ಕೆರೆ ಅಭಿವೃದ್ಧಿಗೆ ನಿರ್ವಹಣೆ ಕೊರತೆ
ಬಹುತೇಕ ಕೆರೆಗಳಲ್ಲಿ ಬೆಳೆದ ಗಿಡ-ಗಂಟಿಬಸ್ ನಿಲ್ದಾಣ, ಮಾರುಕಟ್ಟೆ, ವಸತಿ ಗೃಹವಾದ ಕೆರೆಗಳು
Team Udayavani, Mar 9, 2020, 4:33 PM IST
ಶೃಂಗೇರಿ: ತಾಲೂಕಿನಲ್ಲಿ ಸಾಕಷ್ಟು ಕೆರೆಗಳಿದ್ದರೂ ಬಹುತೇಕ ಕೆರೆಗಳು ನಿರ್ವಹಣೆ ಇಲ್ಲದೇ ಹೂಳು ತುಂಬಿದ್ದರೆ, ಇನ್ನಷ್ಟು ಕೆರೆಗಳು ಗಿಡ ಗಂಟಿಯಿಂದ ಮುಚ್ಚಿ ಅವಸಾನದ ಅಂಚಿಗೆ ತಲುಪಿವೆ.
ಸರ್ಕಾರ ಕೆರೆಗಳ ಅಭಿವೃದ್ಧಿಗಾಗಿ ಹಲವಾರು ಯೋಜನೆ ಹಮ್ಮಿಕೊಂಡಿದ್ದರೂ ಹಲವಾರು ಕೆರೆಗಳು ಅವಸಾನದ ಅಂಚಿಗೆ ತಲುಪಿರುವುದು ದುರ್ದೈವ. ಹೀಗಾಗಿ ಅಂತರ್ಜಲ ಕುಸಿತದ ಪರಿಣಾಮದಿಂದ ಕುಡಿಯುವ ಹನಿ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ಎರಡು ಹೋಬಳಿಯಲ್ಲಿ ಹಾಗೂ ಪಟ್ಟಣ ಸೇರಿದಂತೆ 154 ಕೆರೆಗಳಿವೆ. ಪಟ್ಟಣದಲ್ಲಿದ್ದ ಕೆರೆ ಮುಚ್ಚಿ ಅದೀಗ ನೂತನ ಬಸ್ ನಿಲ್ದಾಣ ಮತ್ತು ಮಾರುಕಟ್ಟೆ ಮಳಿಗೆ, ವಸತಿ ಗೃಹವಾಗಿ ಮಾರ್ಪಾಡು ಹೊಂದಿದೆ. ಹಾಲಿ ಬಸ್ ನಿಲ್ದಾಣದ ಸಮೀಪ ಕೆರೆದಂಡೆ ಎಂದೇ ಹೆಸರಿದ್ದು, ಇಲ್ಲಿರುವ ಆಂಜನೇಯಸ್ವಾಮಿ ದೇಗುಲ ಕೆರೆ ಆಂಜನೇಯಸ್ವಾಮಿ ದೇಗುಲವೆಂದೇ ಪ್ರಚಲಿತವಾಗಿದೆ. ವಿಶಾಲವಾಗಿದ್ದ ಕೆರೆ ಮುಚ್ಚಿ ಅದೀಗ ಬಸ್ ನಿಲ್ದಾಣವಾಗಿದ್ದರೂ, ಕೆರೆ ಎಂಬ ಪದ ಈಗಲೂ ಬಳಕೆಯಲ್ಲಿದೆ.
ರಾಷ್ಟ್ರೀಯ ಹೆದ್ದಾರಿ 169ರ ಉಳುವೆ ಪಕ್ಷಿಧಾಮ ಹೆಸರುವಾಸಿಯಾಗಿದೆ. ಅದು ಇದೀಗ ಕೆರೆ ವಿನಾಶದ ಅಂಚಿನಲ್ಲಿದ್ದು, ವಾಹನಗಳ ಸಂಚಾರ, ಕೆರೆ ಅಭಿವೃದ್ಧಿಯಿಲ್ಲದೇ ಪಕ್ಷಿಗಳು ಇಲ್ಲಿಗೆ ಬರುವುದು ಕಡಿಮೆಯಾಗಿದೆ. ಕೆರೆಯ ನೀರು, ಸುತ್ತಲಿನ ಕಾಡು ಪಕ್ಷಿಗಳ ಸಂತಾನೋತ್ಪತ್ತಿಗೆ ಸೂಕ್ತವಾದ ಈ ಕೆರೆ ಇದೀಗ ನೇಪಥ್ಯಕ್ಕೆ ಸೇರುತ್ತಿದೆ. ಪಕ್ಷಿಗಳು ವಾಹನ ಸಂಚಾರ, ವಿದ್ಯುತ್ ಸಂಪರ್ಕದ ಮಾರ್ಗ ಮತ್ತಿತರ ಅಡಚಣೆಯಿಂದ ಪಕ್ಷಿಗಳು ಕೆರೆಯಿಂದ ದೂರ ಉಳಿಯುತ್ತಿವೆ.
ಪುನಃಶ್ಚೇತನವಿಲ್ಲ: ಮೆಣಸೆ ಗ್ರಾಪಂಯ ಮಸಿಗೆ ಗ್ರಾಮದ ಕಿರಕೋಡು ಕೆರೆ ಪಕ್ಷಿಗಳನ್ನು ಆಕರ್ಷಿಸುತ್ತಿದೆ. ಆದರೆ ಕೆರೆ ಪುನಃಶ್ಚೇತನ ಆಗದಿರುವುದರಿಂದ ಕೆರೆಯಲ್ಲಿ ಗಿಡ-ಗಂಟಿಗಳು ಬೆಳೆದು ಇಡೀ ಕೆರೆ ಮುಚ್ಚುತ್ತಿದೆ. ಆದರೂ ಸಾಕಷ್ಟು ಬೆಳ್ಳಕ್ಕಿಗಳು ಮತ್ತಿತರ ಪಕ್ಷಿಗಳು ಸಂತೋನಾತ್ಪತ್ತಿಗಾಗಿ ಈ ಕೆರೆ ಅವಲಂಬಿಸುತ್ತಿವೆ. ಕೆರೆಯಲ್ಲಿ ಹೂಳು ತುಂಬಿದ್ದು, ಶುದ್ಧ ನೀರಿನ ಕೊರತೆ ದೊರಕದಂತಾಗಿದೆ.
ರಾಜ್ಯ ಹೆದ್ದಾರಿ ಶೃಂಗೇರಿ ಆಗುಂಬೆ ನಡುವೆ ಇರುವ ನೆಲ್ಲೂರು ಕೆರೆ ರಸ್ತೆ ಬದಿಯಲ್ಲಿ ವಿಶಾಲವಾಗಿದೆ. ಈ ಕೆರೆ ನೂರಾರು ವರ್ಷದ ಇತಿಹಾಸ ಹೊಂದಿದ್ದು, ಜಮೀನಿಗೆ ನೀರೊದಗಿಸುತ್ತಿದೆ. ಕೆರೆಯ ಆಸು-ಪಾಸಿನಲ್ಲಿ ಒತ್ತುವರಿಯಾಗಿರುವ ಕಾರಣದಿಂದ ಕೆರೆಯಲ್ಲಿ ನೀರು ಸಂಗ್ರಹವಾಗುವ ಪ್ರದೇಶ ಕಡಿಮೆಯಾಗುತ್ತಿದೆ. ಗ್ರಾಪಂ ಸಮೀಪದ ಹಳ್ಳಿಗಳಿಗೆ ಈ ಕೆರೆಯಿಂದಲೇ ಕುಡಿಯುವ ನೀರು ಪೂರೈಸುತ್ತಿದೆ.
