ರೋಹಿಣಿ ಮಳೆ ಅವಾಂತರ
•ಸುಮಾರು 7 ಸೆಂ.ಮೀ.ಗೂ ಅಧಿಕ ಮಳೆ •ಮೋರಿ ಕಟ್ಟಿ ರಸ್ತೆಯಲ್ಲಿ ಹರಿದ ಚರಂಡಿ ನೀರು
Team Udayavani, Jun 4, 2019, 8:10 AM IST
ಬಾಳೆಹೊನ್ನೂರು: ತಡರಾತ್ರಿ ರೋಹಿಣಿ ಮಳೆ ಅಬ್ಬರಕ್ಕೆ ಹಲವಾರು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದ್ದು ದಾರಿಯುದ್ದಕ್ಕೂ ಅಲ್ಲಲ್ಲಿ ಕೆಸರು ಮಣ್ಣು ತುಂಬಿಕೊಂಡಿದೆ.
ರವಿವಾರ ಮಧ್ಯರಾತ್ರಿ 12 ಗಂಟೆ ವೇಳೆಗೆ ಮಳೆ ಪ್ರಾರಂಭವಾಗಿದ್ದು, ಸುಮಾರು 7 ಸೆಂ.ಮೀ.ಗೂ ಅಧಿಕ ಮಳೆಯಾಗಿದ್ದು ಚರಂಡಿಗಳೆಲ್ಲ ಉಕ್ಕಿ ಹರಿದ ಪರಿಣಾಮವಾಗಿ ಕಾರಂತ್ ಪೈಂಟ್ಸ್ ಸಪ್ಲೈ ಅಂಗಡಿಗೆ ನೀರು ನುಗ್ಗಿ ಸಮಸ್ಯೆ ಉಂಟು ಮಾಡಿದೆ. ಸುದರ್ಶಿನಿ ಚಿತ್ರಮಂದಿರ ಹಾಗೂ ಬಸವರಾಜು ಬಾಳೆಕಾಯಿ ಮಂಡಿ ಸಮೀಪ ಮೋರಿ ಕಟ್ಟಿದ ಹಿನ್ನೆಲೆಯಲ್ಲಿ ಖಾನ್‌ಫ್ಲಾಜಾ ಬಳಿ ತಡೆಗೋಡೆ ನಿರ್ಮಾಣಗೊಂಡಿದ್ದು ನೀರು ನುಗ್ಗಿದ ಹಿನ್ನ್ನೆಲೆಯಲ್ಲಿ ಹಾಕಿದ್ದ ಮಣ್ಣು ಹಾಗೂ ಟಾರ್‌ರಸ್ತೆ ಕುಸಿದು ಹೋಗಿದೆ.
ಈ ತಡೆಗೋಡೆಯಿಂದ ಹೊರ ನುಗ್ಗಿದ ನೀರು ಮಾರಿಗುಡಿ ರಸ್ತೆಯಲ್ಲಿ ಕೆಸರು ಮಣ್ಣು ತುಂಬಿಕೊಂಡು ಸಂಚಾರಕ್ಕೆ ಅಡಚಣೆಯಾಗಿದೆ. ಸರ್ಕಾರಿ ಆಸ್ಪತ್ರೆ ಹಾಗೂ ಸ್ಮಶಾನದ ಆವರಣದಿಂದ ಬಂದ ನೀರು ದೇವಸ್ಥಾನದ ಆವರಣಕ್ಕೆ ನುಗ್ಗಿ ಮಾರಿಗುಡಿ ರಸ್ತೆಗೆ ಹರಿಯಿತು. ಎಸ್.ಎನ್. ಭಟ್ ಮನೆ ಹತ್ತಿರ ಮೋರಿಕಟ್ಟಿದ ಪರಿಣಾಮ ಅವರ ಮನೆ ಅಂಗಳ ಹಾಗೂ ಜಿಲ್ಲಾ ಚು.ಸಾ.ಪ ಅಧ್ಯಕ್ಷ ಯಜ್ಞಪುರುಷ ಭಟ್ಟರ ಜಾನುವಾರು ಕೊಟ್ಟಿಗೆಗೆ ಕೆಸರು ನೀರು ನುಗ್ಗಿದ್ದು ಜಾನುವಾರುಗಳು ತೀವ್ರ ತೊಂದರೆ ಅನುಭವಿಸಿದೆ. ಮಾರಿಗುಡಿ ರಸ್ತೆಯ ಪಕ್ಕದಲ್ಲಿ ಪಶು ವೈದ್ಯಾಧಿಕಾರಿಗಳ ಮನೆ ಆವರಣಕ್ಕೆ ಕೊಳಚೆ ನೀರು ನುಗ್ಗಿದ ಹಿನ್ನೆಲೆಯಲ್ಲಿ ಕೆಸರು ಮಣ್ಣು ತುಂಬಿಕೊಂಡು ಸಮಸ್ಯೆ ಉಂಟಾಯಿತು.
