ಕಾಫಿ ನಾಡಲ್ಲಿ ಹೆಚ್ಚಾಯ್ತು ನೇತ್ರದಾನಿಗಳ ಸಂಖ್ಯೆ
Team Udayavani, Nov 8, 2021, 3:43 PM IST
ಚಿಕ್ಕಮಗಳೂರು: ರಕ್ತದಾನದಂತೆ ನೇತ್ರದಾನವುಶ್ರೇಷ್ಟವಾಗಿದ್ದು, ನೇತ್ರದಾನ ಇಂದಿನ ದಿನದಲ್ಲಿಅತ್ಯಂತ ಮಹತ್ವ ಪಡೆದುಕೊಳ್ಳುತ್ತಿದೆ.ವ್ಯಕ್ತಿಯ ಮರಣದ ನಂತರ ತಮ್ಮ ಕಣ್ಣುಗಳುಮಣ್ಣಾಗದಂತೆ ಕಾಪಾಡಿಕೊಂಡು ಮತ್ತೂಂದುಜೀವಕ್ಕೆ ಬೆಳಕು ನೀಡುವ ಮಹತ್ವದ ಕಾರ್ಯಕ್ಕೆಅನೇಕರು ಮುಂದಾಗುತ್ತಿದ್ದಾರೆ.
ಅದರಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿಅನೇಕರು ನೇತ್ರದಾನಕ್ಕೆಮುಂದಾಗಿದ್ದು, ಇದುವರೆಗೂಸುಮಾರು 2 ಸಾವಿರದಿಂದ3 ಸಾವಿರ ಮಂದಿ ನೇತ್ರದಾನಮಾಡಲು ಮುಂದಾಗಿದ್ದುನೋಂದಣಿ ಮಾಡಿಕೊಂಡಿದ್ದಾರೆಎಂದು ಕಣ್ಣಿನ ತಜ್ಞ ವೈದ್ಯರು ತಿಳಿಸಿದ್ದಾರೆ.
ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್ ಅವರು ತಮ್ಮ ಮರಣದ ನಂತರದ ತಮ್ಮೆರಡುಕಣ್ಣುಗಳನ್ನು ದಾನ ಮಾಡಿದ ಬಳಿಕ ಅವರಿಂದಪ್ರೇರಣೆಗೊಂಡು ಚಿಕ್ಕಮಗಳೂರು ನಗರದಸಿದ್ಧರಾಮೇಶ್ವರ ಸಂಘದ 150 ಕ್ಕೂ ಹೆಚ್ಚುಮಂದಿ ನೇತ್ರದಾನ ಮಾಡುವುದಾಗಿ ತಮ್ಮಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ.
ಇನ್ನು ನಗರದ ಸರ್ಕಾರಿ ಮಲ್ಲೇಗೌಡ ಜಿಲ್ಲಾಸ್ಪತ್ರೆಯ ನೇತ್ರದಾನ ಘಟಕದಲ್ಲಿ60-70 ಮಂದಿ ನೇತ್ರದಾನ ಮಾಡಲು ತಮ್ಮಹೆಸರುಗಳನ್ನು ನೋಂದಾಯಿಸಿಕೊಂಡಿದ್ದು,ಸ್ವಯಂಪ್ರೇರಣೆಯಿಂದ ನೇತ್ರದಾನಕ್ಕೆಮುಂದಾಗುತ್ತಿರುವುದು ಆಶಾದಾಯಕಬೆಳವಣಿಗೆಯಾಗಿದೆ.ನೇತ್ರದಾನದ ಬಗ್ಗೆ ಜಿಲ್ಲೆಯ ಜನತೆಯಲ್ಲಿಅರಿವು ಮೂಡಿಸುವ ನಿಟ್ಟಿನಲ್ಲಿ ಆರೋಗ್ಯಇಲಾಖೆ, ನೇತ್ರದಾನ ಘಟಕ ಹಾಗೂ ರೆಡ್‌ಕ್ರಾಸ್ ಸಂಸ್ಥೆ, ಜಿಲ್ಲಾ ಅಂಧತ್ವ ನಿವಾರಣಾ ಕೇಂದ್ರಸೇರಿದಂತೆ ಇತರೆ ಸಂಸ್ಥೆಗಳು ನಿರಂತರವಾಗಿ ಜನರಲ್ಲಿ ಜಾಗೃತಿ ಮೂಡಿಸುತ್ತಿವೆ.
