ಆರ್ಕೆಸ್ಟ್ರಾ ತಂಡದಲ್ಲಿ ಅಶ್ಲೀಲ ನೃತ್ಯ ನಿಲ್ಲಿಸಿ
Team Udayavani, Feb 6, 2018, 5:33 PM IST
ಭದ್ರಾವತಿ: ಸಂಗೀತ, ನೃತ್ಯ ಹಾಗೂ ಇನ್ನಿತರ ಕಲಾವಿದರು ತಮ್ಮ ಜೀವನೋಪಾಯಕ್ಕಾಗಿ ಊರೂರು ಸುತ್ತುತ್ತಾ ಕಲೆಗಳನ್ನು ಪ್ರದರ್ಶನ ಮಾಡುತ್ತಿದ್ದಾರೆ. ಹಣದ ಆಸೆಗಾಗಿ ಕೆಲವು ಆರ್ಕೆಸ್ಟ್ರಾ ಕಲಾವಿದರು ಅಶ್ಲೀಲ ನೃತ್ಯದಂತಹ ಕೆಟ್ಟ ಸಂಸ್ಕೃತಿಯನ್ನು ಬಿಂಬಿಸುತ್ತಿದ್ದಾರೆ ಎಂದು ಲಘು ಸಂಗೀತ ಕಲಾವಿದರ ರಾಜ್ಯಾಧ್ಯಕ್ಷೆ ಮಂಗಳಾ ಹೇಳಿದರು.
ಅಶ್ಲೀಲ ನೃತ್ಯಗಳಿಗೆ ಆಸ್ಪದ ನೀಡುತ್ತಿರುವ ಆರ್ಕೆಸ್ಟ್ರಾ ತಂಡಗಳನ್ನು ನಿಷೇ ಧಿಸುವಂತೆ ಒತ್ತಾಯಿಸಿ ನಗರದ ಸಪ್ತಸ್ವರ ಸಾಂಸ್ಕೃತಿಕ ಸಂಸ್ಥೆಯ ಕಲಾವಿದರು ಹಾಗು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸೋಮವಾರ ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಕಲಾವಿದರಿಗೆ ಕಲೆಯೆ ಬದುಕಾಗಬೇಕೆ ವಿನಃ ಆರ್ಕೆಸ್ಟ್ರಾ ಹೆಸರಲ್ಲಿ ಹರೆಯದ ಹೆಣ್ಣುಮಕ್ಕಳನ್ನು ಬಳಸಿಕೊಂಡು ಅರೆಬರೆ ಬಟ್ಟೆತೊಟ್ಟು ನಂಗಾನಾಚ್
ನೃತ್ಯದಲ್ಲಿ ತೊಡಗಿಸಿ ಸಂಸ್ಕೃತಿಗೆ ಧಕ್ಕೆ ತರುತ್ತಿರುವುದು ಖಂಡನೀಯ ಎಂದರು.
ಐತಿಹಾಸಿಕ ಇತಿಹಾಸವುಳ್ಳ ಭದ್ರಾವತಿ ಹೆಸರಿಗೆ ಕಪ್ಪುಮಸಿ ಬಳಿಯುತ್ತಿರುವ ಆರ್ಕೆಸ್ಟ್ರಾ ತಂಡಗಳ ಕ್ರಮ ಸರಿಯಲ್ಲ. ಇಂತಹ ನೀಚ ಸಂಸ್ಕೃತಿಯನ್ನು
ಸಂಪೂರ್ಣವಾಗಿ ನಿಷೇ ಧಿಸಿ ಉತ್ತಮ ಕಲೆಗಳ ಪ್ರದರ್ಶನಕ್ಕೆ ಒತ್ತು ನೀಡುವಂತಾಗಬೇಕು ಎಂದು ಆಗ್ರಹಿಸಿ ಸೂಕ್ತ ಕ್ರಮಕ್ಕೆ ಬೆಂಗಳೂರಿನ ಪೊಲೀಸ್
ಮಹಾ ನಿರ್ದೇಶಕರಿಗೆ ಮನವಿ ಸಲ್ಲಿಸಲಾಗುವುದು. ನಿಜವಾದ ಕಲಾವಿದರಿಗೆ ನ್ಯಾಯ ದೊರೆಯುವವರೆಗೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುತ್ತದೆ ಎಂದು ಹೇಳಿದರು.
