ಮಾತೃಭಾಷೆಗೆ ಗೌರವ ಸಲ್ಲಿಸಿ: ಬೆಳ್ಳಿ ಪ್ರಕಾಶ್
Team Udayavani, Nov 2, 2020, 6:51 PM IST
ಕಡೂರು: ಮಾತೃಭಾಷೆಗೆ ಪ್ರತಿಯೊಬ್ಬರೂ ಗೌರವ ಸಲ್ಲಿಸಬೇಕು ಎಂದು ಶಾಸಕ ಬೆಳ್ಳಿಪ್ರಕಾಶ್ ಹೇಳಿದರು.
ಪಟ್ಟಣದ ಡಾ| ಬಿ.ಆರ್. ಅಂಬೇಡ್ಕರ್ ತಾಲೂಕು ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಏರ್ಪಡಿಸಿದ್ದ 65ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜನ್ಮ ಕೊಟ್ಟ ತಾಯಿಯನ್ನು ಮರೆಯಬಾರದು. ಹಾಗೆಯೇ ನೆಲೆ ನೀಡಿದ ಭೂಮಿಯನ್ನೂ ಮರೆಯಬಾರದು. ಈ ಎರಡೂ ಸದಾ ಗೌರವಿಸಲ್ಪಡುವ, ಆದರಿಸಲ್ಪಡುವ ಹಾಗೂ ಸ್ಮರಣೆಗೆಅರ್ಹವಾಗಿರುವ ಸಂಗತಿಗಳು ಎಂದು ಸೂಚ್ಯವಾಗಿ ತಿಳಿಸಿದರು.
ಕನ್ನಡ ಮತ್ತು ಕನ್ನಡತನ ನಮ್ಮಲ್ಲಿ ಬೆಳೆಯಲು ಜತೆಗೆ ಕನ್ನಡ ನಾಡನ್ನು ಸದೃಢವಾಗಿ ಕಟ್ಟಲುಶ್ರಮಿಸಿದ ಪ್ರತಿಯೊಬ್ಬರೂ ಅಭಿನಂದನಾರ್ಹರು. ಪರಭಾಷಿಗರಿಗೆ ಕನ್ನಡ ನೆಲದಲ್ಲಿ ಹೃದಯ ಶ್ರೀಮಂತಿಕೆ ದೊರಕುತ್ತಿದೆ. ಕನ್ನಡಿಗರ ವಿಶಾಲ ಹೃದಯದ ಮನಸ್ಸುಬಹುದೊಡ್ಡ ಸ್ಥಾನ ಪಡೆದಿದೆ ಎಂದು ಹೇಳಿದರು.
ರಾಷ್ಟ್ರ ದ್ವಜಾರೋಹಣ ನೆರವೇರಿಸಿದ ತಹಶೀಲ್ದಾರ್ ಡಾ| ಕಾಂತರಾಜ್ ಮಾತನಾಡಿ, ಕೋವಿಡ್ ಕರಿನೆರಳಿನಲ್ಲೂ, ಉತ್ತರ ಕರ್ನಾಟಕದಲ್ಲಿ ಕಾಡುತ್ತಿರುವ ಜಲಪ್ರಳಯ ಸಂದರ್ಭದಲ್ಲಿಯೂ ಮಾತೃ ಭಾಷೆಗೆ ಧಕ್ಕೆಯಾಗದಂತೆ ಕನ್ನಡಿಗರು ನಾಡು- ನುಡಿಯನ್ನು ಉಳಿಸಿ ಬೆಳೆಸಲು ಸದಾ ಸಿದ್ಧರಾಗಿದ್ದಾರೆ ಎಂದರು. ಜಿ.ಪಂ. ಸದಸ್ಯ ಕೆ.ಆರ್. ಮಹೇಶ್ ಒಡೆಯರ್ ಮಾತನಾಡಿ, ಭಾಷೆ ಜೀವನ ಮೌಲ್ಯಗಳನ್ನು ರೂಪಿಸುತ್ತದೆ. ಯಾವುದೇ ಬಾಷೆ ತನ್ನ ಅಸ್ತಿತ್ವವನ್ನುಕಳೆದುಕೊಂಡಾಗ ನಾಗರಿಕತೆಯೇ ನಾಶವಾಗುತ್ತದೆ. ಇದಕ್ಕೆ ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳ ಉದಾಹರಣೆ ನೀಡಬಹುದಾಗಿದೆ ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ತಾಲೂಕಿನ 11 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇವರಲ್ಲಿ ಚುಟುಕುಸಾಹಿತಿ ಬಿಳಿಗಿರಿ ವಿಜಯಕುಮಾರ್, ಶಿಕ್ಷಕ ಎಸ್. ರಾಮನಾಯ್ಕ, ಜಿ.ರೇವಣ್ಣ, ಕಲ್ಲೇಶಪ್ಪ, ಕರಿನಹಳ್ಳಿ ಶೀಲಾನಂಜುಂಡಪ್ಪ ಮತ್ತಿತರರಿಗೆ ನೀಡಲಾಯಿತು. ತಾಪಂ ಅಧ್ಯಕ್ಷೆ ಪ್ರೇಮಾಬಾಯಿ, ತಾಪಂ ಇಒ ಡಾ| ದೇವರಾಜ ನಾಯ್ಕ, ವೃತ್ತ ನಿರೀಕ್ಷಕ ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಂಗನಾಥಸ್ವಾಮಿ ಮತ್ತು ರಾಜಕುಮಾರ್, ಕಾರ್ಮಿಕ ಇಲಾಖೆಯ ಅಧಿಕಾರಿ ಶಶಿಕಲಾ, ಪಿಎಸ್‌ಐ ವಿಶ್ವನಾಥ್, ಲೋಕೋಪಯೋಗಿ ಇಂಜಿನಿಯರ್ ದಯಾನಂದ್, ಮುಖ್ಯಾಧಿಕಾರಿ ಮಂಜುನಾಥ್, ಸಿಡಿಪಿಒ ಆಶಾ, ತಾಲೂಕು ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ವೈ.ಎಸ್. ರವಿಪ್ರಕಾಶ್, ಸೂರಿ ಶ್ರೀನಿವಾಸ್, ಟಿ.ಆರ್. ಲಕ್ಕಪ್ಪ, ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷ ರೇವಣ್ಣಯ್ಯ, ನೌಕರ ಸಂಘದ ಅಧ್ಯಕ್ಷ ಬಸವರಾಜು,ಮಲ್ಲಿಕಾರ್ಜುನ್ ಮುಂತಾದವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Chikkamagaluru: 5 ವರ್ಷದ ಮಗು ಮೇಲೆ ಬೀದಿ ನಾಯಿ ದಾಳಿ
Chikkamagaluru: ಪ್ರವಾಸಕ್ಕೆ ಬಂದಿದ್ದ ಶಾಲಾ ಮಕ್ಕಳ ವ್ಯಾನ್ ಪಲ್ಟಿ; ಗಾಯ
Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ
CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.