ಸಿದ್ದರಾಮಯ್ಯನವರು ಗೋಸುಂಬೆ ತರ ಆಡಬಾರದು, ನಾವು ಸ್ಪಷ್ಟವಿದ್ದೇವೆ: ಸಿ.ಟಿ ರವಿ ಆಕ್ರೋಶ
Team Udayavani, Dec 18, 2020, 7:54 PM IST
ಚಿಕ್ಕಮಗಳೂರು: ಎರಡೂವರೇ ವರ್ಷದ ಬಳಿಕ ಸಿದ್ದರಾಮಯ್ಯ ಸೋಲಿಗೆ ಕಾರಣ ಹುಡುಕುತ್ತಿದ್ದಾರೆ. ಯಾರೂ ಕೂಡ ಉಗಿದಿರುವುದ್ದನ್ನ ಬಾಯಿಗೆ ಹಾಕಿಕೊಳ್ಳುವುದಿಲ್ಲ. ಸೋಲಿನ ಕಾರಣ ಗೊತ್ತಿತ್ತು, ಮತ್ತೇಕೆ ಜೆಡಿಎಸ್ ಜೊತೆ ಸರ್ಕಾರ ಮಾಡಿದಿರಿ. ಸಿದ್ದರಾಮಯ್ಯನವರು ಗೋಸುಂಬೆ ತರ ಆಡಬಾರದು ಎಂದು ಚಿಕ್ಕಮಗಳೂರಿನಲ್ಲಿ ಸಿದ್ದರಾಮಯ್ಯ ವಿರುದ್ಧ ಸಿ.ಟಿ. ರವಿ ವ್ಯಂಗ್ಯವಾಡಿದ್ದಾರೆ.
ನನ್ನ ಸೋಲಿಗೆ ನಮ್ಮವರೇ ಕಾರಣ ಎಂಬ ಸಿದ್ದು ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಮಗೆ ಜನಾಭಿಪ್ರಾಯವಿಲ್ಲ, ವಿರೋಧ ಪಕ್ಷದಲ್ಲಿ ಕೂರುತ್ತೇವೆ ಎನ್ನಬೇಕಿತ್ತು. ಆದರೇ ಯಾಕೆ ಜೆಡಿಎಸ್ ಜೊತೆ ಸರ್ಕಾರ ಮಾಡಿದ್ದರು ? ಉಗಿದದ್ದನ್ನ ಯಾರಾದರೂ ಬಾಯಿಗೆ ಹಾಕಿಕೊಳ್ಳುತ್ತಾರೆಯೇ ? ತನ್ನನ್ನ ಸೋಲಿಸಿದವರ ಜೊತೆನೇ ಸರ್ಕಾರ ಮಾಡುತ್ತಾರಾ ? ಎಂದು ಪ್ರಶ್ನಿಸಿದರು.
ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕೆಂದೇ ಒಟ್ಟಿಗೆ ಆಗಿದ್ದರು. ಇದೀಗ ಯಾವ ಮುಖ ಇಟ್ಟುಕೊಂಡು ಸತ್ಯವನ್ನು ಒಪ್ಪಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯನವರದ್ದು ನೈತಿಕ ರಾಜಕಾರಣಾನ ? ಈಗ ಕೈಗೆಟಕದ ದ್ರಾಕ್ಷಿ ಹುಳಿ ಎಂದು ನರಿ ಕಥೆ ಹೇಳಿದರೇ ಯಾರು ಕೇಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯನವರು ಅವರ ಸೋಲಿಗೆ ಕಾರಣ ಹುಡುಕಿದ್ದಾರೆ. ಆದರೇ ಅವರ ಸರ್ಕಾರ ಅಧಿಕಾರ ಕಳೆದುಕೊಂಡಿದ್ದಕ್ಕೆ ಕಾರಣ ಹುಡುಕಬೇಕಿತ್ತು. ದುರಹಂಕಾರ, ಭ್ರಷ್ಟಾಚಾರ, ಕೆಟ್ಟ ಆಡಳಿತದಿಂದ ಸೋತಿದ್ದಾರೆ. ನಾವು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿಲ್ಲ. ಒಂದು ವೇಳೆ ಬಿಜೆಪಿ-ಜೆಡಿಎಸ್ ಬಾದಾಮಿಯಲ್ಲೂ ಒಳ ಒಪ್ಪಂದ ಮಾಡಿಕೊಂಡಿದ್ದರೇ, ನೀವು (ಸಿದ್ದರಾಮಯಯ್ಯ) ಬಾದಾಮಿ ಕ್ಷೇತ್ರದಲ್ಲೂ ಸೋಲಬೇಕಿತ್ತು. ಅಲ್ಲಿ ಗೆದ್ದಿದ್ದು ಕೇವಲ ಸಾವಿರ ಚಿಲ್ಲರೆ ವೋಟಿನಲ್ಲಿ. ಅದು ಮುಖ್ಯಮಂತ್ರಿ ಆದವರಿಗೆ ಗೌರವ ತರುವ ಗೆಲುವೇ ಅಲ್ಲ.
