ಸ್ವಾವಲಂಬನೆಯೇ ಆತ್ಮನಿರ್ಭರತೆ ಉದ್ದೇಶ ; ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಅಭಿಮತ
Team Udayavani, May 26, 2020, 10:50 AM IST
ಚಿಕ್ಕಮಗಳೂರು: ನಗರದ ಮಧುವನ ಬಡಾವಣೆಯಲ್ಲಿ ಹಣ್ಣು ಮತ್ತು ತರಕಾರಿ ಅಂಗಡಿಯನ್ನು ಸಚಿವ ಸಿ.ಟಿ.ರವಿ ಉದ್ಘಾಟಿಸಿದರು.
ಚಿಕ್ಕಮಗಳೂರು: ಆತ್ಮನಿರ್ಭರತೆ ಉದ್ದೇಶವೇ ಕುಟುಂಬ, ಸಮುದಾಯ,ದೇಶದ ಸ್ವಾವಲಂಬನೆ ಯಾಗಿದೆ ಎಂದು ಸಚಿವ ಸಿ.ಟಿ.ರವಿ ಹೇಳಿದರು. ಸೋಮವಾರ ನಗರದ ಮಧುವನ ಬಡಾವಣೆಯಲ್ಲಿ ಸೇವಾಭಾರತಿ ಆಶ್ರಯದಲ್ಲಿ ಆರಂಭಗೊಂಡ ವಿಜಯಭಾರತಿ ಹಣ್ಣು ಮತ್ತು ತರಕಾರಿ ಅಂಗಡಿ ಉದ್ಘಾಟಿಸಿ ಮಾತನಾಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆತ್ಮನಿರ್ಭರತೆ ಎಂದಿರುವುದು ಸ್ವಾಲಂಬನೆ ಬದುಕಿಗಾಗಿ ಒಂದು ಕಾಲದಲ್ಲಿ ವ್ಯಕ್ತಿಗತವಾಗಿ, ಕೌಟುಂಬಿಕವಾಗಿ, ಸಮಾಜಿಕವಾಗಿ ಮತ್ತು ರಾಷ್ಟ್ರವಾಗಿ ದೇಶ ಪೂರ್ಣ ಸ್ವಾಲಂಬಿಯಾಗಿತ್ತು ಎಂದರು.
ನಂತರ ದೇಶ ಸ್ವಾತಂತ್ರ್ಯ ಕಳೆದುಕೊಂಡು ದಾಸ್ಯಕ್ಕೆ ಒಳಗಾದ ಪರಿಣಾಮ ಕುಟುಂಬ ಹಾಗೂ ರಾಷ್ಟ್ರ ಸ್ವಾವಲಂಬನೆಗೆ ಧಕ್ಕೆ ಉಂಟಾಯಿತು. ಆಗ ವ್ಯಕ್ತಿಗತ
ಸ್ವಾವಲಂಬನೆಯೂ ಮರೆಯಾಯಿತು. ದೇಶ ಮತ್ತೆ ಸ್ವಾವಲಂಬನೆಯಾಗಬೇಕು ಎಂಬ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು
ಆತ್ಮನಿರ್ಭರತೆ ಬಗ್ಗೆ ಹೇಳಿದ್ದಾರೆ ಎಂದರು. ಈ ಹಿನ್ನೆಲೆಯಲ್ಲಿ ಸೇವಾಭಾರತಿ ಯುವಕರ ತಂಡ ಕಾಯಿಪಲ್ಲೆಯನ್ನು ಮಾರಾಟ ಮಾಡುವ ಮೂಲಕ ಸಣ್ಣ ಪ್ರಯತ್ನವನ್ನು ನಗರದಲ್ಲಿ ಆರಂಭಿಸಿದೆ. ಆರಂಭ ಶೂರತ್ವವಾಗದೆ ವ್ಯಾವಹಾರಿಕ ಹಿನ್ನೆಲೆಯಲ್ಲಿ ನಿರಂತರ ವ್ಯವಹಾರ ನಡೆಯಬೇಕಾಗಿದೆ ಎಂದು ತಿಳಿಸಿದರು.