ಪಂಚಾಯಿತಿ ಮುಂಭಾಗದ ಎರಡು ಚರಂಡಿಗಳು ಕಿರಿದಾದ ಹಿನ್ನ್ನೆಲೆಯಲ್ಲಿ ಮೋರಿ ಕಟ್ಟಿಕೊಂಡು ಜೆ.ಸಿ ವೃತ್ತದಲ್ಲಿ ನೀರು ಹರಿದ ಪರಿಣಾಮ ರಸ್ತೆ ತುಂಬಾ ಜೆಲ್ಲಿಕಲ್ಲುಗಳು ಸಂಗ್ರಹವಾಗಿದ್ದು ಸಂಚಾರಕ್ಕೆ ಅಡಚಣೆಯಾಗಿದೆ. ನ.ರಾ.ಪುರ ರಸ್ತೆ ಡೋಬಿಹಳ್ಳದ ವರೆಗೆ ಬಾಕ್ಸ್ ಚರಂಡಿ ನಿರ್ಮಿಸಿದ್ದರೂ ಸಹ ಹಳ್ಳದೋಪಾದಿಯಲ್ಲಿ ರಸ್ತೆಯಲ್ಲಿ ನೀರು ಹರಿದು ಅಕ್ಕಪಕ್ಕದ ಅಂಗಡಿಗೆ ನೀರು ನುಗ್ಗಿದೆ. ಹಳ್ಳಕೊಳ್ಳಗಳು ತುಂಬಿಹರಿದು ಬಹು ದಿನಗಳಿಂದ ಮಳೆ ಇಲ್ಲದೆ ಬಿಸಿಲಿನ ತಾಪಕ್ಕೆ ತತ್ತರಿಸಿದ್ದ ಜನತೆ ನಿಟ್ಟುಸಿರು ಬಿಡುವಂತಾಗಿದೆ. ಮುಖ್ಯ ರಸ್ತೆ ಹಾಗೂ ಪಟ್ಟಣದ ಅಡ್ಡ ರಸ್ತೆಗಳಲ್ಲಿ ಮೋರಿಗಳು ಕಟ್ಟಿಕೊಂಡಿದ್ದು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ಒತ್ತಾಯಿಸಿದ್ದಾರೆ.
ವಿದ್ಯುತ್ ಸ್ಥಗಿತ: ಚಿಕ್ಕಮಗಳೂರಿನಿಂದ ಬಾಳೆಹೊನ್ನೂರಿಗೆ ಸರಬರಾಜಾಗುವ ವಿದ್ಯುತ್ ಲೈನ್ ಮೇಲೆ ಮರ ಬಿದ್ದ ಹಿನ್ನೆಲೆಯಲ್ಲಿ ವಿದ್ಯುತ್ ಶಕ್ತಿ ಇಲ್ಲದ ಹಿನ್ನೆಲೆಯಲ್ಲ ಕುಡಿಯುವ ನೀರಿನ ಸರಬರಾಜು ಮಾಡಲು ಸಮಸ್ಯೆ ಉಂಟಾಗಿದ್ದು ಸಂಜೆ ಹೊತ್ತಿಗೆ ವಿದ್ಯುತ್ ಸರಬರಾಜಾಗಬಹುದೆಂದು ಮೆಸ್ಕಾಂ ಇಂಜಿನಿಯರ್ ರಾಜಪ್ಪ ತಿಳಿಸಿದ್ದಾರೆ.