ಇದನ್ನೂ ಓದಿ: ಹರಾಜು ಮೂಲಕ ಅವಿರೋಧ ಆಯ್ಕೆ; ಬೈಲೂರಿನ 13 ಸದಸ್ಯರನ್ನು ಅಸಿಂಧುಗೊಳಿಸಿದ ಚುನಾವಣಾ ಆಯೋಗ
ಸಿದ್ದರಾಮಯ್ಯ ಈಗ ಏಕೆ ತಾಜ್ ವೆಸ್ಟ್ ಎಂಡ್ ಕಥೆ ತೆಗೆಯುತ್ತಿದ್ದಾರೆ. ವೆಸ್ಟ್ ಎಂಡ್ ಅಡ್ರೆಸ್ ಗೊತ್ತಾದ ಮೇಲೆಯೇ ಲೋಕಸಭೆ ಚುನಾವಣೆ ಒಟ್ಟಿಗೆ ಮಾಡಿರುವುದು. ಅಧಿಕಾರಿ ಹಂಚಿಕೊಂಡು ತನ್ನವರ ಮಂತ್ರಿ ಮಾಡುವಾಗ ವೆಸ್ಟ್ ಎಂಡ್ ಅಡ್ರೆಸ್ ಗೊತ್ತಿರಲಿಲ್ಲವೇ ?
ನಿಮ್ಮ ಹಳೇ ಮಾತಿಗೂ ಈಗಿನ ಮಾತಿಗೂ ವ್ಯತ್ಯಾಸವೇಕೆ, ಅರುಳು-ಮರುಳಾ…? ಘಳಿಗೆಗೊಮ್ಮೆ ಬಣ್ಣ ಬದಲಾಯಿಸಿದರೆ ಗೋಸುಂಬೆ ಅಂತಾರೆ. ಸಿದ್ದರಾಮಯ್ಯನವರು ಗೋಸುಂಬೆ ತರ ಆಡಬಾರದು. ನಾವು ಸ್ಪಷ್ಟವಿದ್ದೇವೆ, ಎಂದಿಗೂ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದು ಕಿಡಿಕಾರಿದರು.
ಅವತ್ತು ಜೆಡಿಎಸ್ ಜೊತೆ ನಿಂತು ಬೆಂಬಲ ನೀಡಿದವರು ಯಾರು. ನಾನು ದಳ-ಕಾಂಗ್ರೆಸ್ ವಕ್ತಾರನಲ್ಲ, ನಾನು ನಮ್ಮ ಪಕ್ಷದ ವಕ್ತಾರ. ನಾನು ದಳ-ಕಾಂಗ್ರೆಸ್, ಸಿದ್ದರಾಮಯ್ಯ-ಕುಮಾರಸ್ವಾಮಿ ಯಾರನ್ನೂ ಸಮರ್ಥಿಸಿಲ್ಲ ನಾವು ವಿಚಾರದ ಆಧಾರ, ಕಾರ್ಯಕರ್ತರಿಂದ ಪಕ್ಷವನ್ನ ಅಧಿಕಾರಕ್ಕೆ ತಂದಿದ್ದೇವೆ ಎಂದು ಸಿ.ಟಿ ರವಿ ತಿಳಿಸಿದ್ದಾರೆ.
ಇದನ್ನೂ ಓದಿ: ಕೊಡಗಿನ ವಿಶಿಷ್ಟ ಸಂಸ್ಕೃತಿಗೆ ಸಾಕ್ಷಿಯಾದ “ಕೊಂಬಾಟ್ ನಮ್ಮೆ”: ಮೂರು ವಾರಗಳ ಹಬ್ಬಕ್ಕೆ ತೆರೆ !
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
High Court: ಕ್ರಿಮಿನಲ್ ಕೇಸ್ ಡೈರಿ ಪ್ರತೀ ಪುಟಕ್ಕೆ ಸಹಿ:ಅರ್ಜಿ ವಜಾಗೊಳಿಸಿದ ಹೈಕೋರ್ಟ್
Bengaluru: ಸುವರ್ಣ ಸಂಭ್ರಮದಲ್ಲಿ ರಾಜ್ಯೋತ್ಸವ ವೈಭವ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.