600 ಕೋಟಿ ರೂ. ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ
Team Udayavani, Apr 8, 2018, 12:15 PM IST
ಕಡೂರು: ನಾನು ವಿರೋಧ ಪಕ್ಷದ ಶಾಸಕನಾಗಿದ್ದರೂ ಸಹ 600 ಕೋಟಿ ರೂ. ಅನುದಾನವನ್ನು ಕ್ಷೇತ್ರಕ್ಕೆ ತಂದಿದ್ದೇನೆ ಎಂದು ಶಾಸಕ ವೈ.ಎಸ್.ವಿ ದತ್ತ ತಿಳಿಸಿದರು. ತಾಲೂಕಿನ ದೇವರಹಳ್ಳಿ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಮಾತನಾಡಿದರು. ಸುಮಾರು 33 ಕೆರೆಗಳಿಗೆ ನೀರು ತುಂಬಿಸುವ ಭದ್ರಾ ಮೇಲ್ದಾಂಡೆ ಯೋಜನೆ ಕಾಮಗಾರಿಗೆ
200 ಕೋಟಿ ಅನುದಾನದಿಂದ ಕಾಮಗಾರಿ ಆರಂಭವಾಗಿದೆ. ಪ್ರತಿಗ್ರಾಮಗಳಿಗೆ ಕಳೆದ 5 ವರ್ಷಗಳಿಲ್ಲಿ ಮೂಲ ಸೌಲಭ್ಯ ನೀಡಲಾಗಿದೆ.
ಜನರೊಂದಿಗೆ ಪ್ರೀತಿ ವಿಶ್ವಾಸ ದಿಂದ ನಡೆದುಕೊಂಡಿದ್ದೇನೆ. ಕ್ಷೇತ್ರದಲ್ಲಿ ಬರಗಾಲ ತಾಂಡವಾಡುತ್ತಿದೆ. ತೆಂಗು, ಅಡಿಕೆ
ತೋಟಗಳು ಒಣಗಿ ನಿಂತಿವೆ. ರೈತನ ಬದುಕು ಹಸನಾಗಬೇಕಾದರೆ ಶಾಶ್ವತ ನೀರಾವರಿ ಯೋಜನೆ ಆಗಬೇಕಿದೆ. ವಿಷ್ಣು ಸಮುದ್ರ ಕೆರೆ ತುಂಬಿದರೆ ಮಾತ್ರ ಕಸಬಾ ಹೋಬಳಿಯ ಗ್ರಾಮಗಳ ಕೆರೆಗಳಿಗೆ ಅನುಕೂಲವಾಗಲಿದೆ ಇದರ ಜೊತೆಗೆ ಗೋಂ ಅಣೆಕಟ್ಟು ಯೋಜನೆಯು ಬೀರೂರು ಭಾಗದ ಕರೆಗಳು ತುಂಬಲಿದೆ. ಅಲ್ಲಿಂದ ಮದಗದಕೆರೆ ಹಾಗೂ ವಿಷ್ಣು ಸಮುದ್ರ ಕೆರೆಗೆ ನೀರು ಹರಿಯಲಿದೆ ಎಂದರು.
ಕಡೂರು ಕ್ಷೇತ್ರದಲ್ಲಿ ಇದುವರೆಗೂ ಯಾರು ಸಚಿವರಾಗಿಲ್ಲ. ನೀವು ಈ ಬಾರಿ ನನ್ನನ್ನು ಗೆಲ್ಲಿಸಿದರೆ ನಾನು ಮಂತ್ರಿಯಾಗುವುದು ಖಚಿತ ಎಂಬ ಭರವಸೆ ನೀಡಿದರು. ಏ. 9ರಿಂದ ಚುನಾವಣಾ ಪ್ರಚಾರ ಕಾರ್ಯವನ್ನು ಚೌಳಹಿರಿಯೂರು ಗ್ರಾಮದಿಂದ ಪ್ರಾರಂಭಿಸಲಾಗುವುದು
ಎಂದರು.
ಗ್ರಾಮದ ಮುಖಂಡ ಪರಮೇಶ್ವರಪ್ಪ ಮಾತನಾಡಿ, ಯಾವುದೇ ಗ್ರಾಮಗಳು ಅಭಿವೃದ್ಧಿಯಾಗಬೇಕಾದರೆ ಶಾಸಕರೊಂದಿಗೆ ಸಂಬಂಧವನ್ನು ಉತ್ತಮವಾಗಿ ಬೆಳೆಸಿಕೊಂಡು ಅನುದಾನವನ್ನು ಹಾಕಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಗ್ರಾಮಸ್ಥರು ಒಗ್ಗಟ್ಟನ್ನು ಪ್ರದರ್ಶಿಸಬೇಕೆಂದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಪ್ರಸನ್ನ, ರೇವಣ್ಣ, ಹುಲಿಯಪ್ಪ, ಕೊಟ್ಟೂರಪ್ಪ, ಪಟೇಲ್, ಮಹೇಶ್ವರಪ್ಪ, ಸೋಮಶೇಖರಪ್ಪ, ಓಂಕಾರಪ್ಪ, ಬಸವರಾಜಪ್, ಕಂಠಪ್ಪ ಒಡೆಯರ್, ಚಾಂದ್, ಪಾಪಣ್ಣ, ಗಂಗಾಧರಪ್ಪ, ಚಂದ್ರಪ್ಪ ಹಾಗೂ ಗ್ರಾಮಸ್ಥರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Chikkamagaluru: ಮೂರು ದಿನದ ಬಾಣಂತಿ ಮೃತ್ಯು; ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪ
Kottigehara: ನಿರ್ದೇಶಕ ಉಪೇಂದ್ರ ಅವರ ‘ಯುಐ’ ಚಿತ್ರದಲ್ಲಿ ಖಳನಟನಾಗಿ ನಟಿಸಿದ ಬಣಕಲ್ ನಿವಾಸಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Elephant: ಕಾಫಿನಾಡಿನಲ್ಲಿ ಕಾಡಾನೆ ನೈಟ್ ರೌಂಡ್ಸ್… ಇದು ಮುಗಿಯದ ಗೋಳು ಎಂದ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.