ಕೋವಿಡ್ ತಡೆಗೆ ಸರ್ಕಾರಿ ನಿಯಮ ಪಾಲಿಸಲು ಸಲಹೆ
Team Udayavani, May 13, 2020, 3:23 PM IST
ಸಾಂದರ್ಭಿಕ ಚಿತ್ರ
ಶೃಂಗೇರಿ: ಸರಕಾರ ರೂಪಿಸಿರುವ ನಿಯಮವನ್ನು ಪ್ರತಿಯೊಬ್ಬರೂ ಕಟ್ಟುನಿಟ್ಟಾಗಿ ಪಾಲಿಸುವುದರಿಂದ ಮಾತ್ರ ಕೋವಿಡ್ ರೋಗವನ್ನು ತಡೆಗಟ್ಟಬಹುದಾಗಿದೆ ಎಂದು ತಾಪಂ ಅಧ್ಯಕ್ಷೆ ಜಯಶೀಲ ಹೇಳಿದರು.
ತಾಪಂ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಕೋವಿಡ್-19 ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಮ ಮಟ್ಟದಿಂದ ನಿಯಮವನ್ನು ಅನುಸರಿಸಬೇಕಾಗಿದ್ದು, ಪ್ರತಿಯೊಬ್ಬರಿಗೂ ಮಾಸ್ಕ್ ನ್ನು ಉಚಿತವಾಗಿ ವಿತರಿಸಬೇಕು. ರಾಜ್ಯ ಹಾಗೂ ಹೊರ ರಾಜ್ಯದಿಂದ ಜನರು, ಕಾರ್ಮಿಕರು, ಉದ್ಯೋಗಸ್ಥರು ಹಳ್ಳಿ ಕಡೆಗೆ ಬರುತ್ತಿದ್ದು ಇವರ ಬಗ್ಗೆ ಕೂಡಲೇ ತಾಲೂಕು ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಹೊರಗಿನಿಂದ ಬಂದವರ ಹಾಗೂ ಅವರ ಕುಟುಂಬದ ಸದಸ್ಯರೆಲ್ಲರ ಆರೋಗ್ಯ ತಪಾಸಣೆ ನಡೆಸಿ, ಅವರನ್ನು 28 ದಿನಗಳ ಹೋಂ ಕ್ವಾರಂಟೈನ್ ಇರಿಸುವುದರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಅವರು ಮನೆಯಿಂದ ಹೊರಬಾರದಂತೆ ಎಚ್ಚರಿಕೆ ಕೊಡುವುದಲ್ಲದೇ ನಿಗಾ ವಹಿಸುವ ಕೆಲಸ ಆಗಬೇಕು ಎಂದು ಸೂಚಿಸಿದರು.
ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ವಿ.ಪ್ರವೀಣ್ ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿ ಕೋವಿಡ್ ವೈರಸ್ ಬಂದಿರುವುದು ಧೃಡಪಟ್ಟಿರುವುದರಿಂದ ನಾವು ತೀವ್ರ ನಿಗಾ ವಹಿಸಬೇಕು ಎಂದರು. ತಾಪಂ ಇಒ ಸುದೀಪ್ ಮಾತನಾಡಿದರು. ತಾಪಂ ಉಪಾಧ್ಯಕ್ಷೆ ಚಂದ್ರಮತಿ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಸಭೆಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Elephant: ಕಾಫಿನಾಡಿನಲ್ಲಿ ಕಾಡಾನೆ ನೈಟ್ ರೌಂಡ್ಸ್… ಇದು ಮುಗಿಯದ ಗೋಳು ಎಂದ ಗ್ರಾಮಸ್ಥರು
Chikkamagaluru: ರೋಬೋಟಿಕ್ ಆನೆಯನ್ನು ಅರಣ್ಯ ಇಲಾಖೆಗೆ ಕೊಡುಗೆ ನೀಡಿದ ಬಾಲಿವುಡ್ ನಟಿ
Mundugaru:ನಕ್ಸಲ್ ಪೀಡಿತ ಪ್ರದೇಶದಲ್ಲಿ ಪೇಜಾವರ ಶ್ರೀಗಳ ಸಂಚಾರ; ಕಾಡಿನಲ್ಲಿ ರಾಮಮಂತ್ರ ಘೋಷ
Chikkamagaluru: ದತ್ತ ಜಯಂತಿ ಶೋಭಾಯಾತ್ರೆ ಆರಂಭ
Chikkamagaluru: ಲಾಠಿಚಾರ್ಜ್ ಬಗ್ಗೆ ಗೃಹ ಸಚಿವರಿಂದ ದಾಷ್ಟ್ಯದ ಮಾತು: ಸಿ.ಟಿ.ರವಿ ಟೀಕೆ
MUST WATCH
ಹೊಸ ಸೇರ್ಪಡೆ
Pakistan:ಅಕ್ರಮ ಶಸ್ತ್ರಾಸ್ತ್ರ, ಸಿಂಹದ ಮರಿ ಸಾಕಿದ್ದ ಪಾಕಿಸ್ತಾನಿ ಖ್ಯಾತ ಯೂಟ್ಯೂಬರ್ ಬಂಧನ
Sandalwood: ‘ಕುಲದಲ್ಲಿ ಕೀಳ್ಯಾವುದೋ’ ಆಡಿಯೋ ಮಾರಾಟ
Darshan: ಜಾಮೀನು ಹಿನ್ನೆಲೆ: ಮತ್ತೆ ಕೋರ್ಟ್‌ಗೆ ಹಾಜರಾದ ದರ್ಶನ್
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Stock Market: ಷೇರುಪೇಟೆ ಸೂಚ್ಯಂಕ 400ಕ್ಕೂ ಅಧಿಕ ಅಂಕ ಕುಸಿತ, ನಿಫ್ಟಿಯೂ ಇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.