ಶೃಂಗೇರಿ ಶ್ರೀ ಚಾತುರ್ಮಾಸ್ಯ: ಕರಾಡ ಸಮಾಜ ಭೇಟಿ
Team Udayavani, Jul 23, 2017, 6:40 AM IST
ಕಾಸರಗೋಡು: ವ್ಯಕ್ತಿ ಯಾವುದೇ ಧರ್ಮದಲ್ಲಿದ್ದರೂ ಧರ್ಮಾಚರಣೆ ಬಿಡಬಾರದು. ಧರ್ಮಾಚರಣೆ ಮಾಡಿದವರು ಜೀವನದಲ್ಲಿ ಶ್ರೇಯಸ್ಸು ಪಡೆಯಲು ಸಾಧ್ಯ ಎಂದು ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾ ಸ್ವಾಮಿಗಳು ಹೇಳಿದರು.
ಶೃಂಗೇರಿ ಮಠದಲ್ಲಿ ನಡೆಯುವ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿ ಮತ್ತು ತತ್ಕರಕಮಲ ಸಂಜಾತ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿ ಅವರ ಚಾತುರ್ಮಾಸ್ಯ ಪ್ರಯುಕ್ತ ಕರಾಡ ಬ್ರಾಹ್ಮಣ ಸಮಾಜ ಶೃಂಗೇರಿ ಸಂಪರ್ಕ ಸಮಿತಿ ವತಿಯಿಂದ ನಡೆದ ಗುರುದರ್ಶನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಧರ್ಮಾಚರಣೆಗೆ ಸಾಕಷ್ಟು ಅವಕಾಶಗಳಿವೆ
ಪ್ರತಿಯೊಬ್ಬರಿಗೂ ಧರ್ಮಾಚರಣೆಗೆ ಬೇಕಾದ ಸಾಕಷ್ಟು ಅವಕಾಶಗಳಿವೆ. ಆದರೆ ಅದನ್ನು ಸದುಪ ಯೋಗಪಡಿಸಿಕೊಳ್ಳುವ ಗುಣ ಹೊಂದಿರ ಬೇಕು. ಧರ್ಮದ ಆಚರಣೆ ಜೀವನದ ಪರಮಾರ್ಥ ವಾಗಬೇಕು. ಈ ಮೂಲಕ ಮನುಷ್ಯ ಜನ್ಮವನ್ನು ಸಾರ್ಥಕವಾಗಿಸಬೇಕು. ಅಲ್ಲದೆ ಧರ್ಮಾಚರಣೆ ಮಾಡುವ ಮೂಲಕ ಅಧರ್ಮದ ಕಡೆಗೆ ಹೋಗದಂತೆ ಸ್ವಯಂ ನಿಯಂತ್ರಣ ಹಾಕಿಕೊಳ್ಳಬೇಕು ಎಂದರು.
ಶಿಷ್ಯರಾದವರಿಗೆ ಗುರು ಸೇವೆ ಎಂಬುದು, ಗುರು ಗಳಾದವರಿಗೆ ಶಿಷ್ಯರನ್ನು ಹರಸುವುದು ಬಹುದೊಡ್ಡ ಕರ್ತವ್ಯ. ಗುರುಗಳು ಯಾವತ್ತೂ ಶಿಷ್ಯರ ಹಿತವನ್ನು ಬಯಸುತ್ತಾರೆ. ಅದೇ ರೀತಿ ಶಿಷ್ಯರಾದವರು ಯಾವತ್ತೂ ಗುರುಗಳಿಗೆ ವಿಧೇಯರಾಗಿರುತ್ತಾರೆ ಎಂದರು.
ಶ್ರೀ ವಿಧುಶೇಖರಭಾರತೀ ಮಹಾಸ್ವಾಮೀಜಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭ ದಲ್ಲಿ ಕರಾಡ ಬ್ರಾಹ್ಮಣ ಸಮಾಜದ ವತಿಯಿಂದ ಶೃಂಗೇರಿಯಲ್ಲಿ ಒಂದು ದಿನದ ಶಾಶ್ವತ ಅನ್ನದಾನ ಸೇವೆಗೆ 1.75 ಲಕ್ಷ ರೂ. ನಿಧಿಯನ್ನು ಶೃಂಗೇರಿಯ ಜಗದ್ಗುರುಗಳಿಗೆ ಸಮರ್ಪಿಸಲಾಯಿತು.
ಈ ಸಂದರ್ಭದಲ್ಲಿ ಆನೆಮಜಲು ವಿಷ್ಣು ಭಟ್, ಬಾಲಕೃಷ್ಣ ಭಟ್ ಕೋಳಿಕ್ಕಜೆ, ಹರೀಶ ಭಟ್ ಆಟಿಕುಕ್ಕೆ, ವೆಂಕಟೇಶ ಭಟ್, ಕರಾಡ ಬ್ರಾಹ್ಮಣ ಅಭ್ಯುದಯ ಸಂಘದ ಅಧ್ಯಕ್ಷ ಶಂಕರನಾರಾಯಣ ಭಟ್, ರಾಜಾರಾಂ ಪೆರ್ಲ, ರಂಗಶರ್ಮಾ ಉಪ್ಪಂಗಳ, ವಿಷ್ಣುಮೋಹನ ಐಲುಕುಂಜೆ, ರಾಜೇಶ್ ಮಜಕ್ಕಾರ್, ಗುಂಡ್ಯಡ್ಕ ಸಂಘದ ಅಧ್ಯಕ್ಷ ಗಣೇಶ್ ಭಟ್, ಪ್ರಭಾತ್ ಕುರುಮುಜ್ಜಿ, ಸುಬ್ರಹ್ಮಣ್ಯ ಭಟ್ ಇಂದಾಜೆ, ಎಸ್.ವಿ. ಭಟ್, ಪುರುಷೋತ್ತಮ ಭಟ್ ಮಠದಮೂಲೆ, ರಾಧಾಕೃಷ್ಣ ಭಟ್ ಆನೆಮಜಲು ಹಾಗೂ ಸುಮಾರು 500 ಕರಾಡ ಬಾಂಧವರು ಭಾಗವಹಿಸಿದರು. ಬಾಲಕೃಷ್ಣ ಭಟ್ ಕೋಳಿಕ್ಕಜೆ ಸರ್ವ ಕರಾಡ ಬಾಂಧವರ ಕುರಿತು ಪ್ರಸ್ತಾವಿಸಿದರು. ಅನಂತರ ಎಲ್ಲ ಊರುಗಳ ಕರಾಡ ಸಮಾಜ ಬಾಂಧವರ ಸಭೆ ಜರಗಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Byndoor: ಮೀನು ಸಾಗಿಸುವ ವಾಹನದಲ್ಲಿ ಜಾನುವಾರು ಸಾಗಾಟ!
Aishwarya Rai ಖುಷಿಗಿಂತ ಬೇರೇನು ಬೇಕು?: ಮಾಜಿ ಪ್ರೇಮಿ ಸಲ್ಮಾನ್
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.