ಉಪಯೋಗಕ್ಕೆ ಬಾರದಂತಾದ ಕೆರೆಗಳು: ತಾಲೂಕಿನಾದ್ಯಂತ ಸಣ್ಣ ಕೆರೆಗಳು ಸಾಕಷ್ಟು ಇದ್ದರೂ, ಹೂಳು ತುಂಬಿರುವುದು, ಕೆರೆಯ ದುರಸ್ತಿಯಾಗದೇ ಗಿಡ-ಗಂಟಿ ಮುಚ್ಚಿ ಉಪಯೋಗಕ್ಕೆ ಬಾರದಂತಾಗುತ್ತಿವೆ. ಖಾಸಗಿಯಾಗಿ ರೈತರ ಜಮೀನೊಳಗಿನ ಕೆರೆಗಳು ಜಮೀನಿಗೆ ನೀರೊದಗಿಸಲು ಮಾತ್ರ ಉಪಯೋಗವಾಗುತ್ತಿದೆ. 2018-19ನೇ ಸಾಲಿನಲ್ಲಿ ಧರೆಕೊಪ್ಪ ಗ್ರಾಪಂಯ ಹೊನ್ನವಳ್ಳಿ ಗದ್ದೆಬೈಲಿನ ಕೆರೆ 6.58 ಲಕ್ಷ ಹಾಗೂ ಕೂತಗೋಡು ಗ್ರಾಪಂ ಯ ಕಲ್ಲಾಳಿ ಕೆರೆ 3.29 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿಯಾಗಿದೆ.
2019-2020ರಲ್ಲಿ ಧರೆಕೊಪ್ಪ ಗ್ರಾಪಂಯ ಚೇರ್‌ಗೊàಡು ಕೆರೆಯನ್ನು 2.5 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಹಗಡೂರು ಕೆಳಗಿನ ಕೆರೆ ಹಾಗೂ ಮರ್ಕಲ್ ಗ್ರಾಪಂಯ ಹೊಳಂದೂರು ತೋಟದ ಕೆರೆ ಅಭಿವೃದ್ಧಿಗೆ ಅನುದಾನ ಮೀಸಲಿರಿಸಲಾಗಿದೆ.
ಮಲೆನಾಡಿನಲ್ಲಿ ಏರು-ತಗ್ಗು ಪ್ರದೇಶವೇ ಹೆಚ್ಚಾಗಿರುವುದರಿಂದ ದೊಡ್ಡ ಕೆರೆಗಳ ಸಂಖ್ಯೆ ಕಡಿಮೆ. ಇರುವ ಕೆರೆಗಳನ್ನು ಸುಸ್ಥಿತಿಯಲ್ಲಿಡಲು ಸರ್ಕಾರ ಹೆಚ್ಚಿನ ಅನುದಾನ ಒದಗಿಸಬೇಕು. ಹೂಳು ತುಂಬಿ ಗಿಡಗಳು ಬೆಳೆಯುತ್ತಿದ್ದಂತೆ, ಅಲ್ಲಿ ಒತ್ತುವರಿ ಆರಂಭವಾಗುತ್ತದೆ. ಸರ್ಕಾರ ಆಯಾ ಗ್ರಾಪಂ ವ್ಯಾಪ್ತಿಯ ಕೆರೆ ಗುರುತಿಸಿ ಅಭಿವೃದ್ಧಿಪಡಿಸುವುದರಿಂದ ಅಂತರ್ಜಲ ಹೆಚ್ಚುತ್ತಿದ್ದು, ಇದರಿಂದ ಜಮೀನು- ಕುಡಿಯುವ ನೀರಿನ ಪೂರೈಕೆಗೆ ಅನುಕೂಲವಾಗುತ್ತದೆ.
ಎಂ.ಪಿ. ಚಂದ್ರಹಾಸ,
ಮಸಿಗೆ (ಶೃಂಗೇರಿ)
ಸರ್ಕಾರ ನೀಡುತ್ತಿರುವ ಅನುದಾನ ಉಪಯೋಗಿಸಿ ತಾಲೂಕಿನ ಕೆರೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕಳೆದ ವರ್ಷ ಬಿಡುಗಡೆಯಾದ ಅನುದಾನ ಉಪಯೋಗಿಸಿಕೊಂಡು ಮೂರು ಕೆರೆ ಅಭಿವೃದ್ಧಿ ಮಾಡಲಾಗಿದೆ. ಈ ವರ್ಷವೂ ಕೆರೆ ಹೂಳೆತ್ತಲು ಕ್ರಮ ಕೈಗೊಳ್ಳಲಾಗುತ್ತದೆ.
ಸೈಪುಲ್ಲಾ,
ಜಿಪಂ ಇಂಜಿನಿಯರ್, ಶೃಂಗೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Chikkamagaluru: ಮೂರು ದಿನದ ಬಾಣಂತಿ ಮೃತ್ಯು; ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.