ಪಲ್ಟಿಯಾಗಿ, ಹೊತ್ತಿ ಉರಿದ ಟ್ಯಾಂಕರ್
Team Udayavani, Jun 20, 2018, 6:00 AM IST
ಅಜ್ಜಂಪುರ/ಕಡೂರು: ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿಗೆ ಸೇರಿದ ಗಿರಿಯಾಪುರದಲ್ಲಿ ಮಂಗಳವಾರ ಚಾಲಕನ ನಿಯಂತ್ರಣ ತಪ್ಪಿದ ಟ್ಯಾಂಕರ್ ಪಲ್ಟಿಯಾಗಿ ಹೊತ್ತಿ ಉರಿದಿದ್ದು, ಅವಘಡದಲ್ಲಿ ಟ್ಯಾಂಕರ್ ಕ್ಲೀನರ್ ಸಜೀವ ದಹನವಾಗಿರುವ ಶಂಕೆಯಿದೆ.
ತೀವ್ರವಾಗಿ ಗಾಯಗೊಂಡ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ವೇಳೆ, ಬೆಂಕಿ ರಸ್ತೆ ಪಕ್ಕದಲ್ಲಿದ್ದ ನಾಲ್ಕಾರು ಮನೆಗಳಿಗೂ ವ್ಯಾಪಿಸಿದ್ದು, ಅಪಾರ ನಷ್ಟವಾಗಿದೆ. ಹಾಸನದಿಂದ ಹೊಸದುರ್ಗಕ್ಕೆ ತೈಲ ಸಾಗಿಸುತ್ತಿದ್ದ ಟ್ಯಾಂಕರ್ ಗಿರಿಯಾಪುರದ ಬಸ್ ನಿಲ್ದಾಣದ ಪಕ್ಕದಲ್ಲೇ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಚರಂಡಿಯಲ್ಲಿ ಉರುಳಿ ಬಿತ್ತು. ಪಲ್ಟಿಯಾದ ರಭಸಕ್ಕೆ ಬೆಂಕಿ ಹೊತ್ತಿಕೊಂಡಿತು. ಕ್ಷಣಾರ್ಧದಲ್ಲಿ ಟ್ಯಾಂಕರ್ ಒಳಗಿದ್ದ ತೈಲಕ್ಕೆ ಬೆಂಕಿ ಆವರಿಸಿದ್ದು, ಟ್ಯಾಂಕರ್ ಧಗಧಗನೆ ಹೊತ್ತಿ ಉರಿಯಿತು. ಟ್ಯಾಂಕರ್ ಪಲ್ಟಿಯಾಗುತ್ತ ಲೆ ಶಬ್ದ ಕೇಳಿ ಜನ ಮನೆಯಿಂದ ಹೊರ ಬಂದರು. ಬೆಂಕಿ ಆರಿಸಲು ಮುಂದಾದ ಜನರ ಪ್ರಯತ್ನ ಫಲ ಕೊಟ್ಟಿಲ್ಲ.
ಬೆಂಕಿಯ ಜ್ವಾಲೆಗೆ ಸಿಲುಕಿದ ಚಾಲಕ ದಾವಣಗೆರೆಯ ದಾದಾಫಿರ್, ಲಾರಿಯ ಬಾಗಿಲು ತೆರೆದು ಉರಿಯುವ ಸ್ಥಿತಿಯಲ್ಲಿಯೇ ಹೊರಗೆ ಹಾರಿದ. ಕೂಡಲೇ ಗ್ರಾಮಸ್ಥರು ಆತನ ಮೈಗೆ ತಾಗಿದ್ದ ಬೆಂಕಿ ಆರಿಸಿ ಕಡೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಶೇ.80 ರಷ್ಟು ಸುಟ್ಟಗಾಯಗಳಾದ ಈತನನ್ನು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದೊಯ್ಯಲಾಗಿದೆ. ಟ್ಯಾಂಕರ್
ನಲ್ಲಿ ಕ್ಲೀನರ್ ಸಹ ಇದ್ದ ಎನ್ನಲಾಗುತ್ತಿದ್ದರೂ ಆತ ಏನಾದ ಎಂಬುದು ತಿಳಿದು ಬಂದಿಲ್ಲ. ಹೀಗಾಗಿ, ಟ್ಯಾಂಕರ್ ರಸ್ತೆಯ ಎಡ ಭಾಗಕ್ಕೆ
ಪಲ್ಟಿಯಾದ ಕಾರಣ ಕ್ಲೀನರ್ ಹೊರಬರ ಲಾರದೆ ಟ್ಯಾಂಕರ್‌ನಲ್ಲೇ ಸಜೀವ ದಹನವಾಗಿರಬಹುದೆಂಬ ಶಂಕೆ ಇದೆ.
ಬೆಂಕಿ ಕೆಲವೇ ಕ್ಷಣದಲ್ಲಿ ಅಕ್ಕ-ಪಕ್ಕಕ್ಕೆ ಹರಡಿದ್ದು, ