ರಾಗಿ ಖರೀದಿ ಹಣ ಶೀಘ್ರ ವಿಲೇವಾರಿ: ನೀಲಕಂಠಪ್ಪ
Team Udayavani, Jul 10, 2021, 3:20 PM IST
ಕಡೂರು: ತಾಲೂಕಿನ ರೈತರು ರಾಗಿ ಖರೀದಿ ಕೇಂದ್ರಕ್ಕೆ ನೀಡಿರುವ ರಾಗಿಯ ಹಣ ಈಗಾಗಲೇ ಸಾವಿರಾರು ರೈತರ ಖಾತೆಗೆ ಬಂದಿದೆ. ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಉಳಿದ ಹಣ ರೈತರಿಗೆ ಸಿಗುವುದು ತಡವಾಗಿದ್ದು ಶೀಘ್ರವೇ ರೈತರ ಖಾತೆಗೆ ಹಣ ವಿಲೇವಾರಿಯಾಗಲಿದೆ ಎಂದು ಬಿಜೆಪಿ ಮುಖಂಡ ಜಿಗಣೆಹಳ್ಳಿ ನೀಲಕಂಠಪ್ಪ ಹೇಳಿದರು.
ಪಟ್ಟಣದ ಸುರುಚಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ 9 ಜಿಲ್ಲೆಗಳಲ್ಲಿ ರಾಗಿ ಖರೀದಿ ಕೇಂದ್ರ ತೆರೆಯಲಾಗಿದೆ. ಅದೇ ರೀತಿ ಶಾಸಕ ಬೆಳ್ಳಿಪ್ರಕಾಶ್‌ಅವರ ಒತ್ತಾಯದೊಂದಿಗೆ ಕಡೂರು ಎಪಿಎಂಸಿ ಆವರಣದಲ್ಲಿ ರಾಗಿ ಖರೀದಿ ಕೇಂದ್ರ ತೆರೆಯಲಾಗಿತ್ತು. ಕಡೂರು ರಾಗಿ ಖರೀದಿ ಕೇಂದ್ರದಲ್ಲಿ ಇದುವರೆಗೂ 18,619 ರೈತರಿಂದ 56 ಲಕ್ಷ ಕ್ವಿಂಟಾಲ್ ರಾಗಿ ಖರೀದಿಸಲಾಗಿದೆ. ರೈತರಿಗೆ ಸುಮಾರು 11 ಕೋಟಿ 79 ಲಕ್ಷ ಹಣವನ್ನು ಮಾರುಕಟ್ಟೆ ಪೆಡರೇಷನ್ ನೀಡಬೇಕಾಗಿದ್ದು ಈಗಾಗಲೇ ಮಾರ್ಚ್ ಅಂತ್ಯಕ್ಕೆ 5,849 ರೈತರ ಖಾತೆಗೆ 63 ಕೋಟಿ ಹಣ ಸಂದಾಯವಾಗಿದೆ ಎಂದರು.
ಕೊರೊನಾ ಮಹಾಮಾರಿ ಮತ್ತು ಮಾರುಕಟ್ಟೆಯ ಸ್ಥಳೀಯ ಲೆಕ್ಕ ನೋಡಿಕೊಳ್ಳುತ್ತಿದ್ದ ವ್ಯವಸ್ಥಾಪಕ ಕೊರೊನಾದಿಂದ ಮೃತಪಟ್ಟಿದ್ದರ ಪರಿಣಾಮ ಉಳಿದ ರೈತರ ಖಾತೆಗೆ ಹಣ ಬರುವುದು ತಡವಾಗಿದ್ದು ಇದನ್ನು ಅರಿತ ಶಾಸಕ ಹಾಗೂ ರಾಜ್ಯ ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷ ಬೆಳ್ಳಿಪ್ರಕಾಶ್ ಅವರು ರಾಜ್ಯಸಹಕಾರ ಮಾರುಕಟ್ಟೆಯ ಫೆಡರೇಷನ್ ಅಧ್ಯಕ್ಷ ರಾಜೇಂದ್ರ ಕುಮಾರ್ ಹಾಗೂ ರಾಜ್ಯ ಉಪ ಸಂಪುಟ ಸಭೆಯಲ್ಲಿ ಬಾಕಿ ಹಣ ನೀಡಲು ಮಾಡಿದ ಮನವಿಗೆ ಸ್ಪಂದಿಸಿದ ಸರಕಾರ ಮತ್ತು ಫೆಡರೇಷನ್ ಅಧ್ಯಕ್ಷರು ಶೀಘ್ರವೇ ಬಾಕಿ ಇರುವ 12,770 ರೈತರಿಗೆ 125 ಕೋಟಿ ಹಣವನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದು ಅತಿ ಶೀಘ್ರವೇ ಹಣ ರೈತರ ಖಾತೆಗೆ ಜಮಾ ಆಗಲಿದೆ ಎಂದರು.
ಅನೇಕರು ಜಿಲ್ಲಾಧಿಕಾರಿಗಳಿಗೆ ರಾಜ್ಯ ಮಾರುಕಟ್ಟೆ ಫೆಡರೇಷನ್‌ಗೆ ದೂರು ನೀಡಿ ಹಣ ಬಿಡುಗಡೆ ಮಾಡಲು ಹೋರಾಟ ಮಾಡುತ್ತಿದ್ದೇವೆ ಎಂಬ ಪ್ರಚಾರ ಪಡೆಯುತ್ತಿದ್ದಾರೆ. ಶಾಸಕ ಬೆಳ್ಳಿಪ್ರಕಾಶ್ ಯಾವುದೇ ಪ್ರಚಾರವಿಲ್ಲದೇ ಹಣಬಿಡುಗಡೆಗೆ ತಮ್ಮದೇ ಆದ ರೀತಿಯಲ್ಲಿ ರೈತರಿಗೆ ನ್ಯಾಯ ನೀಡಲು ಮುಂದಾಗಿರುವುದನ್ನು ತಾಲೂಕಿನ ರೈತರ ಪರವಾಗಿ ಶ್ಲಾಘಿಸುತ್ತೇವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
Chikkamagaluru: ಕೇರಳದಿಂದ “ಸುರಕ್ಷಿತ’ ಮಲೆನಾಡಿನತ್ತ “ನಕ್ಸಲರು’?
Naxalite: ಮಲೆನಾಡಿಗೆ ನಕ್ಸಲರ ಭೇಟಿ ದೃಢ; 3 ಬಂದೂಕು-ಮದ್ದುಗುಂಡು ವಶ
ಚಿಕಿತ್ಸೆಗೆಂದು ಬಂದಿದ್ದ ರೋಗಿ ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರ ಆರೋಪ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.