ಜನಧನ್ ಖಾತೆ ತೆರೆಯಲು ಜನಜಂಗುಳಿ
Team Udayavani, May 16, 2020, 7:37 AM IST
ಬೀರೂರು: ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಕೇಂದ್ರಸರ್ಕಾರ ಘೋಷಿಸಿರುವ ಹಲವು ಪ್ಯಾಕೇಜ್ ಗಳಲ್ಲಿ ಸಂಕಷ್ಟದಲ್ಲಿರುವ ಕುಟುಂಬದ ಮಹಿಳೆಯರ ಜನಧನ್ ಖಾತೆಗೆ ಮಾಸಿಕ ರೂ.500 ಜಮಾ ಸೇರಿದ್ದು ಅದು ಈಗಾಗಲೇ ಹಲವರ ಖಾತೆಗೆ ಜಮೆಯಾಗಿದೆ. ಜನ್ ಧನ್ ಖಾತೆ ಹೊಂದಿರದ ನೂರಾರು ಮಹಿಳೆಯರು ಗುರುವಾರ ಬೆಳಗಿನಿಂದಲೇ ಬೀರೂರು ಕೆನರಾ ಬ್ಯಾಂಕ್ ಶಾಖೆಯ ಮುಂದೆ ಖಾತೆ ತೆರೆಯಲು ಸಾಲುಗಟ್ಟಿ ನಿಂತಿದ್ದರು.
ಈ ಕುರಿತು ಸರತಿಯಲ್ಲಿದ್ದ ಕೆಲವರನ್ನು ಪ್ರಶ್ನಿಸಿದಾಗ ಮೋದಿ ಲಕ್ಷಾಂತರ ಕೋಟಿ ಪ್ಯಾಕೇಜ್ ಘೋಷಿಸಿದ್ದಾರಂತೆ, ಅದರಲ್ಲಿ ಜನ್‌ಧನ್ ಖಾತೆಗೆ ದುಡ್ಡು ಬರುತ್ತಂತೆ, ನಮ್ಮದು ಮೋದಿ ಅಕೌಂಟ್ ಇರಲಿಲ್ಲ, ಈಗ ಖಾತೆ ತೆರೆಯಲು ಬಂದಿದ್ದೇವೆ, ರೇಣುಕಮ್ಮ ಎನ್ನುವವರಿಂದ ಉತ್ತರ ಕೇಳಿಬಂತು. ಈಗಾಗಲೇ ಬೀರೂರಿನ ಕೆನರಾ ಬ್ಯಾಂಕ್ ಶಾಖೆಯಲ್ಲಿ ಸುಮಾರು 6ಸಾವಿರ ಜನಧನ್ ಖಾತೆಗಳಿದ್ದು ಮಹಿಳೆಯರ ಅಕೌಂಟ್‌ಗೆ ರೂ.500 ಹಣ ಬಂದಿರುವುದು ಹೌದು. ಬೇರೆ ಯಾವ ಬ್ಯಾಂಕ್ ಬಳಿಯೂ ಖಾತೆ ತೆರೆಯಲು ಇಲ್ಲದ ಇಷ್ಟುದ್ದ ಜನಜಂಗುಳಿ ನಮ್ಮಲ್ಲಿ ಕಂಡು ಬಂದಿದ್ದು ಆಶ್ಚರ್ಯ ತಂದಿದೆ. ಬುಧವಾರದಿಂದ ಹೊಸದಾಗಿ 300 ಖಾತೆ ತೆರೆಯಲಾಗಿದೆ.
ಈ ಖಾತೆಗಳಿಗೆ ಹಣ ಬರುತ್ತದೆ ಎನ್ನುವ ಯಾವ ಗ್ಯಾರಂಟಿ ಇಲ್ಲ. ಆದರೆ ಖಾತೆ ತೆರೆಯಲು ಬಂದವರನ್ನು ವಾಪಸ್ ಕಳಿಸಬಾರದು ಎನ್ನುವ ಉದ್ದೇಶದಿಂದ ಇಬ್ಬರು ಸಿಬ್ಬಂದಿಯನ್ನು ನೇಮಿಸಿ ಶೂನ್ಯ ಉಳಿಕೆಯ ಹೊಸಖಾತೆಗಳನ್ನು ತೆರೆಯಲು ಅವಕಾಶ ಮಾಡಿಕೊಡಲಾಗುತ್ತಿದೆ. ಮತ್ತು ಕೆಲವರಿಗೆ ಅರ್ಜಿ ನೀಡಿ ಮನೆಯಲ್ಲಿ ತುಂಬಿ ತರುವಂತೆ ತಿಳಿಸಲಾಗಿದೆ ಎನ್ನುತ್ತಾರೆ ಶಾಖಾ ವ್ಯವಸ್ಥಾಪಕ ಎಂ.ರಮೇಶ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.