ಸಚಿವೆ ಉಮಾಶ್ರೀ ಅವರು ಅನುಭವಿ ಹಿರಿಯ ಕಲಾವಿದರಾಗಿ ಇಂತಹ ನೀಚ ಕೃತ್ಯಗಳು ನಡೆಯುತ್ತಿದ್ದರೂ ಕಣ್ಮುಚ್ಚಿ ಕುಳಿತಿರುವುದು ದುರಂತ.
ಕನ್ನಡ ನಾಡು ಉಳಿವಿಗೆ ಹೋರಾಡುತ್ತಿರುವ ರಕ್ಷಣಾ ವೇದಿಕೆ ನೈಜ ಕಲಾವಿದರಿಗೆ ಬೆಂಬಲ ನೀಡಿ ಪ್ರೋತ್ಸಾಹ ನೀಡುತ್ತಿರುವುದು ನಿಜಕ್ಕೂ ಹೆಮ್ಮೆಯ
ಸಂಗತಿಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ನಗರದ ಮುಖ್ಯ ಬೀದಿಗಳಲ್ಲಿ ಪ್ರತಿಭಟನೆ ನಡೆಸಿದ
ಪ್ರತಿಭಟನಾಕಾರರು ರಂಗಪ್ಪ ವೃತ್ತದಬಳಿ ಮಾನವ ಸರಪಳಿ ನಿರ್ಮಿಸಿ ರಸ್ತೆತಡೆ ನಡೆಸಿ ನಂತರ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಕಲಾವಿದರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ರಕ್ಷಣಾ ವೇದಿಕೆಯ ಜಿಲ್ಲಾ ಸಂಚಾಲಕಿ ಜ್ಯೋತಿ, ಮಾದಿಗ ಸಮಾಜದ ಮಂಜುನಾಥ್, ಹಿತ ರಕ್ಷಣೆ ಸಮಿತಿ ಮಂಜುನಾಥ್, ತಾಲೂಕು ಅಧ್ಯಕ್ಷ ಗಿರೀಶ್ ವಾದ್ಯಗೋಷ್ಟಿ ಕಲಾವಿದರ ಸಂಘದ ಗುರುದತ್, ಸಪ್ತಸ್ವರ ಕಲಾವಿದರ ಸಂಘದ ಜಯಶೀಲ, ವಿಕ್ರಂ, ಶಂಕರ್, ಅಂತೋಣಿ, ಪರಮೇಶ್, ಅಪೇಕ್ಷ ಮಂಜುನಾಥ್, ಶಂಕರಮೂರ್ತಿ, ಚಿಂದೋಡಿ ಶಂಭುಲಿಂಗಪ್ಪ, ತಿಪ್ಪೇಸ್ವಾಮಿ, ಧರ್ಮರಾಜ್, ಚಿದಾನಂದ, ಮನು, ವಾಸು, ಮಾರ್ಟಿನ್, ಗೋವಿಂದರಾಜ್, ಬಿ.ಎನ್.
ರಾಜು ಇತರರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudigere; ಕಾಫಿ ಎಸ್ಟೇಟ್ ನಲ್ಲಿ ಕಾಡುಕೋಣ ದಾಳಿ: ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೃ*ತ್ಯು
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Naxal ಶರಣಾಗತಿ; ಚಿಕ್ಕಮಗಳೂರು ಡಿಸಿ ಕಚೇರಿ ಸುತ್ತಮುತ್ತ ಬಿಗಿ ಭದ್ರತೆ
Kadur; ತಾಲೂಕು ವೈದ್ಯಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
Naxal Surrender: ಕೊನೆಗೂ ಕರ್ನಾಟಕ ರಾಜ್ಯ ಸಂಪೂರ್ಣ ನಕ್ಸಲ್ ಮುಕ್ತವಾಯಿತೇ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.