾಲೂಕು ವೈದ್ಯಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
Naxal Surrender: ಕೊನೆಗೂ ಕರ್ನಾಟಕ ರಾಜ್ಯ ಸಂಪೂರ್ಣ ನಕ್ಸಲ್ ಮುಕ್ತವಾಯಿತೇ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.