ಅಂತರಘಟ್ಟಮ್ಮನ ಹಬ್ಬಕ್ಕೆ 20 ಸಾವಿರ ಕುರಿಗಳ ಭರ್ಜರಿ ಮಾರಾಟ

Team Udayavani, Feb 16, 2021, 6:29 PM IST

ಅಂತರಘಟ್ಟಮ್ಮನ ಹಬ್ಬಕ್ಕೆ 20 ಸಾವಿರ ಕುರಿಗಳ ಭರ್ಜರಿ ಮಾರಾಟ

ಕಡೂರು: ಕಡೂರು ವಿಧಾನಸಭಾ ಕ್ಷೇತ್ರದ ಪ್ರಮುಖ ಜಾತ್ರೆಗಳಲ್ಲಿ ಅಂತರಘಟ್ಟೆಯ ದುಗಾಂìಬಾ ದೇವಿಯದು ಪ್ರಮುಖವಾದದ್ದು. ಇದೀಗ ಅಜ್ಜಂಪುರ ತಾಲೂಕಿನಲ್ಲಿರುವ ಅಂತರಘಟ್ಟಮ್ಮ ದೇವಿಗೆ ಕಡೂರು-ಬೀರೂರಿನಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಭಕ್ತರಿದ್ದಾರೆ.

ಕಡೂರು ಜನತೆಗೆ ಅಂತರಘಟ್ಟಮ್ಮನ ಬಾನ ಅಥವಾ ಅಮ್ಮನಹಬ್ಬ ಬಂತೆಂದರೆ ಕಡೂರಿನಲ್ಲಿ ಕುರಿ ವ್ಯಾಪಾರ ಬಲುಜೋರು. ಅದರಲ್ಲೂ ಹಬ್ಬಕ್ಕೆ ಮುನ್ನ ಸೋಮವಾರ ಬಂತೆಂದರೆ ಅದು ಹಬ್ಬದ ಸಂತೆ. ಸಾವಿರಾರು ಸಂಖ್ಯೆಯಲ್ಲಿ ದೂರದ ಚಿತ್ರದುರ್ಗ, ಹೊಳಲ್ಕೆರೆ, ಹಿರಿಯೂರು, ಹಾವೇರಿ, ದಾವಣಗೆರೆ, ಮುಂತಾದ ಕಡೆಗಳಿಂದ ಕುರಿಗಳನ್ನು ಕಡೂರಿಗೆ ತರುತ್ತಾರೆ. ಪಟ್ಟಣದ ಎಪಿಎಂಸಿ ಮಾರುಕಟ್ಟೆ ಪ್ರಾಂಗಣ ಭಾನುವಾರ ರಾತ್ರಿಯೇ ಕುರಿಗಳಿಂದ ತುಂಬಿಹೋಗಿತ್ತು. ಸೋಮವಾರವಿಡೀ ಕುರಿ ವ್ಯಾಪಾರ-ವಹಿವಾಟು ಬಹಳ ಜೋರಾಗಿ ನಡೆಯಿತು.

ಒಂದು ಕುರಿಗೆ ಕನಿಷ್ಟ ಹದಿನೈದರಿಂದ ಮೂವತ್ತು ಸಾವಿರ ರೂಪಾಯಿ ಬೆಲೆಯಿತ್ತು. ಚಿತ್ರದುರ್ಗದ ರಾಮಪ್ಪ ಎಂಬುವವರ ಟಗರೊಂದು 25 ಸಾವಿರ ರೂಪಾಯಿಗೆ ಬಿಕರಿಯಾಯಿತು. ಸುಮಾರಾಗಿದ್ದ ಕುರಿಯ ಬೆಲೆಯೂ ಈ ಬಾರಿ 12 ರಿಂದ 18 ಸಾವಿರ ಕಂಡದ್ದು ವಿಶೇಷ. ಸೋಮವಾರದ ಸಂತೆಯಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಕುರಿಗಳು ಮಾರಾಟಗೊಂಡವು. ಕುರಿ ಖರೀದಿ ಸಿದವರು ಬೈಕ್‌, ಆಟೋ, ಕಾರುಗಳಲ್ಲಿ ಕುರಿಯನ್ನು ಸಾಗಿಸುತ್ತಿದ್ದದ್ದು ಕಂಡು ಬಂದಿತು. ವರ್ಷಕ್ಕೊಮ್ಮೆ ಬರುವ ಈ ಹಬ್ಬಕ್ಕೆ ದೇವಿ ಭಕ್ತರು ಏನೇ ತೊಂದರೆಯಿದ್ದರೂ ಕುರಿ ಖರೀದಿಸುತ್ತಾರೆ. ಇಡೀ ಪಟ್ಟಣ ಅಮ್ಮನ ಹಬ್ಬಕ್ಕೆಶುಭ ಕೋರುವ ಬ್ಯಾನರ್‌ಗಳಿಂದ ತುಂಬಿಹೋಗಿತ್ತು. ಕುರಿ ಖರೀದಿಸಲಾಗದವರು ಕೋಳಿಗಳನ್ನುಖರೀದಿಸುವುದರ ಜೊತೆಗೆ ಮಸಾಲೆ ವಸ್ತುಗಳನ್ನೂಸಂತೆಯಲ್ಲಿ ಖರೀದಿಸಿದರು. ತರಕಾರಿ ವ್ಯಾಪಾರವೂ ಬಹು ಜೋರಾಗಿ ನಡೆಯಿತು. ಈರುಳ್ಳಿ ಮತ್ತು ಬೆಳ್ಳುಳ್ಳಿ, ಸುಂಟಿ ಹೆಚ್ಚು ಮಾರಾಟವಾಯಿತು.