ಬಾಳೆಹೊನ್ನೂರು – ಮಾರಿಗುಡಿ ರಸ್ತೆಯಲ್ಲಿ ಕೆಸರು ಮಣ್ಣು ಸಂಗ್ರವಾಗಿರುವುದು ಹಾಗೂ ಖಾನ್‌ಫ್ಲಾಜಾ ಬಳಿ ನೂತನವಾಗಿ ನಿರ್ಮಿಸಿದ ರಸ್ತೆ ಕುಸಿದರುವುದು. ಕಾರಂತ್ ಪೈಂಟ್ಸ್ ಸಪ್ಲ್ತ್ರೈ ಅಂಗಡಿಗೆ ನೀರು ನುಗ್ಗಿರುವುದನ್ನು ಸ್ವಚ್ಚಗೊಳಿಸುತ್ತಿರುವುದು.( ಬಲಚಿತ್ರ).
ಕಡೂರು: ತಾಲೂಕಿನಾದ್ಯಂತ ರವಿವಾರ ರಾತ್ರಿ ಸುರಿದ ಮಳೆ ರೈತಾಪಿ ವರ್ಗದಲ್ಲಿ ಹರ್ಷ ಮೂಡಿಸಿದೆ. ರವಿವಾರ ಮಧ್ಯಾಹ್ನದಿಂದ ಬಿಸಿಲು ಹೆಚ್ಚಿದ್ದು ಸಂಜೆ ವೇಳೆಗೆ ತಂಪಾದ ಗಾಳಿ ಬೀಸಲು ಆರಂಭಿಸಿತು. ಮಳೆ ಬರುವ ಸೂಚನೆ ಇದ್ದರೂ ಬಾರದೆ ಇದದ್ದನ್ನು ಕಂಡ ರೈತ ಬೇಸರಗೊಂಡಿದ್ದ ಆದರೆ ರಾತ್ರಿ 11ರ ನಂತರ ಗುಡುಗು-ಸಿಡಿಲಿನ ಅರ್ಭಟದಿಂದ ಆರಂಭವಾದ ಮಳೆ ಬೆಳಗಿನ ಜಾವದವರೆಗೆ ಸುರಿಯಿತು.
ಗಾಳಿ ಮಳೆಗೆ ತೆಂಗು, ಅಡಿಕೆ, ಮಾವಿನ ಮರಗಳು ಧರೆಗುರುಳಿದವು. ಎಲ್ಐಸಿಯ ರವಿಕುಮಾರ ಅವರ ಅಡಿಕೆ ತೋಟದಲ್ಲಿನ ಸುಮಾರು 25ಕ್ಕೂ ಹೆಚ್ಚಿನ ಅಡಿಕೆ ಮರಗಳು ಉರುಳಿವೆ. ತಾಲೂಕಿನ ಮತಿಘಟ್ಟ-59 ಮಿ.ಮೀ ಮಳೆಯಾಗಿದ್ದು, ತಿಮ್ಲಾಪುರ, ಕೆ. ಬಿದರೆ-58, ದೊಡ್ಡಪಟ್ಟಣಗೆರೆ-ಬಾಣೂರು -57, ಕಡೂರು ಗ್ರಾಮಾಂತರ-56, ನಿಡಘಟ್ಟ-52, ಸಿಂಗಟಗೆರೆ-50, ಯಗಟಿ-45, ಎಸ್. ಬಿದರೆ-44, ಮಲ್ಲೇಶ್ವರ-43, ಉಳೆಗೆರೆ-43,ಯಗಟಿ ಪುರ-32, ಗರ್ಜೆ- 28,ಬಿಸಿಲೆರೆ-24, ಮೇಲನಹಳ್ಳಿ-24, ಬಿಳವಾಲ-22,ಹಿರೇನಲ್ಲೂರು-16, ಅಂತರಘಟ್ಟೆ-19, ಗಿರಿಯಾಪುರ-11, ಕಾಮನಕೆರೆ-10, ಕಲ್ಲೆರೆ-4 ಮಿ.ಮೀ ಮಳೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.