ವಿದ್ಯಾರಣ್ಯಪುರ ಗ್ರಾಪಂನ ನೂತನ ಮಹಡಿ ಕಟ್ಟಡ ಉದ್ಘಾಟನೆ
Team Udayavani, Jun 7, 2020, 3:33 PM IST
ಶೃಂಗೇರಿ: ವಿದ್ಯಾರಣ್ಯಪುರ ಗ್ರಾಪಂ ಮೊದಲ ಮಹಡಿಯನ್ನು ಶಾಸಕ ಟಿ.ಡಿ. ರಾಜೇಗೌಡ ಉದ್ಘಾಟಿಸಿದರು.
ಶೃಂಗೇರಿ: ಗ್ರಾಪಂ ಕಟ್ಟಡದೊಂದಿಗೆ ಶಾಶ್ವತ ಆದಾಯ ತಂದುಕೊಡುವ ಮಹಡಿ ನಿರ್ಮಿಸಿ, ಸಾರ್ವಜನಿಕರಿಗೂ ಅನುಕೂಲ ಕಲ್ಪಿಸಲಾಗಿದೆ ಎಂದು ಶಾಸಕ ಟಿ.ಡಿ. ರಾಜೇಗೌಡ ಹೇಳಿದರು.
ಪಟ್ಟಣದ ಹೊರವಲಯದ ವಿದ್ಯಾರಣ್ಯಪುರ ಗ್ರಾಪಂನ ಮೊದಲ ಮಹಡಿಯ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ಮಲೆನಾಡಿನಲ್ಲಿ ಆರ್‌ಸಿಸಿ ಕಟ್ಟಡ ಸೋರಿಕೆಯಾಗುವುದು ಸಾಮಾನ್ಯವಾಗಿದೆ. ಮೊದಲ ಮಹಡಿ ನಿರ್ಮಿಸಿ, ಸೋರಿಕೆಯನ್ನು ತಪ್ಪಿಸಿದಂತಾಗಿದೆ. ಕಟ್ಟಡವು ವಿಶಾಲವಾಗಿದ್ದು, ಕಚೇರಿ ಉಪಯೋಗಕ್ಕೆ ಅನುಕೂಲವಾಗಿದೆ ಎಂದರು.
ಗ್ರಾಪಂ ಅಧ್ಯಕ್ಷ ರಾಜೇಶ್ ಶೆಟ್ಟಿ ಮಾತನಾಡಿ, ಗ್ರಾಪಂ ಸ್ವಂತ ನಿಧಿ 13 ಲಕ್ಷ ರೂ. ವೆಚ್ಚದಲ್ಲಿ ಗ್ರಾಪಂ ಮೊದಲ ಮಹಡಿ ನಿರ್ಮಿಸಲಾಗಿದೆ. ಕಟ್ಟಡದ ಉದ್ಘಾಟನೆಯನ್ನು ಅದ್ಧೂರಿಯಾಗಿ ನಡೆಸಲು ಉದ್ದೇಶಿಸಲಾಗಿತ್ತಾದರೂ, ಕೋವಿಡ್ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಸರಳಗೊಳಿಸಲಾಗಿದೆ. ಗ್ರಾಪಂ ಸದಸ್ಯರ ಸಹಕಾರದಿಂದ ಉತ್ತಮ ಕಟ್ಟಡ ನಿರ್ಮಿಸಲಾಗಿದೆ ಎಂದರು. ತಾಪಂ ಸದಸ್ಯೆ ಶಿಲ್ಪಾ ಮಂಜುನಾಥ್, ಇಒ ಸುದೀಪ್, ಗ್ರಾಪಂ ಸದಸ್ಯರು, ಗ್ರಾಪಂ ಅಭಿವೃದ್ಧಿ ಅಧಿಕಾರಿ ಉಪೇಂದ್ರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
Chikkamagaluru: ಕೇರಳದಿಂದ “ಸುರಕ್ಷಿತ’ ಮಲೆನಾಡಿನತ್ತ “ನಕ್ಸಲರು’?
Naxalite: ಮಲೆನಾಡಿಗೆ ನಕ್ಸಲರ ಭೇಟಿ ದೃಢ; 3 ಬಂದೂಕು-ಮದ್ದುಗುಂಡು ವಶ
ಚಿಕಿತ್ಸೆಗೆಂದು ಬಂದಿದ್ದ ರೋಗಿ ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರ ಆರೋಪ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.