ವ್ಯಕ್ತಿಯಮರಣದ ನಂತರ ಅಮೂಲ್ಯವಾದ ಕಣ್ಣುಗಳುಮಣ್ಣಾಗುವ ಬದಲು ಆ ಕಣ್ಣುಗಳು ಇನ್ನೊಬ್ಬರಬಾಳಿಗೆ ಬೆಳಕಾಗಲಿ. ಆ ನಿಟ್ಟಿನಲ್ಲಿ ತಮ್ಮ ಮರಣದನಂತರ ಕಣ್ಣುಗಳನ್ನು ದಾನವಾಗಿ ನೀಡುವಂತೆಬಹುತೇಕ ಜನರನ್ನು ಪ್ರೇರೇಪಿಸುವ ಕೆಲಸವನ್ನುಈ ಸಂಸ್ಥೆಗಳು ನಿರಂತರವಾಗಿ ಮಾಡಿಕೊಂಡುಬರುತ್ತಿವೆ.18 ವರ್ಷ ಮೇಲ್ಪಟ್ಟವರಿಂದ 65ವರ್ಷದವರೆಗಿನವರು ನೇತ್ರದಾನಮಾಡಬಹುದಾಗಿದೆ. ಹಾಗೂ ಸಕ್ಕರೆ ಕಾಯಿಲೆ,ಅ ಧಿಕ ರಕ್ತದೊತ್ತಡ ಸೇರಿದಂತೆ ಇತರೆಕಾಯಿಲೆಯಿಂದ ಬಳಲುತ್ತಿರುವರು ನೇತ್ರದಾನಮಾಡಬಹುದಾಗಿದೆ.
ಆರೋಗ್ಯವಂತಕಣ್ಣುಗಳನ್ನು ತೆಗೆದು ಇನ್ನೊಬ್ಬ ವ್ಯಕ್ತಿಗೆಅಳವಡಿಸುವುದರಿಂದ ಇನ್ನೊಬ್ಬರ ಬದುಕಿಗೆಬೆಳಕಾಗಬಹುದಾಗಿದೆ ಎಂದು ನೇತ್ರದಾನಕಾರ್ಯಕ್ರಮ ಯೋಜನಾ ಧಿಕಾರಿ ಡಾ|ಅಶ್ವಥ್‌ಬಾಬು ಹೇಳುತ್ತಾರೆ.ಜಿಲ್ಲೆಯಲ್ಲಿ ನೇತ್ರದಾನದ ಬಳಿಕ ಕಣ್ಣು ಗಳನ್ನು ಕಸಿಮಾಡುವ ಸೌಲಭ್ಯವಿರುವ ಆಸ್ಪತ್ರೆಗಳಿಲ್ಲದ ಕಾರಣಅಕ್ಕಪಕ್ಕದ ಜಿಲ್ಲೆಗಳಾದ ಮಂಗಳೂರು, ಶಿವಮೊಗ್ಗ,ಮೈಸೂರು, ಬೆಂಗಳೂರಿಗೆ ಇಲ್ಲಿ ಸಂಗ್ರಹಿಸಿದನೇತ್ರಗಳನ್ನು ಕಳುಹಿಸಿ ಕೊಡಲಾಗುತ್ತದೆ. ಜಿಲ್ಲೆಯಲ್ಲಿದಾನವಾಗಿ ಪಡೆದ ಕಣ್ಣುಗಳನ್ನು ಸಂಗ್ರಹಿಸಿಡಲುಆಧುನಿಕ ತಂತ್ರಜ್ಞಾನಗಳನ್ನು ಹೊಂದಿಲ್ಲದಕಾರಣದಿಂದ ನೇತ್ರದಾನಕ್ಕೆ ನೋಂದಣಿಯಾದವರಪಟ್ಟಿ ಯನ್ನು ಆಧುನಿಕ ತಂತ್ರಜ್ಞಾನವನ್ನು ಹೊಂದಿರುವ ಆಸ್ಪತ್ರೆಗಳಿಗೆ ರವಾನಿಸಲಾಗುತ್ತದೆ.
ಅಲ್ಲಿನೇತ್ರಗಳನ್ನು ಸಂಗ್ರಹಿಸಲಾಗುತ್ತದೆ ಎಂದುಸಂಬಂಧಪಟ್ಟ ಇಲಾಖೆಯ ಅಧಿ ಕಾರಿ ರಾಜುತಿಳಿಸಿದರು.ಇತ್ತೀಚಿನ ದಿನಗಳಲ್ಲಿ ನೇತ್ರದಾನಮಹತ್ವ ಪಡೆದುಕೊಂಡಿದ್ದು, ಕಾಫಿ ನಾಡಿನಲ್ಲಿನೇತ್ರದಾನಕ್ಕೆ ಹೆಚ್ಚೆಚ್ಚು ಜನ ಮುಂದಾಗುತ್ತಿದ್ದಾರೆ.ಇದರೊಂದಿಗೆ ಮರಣ ನಂತರ ಮಣ್ಣಲ್ಲಿಮಣ್ಣಾಗುವ ಕಣ್ಣುಗಳು ಇನ್ನೊಬ್ಬರ ಬದುಕಿಗೆಬೆಳಕಾಗಲು ಜನ ಮುಂದಾಗುತ್ತಿರುವುದುಉತ್ತಮ ಬೆಳವಣಿಗೆಯಾಗಿದೆ. ಈ ನಿಟ್ಟಿನಲ್ಲಿಜನಜಾಗೃತಿ ಮೂಡಿಸಲು ಆರೋಗ್ಯ ಇಲಾಖೆಮುಂದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Chikkamagaluru: ಮೂರು ದಿನದ ಬಾಣಂತಿ ಮೃತ್ಯು; ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.