ಮಂಗಳವಾರ ಸಂಜೆ ಕಡೂರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಎತ್ತಿನ ಗಾಡಿಗೆ ಶೃಂಗಾರ ಮಾಡಿಕೊಂಡು ಗಾಡಿ ಓಡಿಸುವ ಸಂಪ್ರದಾಯ ನಡೆಯಲಿದೆ. ಹೊಸ ಬಟ್ಟೆ ತೊಟ್ಟು. ಗಾಡಿಗಳಲ್ಲಿಪಾನಕ ತುಂಬಿಕೊಂಡು ಗಾಡಿ ಓಡಿಸುವಾಗ ಅವಘಡ ನಡೆದ ಪ್ರಸಂಗಗಳು ಸಹ ಇವೆ. ಪೊಲೀಸ್‌ ರಕ್ಷಣೆಯಲ್ಲಿ ಗಾಡಿ ಓಟ ನಡೆಯಲಿದೆ.ಶುಕ್ರವಾರ ಅಂತರಗಟ್ಟೆಯಲ್ಲಿ ಶ್ರೀ ದುರ್ಗಾಂಬಾ ದೇವಿಯ ರಥೋತ್ಸವ ನಡೆಯಲಿದೆ. ಅಂದು ಜಾತ್ರೆಯ ವಿಶೇಷವಿದ್ದು ಇತರೆ ಹಲವಾರು ಜನಾಂಗದವರು ಶುಕ್ರವಾರ ಹೋಳಿಗೆ ಮಾಡಿ ಅಂತರಘಟ್ಟಮ್ಮನವರಿಗೆ ನೈವೇದ್ಯ ಮಾಡುವ ವಾಡಿಕೆ ನಡೆದು ಬಂದಿದೆ.

ಟಾಪ್ ನ್ಯೂಸ್

Bangladesh: Tamim Iqbal bids farewell to international cricket

Bangladesh: ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ವಿದಾಯ ಹೇಳಿದ ತಮೀಮ್‌ ಇಕ್ಬಾಲ್

Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?

Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?

Choo Mantar Movie Review

Choo Mantar Review: ಬಂಗಲೆಯಲ್ಲೊಂದು ಭಯಾನಕ ಕಥೆ!

4-ct-ravi

Naxal: ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು,ಇಲ್ಲದಿದ್ದರೇ ಪ್ಯಾಕೇಜ್ ನೀಡುವುದರಲ್ಲಿ ಅರ್ಥವಿಲ್ಲ

AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?

AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?

Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು

Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು

3-road-mishap

Udyavara: ಟ್ರಕ್ ಗೆ ಢಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು ; ಟ್ರಕ್ ಬೆಂಕಿಗೆ ಆಹುತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-ct-ravi

Naxal: ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು,ಇಲ್ಲದಿದ್ದರೇ ಪ್ಯಾಕೇಜ್ ನೀಡುವುದರಲ್ಲಿ ಅರ್ಥವಿಲ್ಲ

Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು

Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು

sringeri-new

Sringeri: ಇಂದು ಸುವರ್ಣ ಭಾರತೀ ಮಹೋತ್ಸವ “ಸ್ತೋತ್ರ ತ್ರಿವೇಣಿ ಮಹಾಸಮರ್ಪಣೆ’

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

1-kadkona

Mudigere; ಕಾಫಿ ಎಸ್ಟೇಟ್ ನಲ್ಲಿ ಕಾಡುಕೋಣ ದಾಳಿ: ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೃ*ತ್ಯು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

7-bng

Bengaluru: ಕೆರೆ ಒತ್ತುವರಿ ಮಾಡಿದ್ದ ಮೂವರಿಗೆ 1ವರ್ಷ ಜೈಲು

6-bng

Actor Darshan: 6 ತಿಂಗಳ ಬಳಿಕ ದರ್ಶನ್‌ ಭೇಟಿ: ಪವಿತ್ರಾ ಭಾವುಕ

Nimma Vasthugalige Neeve Javaabdaararu movie review

Nimma Vasthugalige Neeve Javaabdaararu review: ಜವಾಬ್ದಾರಿಯಿಂದ ಸಿನಿಮಾ ನೋಡಿ

Bangladesh: Tamim Iqbal bids farewell to international cricket

Bangladesh: ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ವಿದಾಯ ಹೇಳಿದ ತಮೀಮ್‌ ಇಕ್ಬಾಲ್

Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?

Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.