ಲಾಭ ಗಳಿಕೆಯೇ ಮೂಲ ಉದ್ದೇಶವಾಗದೆ ಲಾಭವನ್ನು ಇಟ್ಟುಕೊಂಡು ಉತ್ಕೃಷ್ಟವಾದ ಸೇವೆ ನೀಡಿದಾಗ ಮಾತ್ರ ಉದ್ಯಮಕ್ಕೆ ಅಥವಾ ಪ್ರಯತ್ನಕ್ಕೆ ಯಶಸ್ಸು ಸಿಗುತ್ತದೆ. ಲಾಭವೇ ಉದ್ದೇಶವಾದರೆ ಕೆಲವು ದಿನ ಈ ಪ್ರಯತ್ನ ನಡೆದು ಆನಂತರ ವಿಶ್ವಾಸ ಮೆರೆಯಾಗುತ್ತದೆ. ಆದ್ದರಿಂದ ಲಾಭ ಮತ್ತು ಸೇವೆ
ಎರಡೂ ಸಮತೋಲನದಲ್ಲಿ ಇರಬೇಕು ಎಂದರು.
ಸೇವೆಯನ್ನೇ ಪ್ರಧಾನವಾಗಿ ತೆಗೆದುಕೊಂಡರೆ ಹೆಚ್ಚುದಿನ ಮಾಡಲಾಗದು. ಬದುಕಿನ ಸಂಕಷ್ಟಗಳು ಎದುರಾದಾಗ ಸೇವೆ ಹಿನ್ನೆಡೆಗೆ ಬರುತ್ತದೆ. ಕೇವಲ
ಲಾಭವೇ ಮುಖ್ಯವಾಗಿ ಗುಣಮಟ್ಟದ ಸೇವೆಗೆ ಆದ್ಯತೆ ನೀಡದಿದ್ದರೆ, ಅದು ಸಹ ಉದ್ಯಮವನ್ನು ಮುನ್ನಡೆಸದು. ಹಾಗಾಗಿ, ಎರಡೂ ಸಹ ಸಮವಾಗಿರಲಿ ಎಂದರು.
ವ್ಯವಹಾರದಲ್ಲಿ ಪಾರದರ್ಶಕತೆ ಜೊತೆಗೆ ಪ್ರಾಮಾಣಿಕತೆಯ ಚೌಕಟ್ಟನ್ನು ಹೊಂದಿರಬೇಕು. ಆಗ ಮಾತ್ರ ಯಶಸ್ಸು ಸಿಗುತ್ತದೆ. ಸ್ವಾವಲಂಬನೆ ದೂರದಲ್ಲಿದೆ.
ತಕ್ಷಣ ದೊರಕುವುದಲ್ಲ, ಯಾವುದೇ ಯಶಸ್ಸಿಗೆ ಮೊದಲ ಹೆಜ್ಜೆ ಮುಖ್ಯ ಎಂದರು.
ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ ಮಾತನಾಡಿ, ಜನರು ಗುಣಮಟ್ಟದ ಸೇವೆಯನ್ನು ಬಯಸುತ್ತಾರೆ. ಒಂದು ತರಕಾರಿ ಮಳಿಗೆಯಾಗಿ ಉಳಿಯದೆ ಮಾದರಿ
ತರಕಾರಿ ಮಳಿಗೆಯಾಗಬೇಕು. ಗುಣಮಟ್ಟ ಹಾಗೂ ನಿಖರ ಬೆಲೆಯಲ್ಲಿ ಒದಗಿಸಬೇಕು ಎಂದರು. ಈ ಸಂದರ್ಭದಲ್ಲಿ ಮಧುವನ ಬಡಾವಣೆ ಅಸೋಸಿಯೇಷನ್ ಅಧ್ಯಕ್ಷ ಮಾದಪ್ಪ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಿ.ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.
ಸೇವಾಭಾರತಿ ಮಳಿಗೆ ಹಣ್ಣು ತರಕಾರಿ ಲಾಭ ಗಳಿಕೆಗಾಗಿ ಮಾಡದೆ ಜನರಿಗೆ ಹೊರೆಯಾಗದಂತೆ ಉತ್ತಮ ತರಕಾರಿ ಮತ್ತು ಹಣ್ಣನ್ನು ನೀಡುವ ಉದ್ದೇಶ ಹೊಂದಿದೆ. ಲಾಭದ ಜೊತೆ ಸೇವೆಗೂ ಆದ್ಯತೆ ನೀಡಲಾಗುವುದು. ಸುಮಂತ್, ಸೇವಾಭಾರತಿ ಮಳಿಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Baba Budan Dargah: ಗೋರಿಗಳ ಮೇಲೆ ಕುಂಕುಮ ಹಚ್ಚಿರುವ ಆರೋಪ
Naxal leader Vikram Gowda Encounter: ಕುದುರೆಮುಖ: ಶೋಧ ಕಾರ್ಯ ಚುರುಕು
Naxal: ಎನ್‌ಕೌಂಟರ್‌ಗೆ ಜಾಲತಾಣದಲ್ಲಿ ಮಾಜಿ ನಕ್ಸಲ್ ಪತ್ನಿ ಆಕ್ರೋಶ
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.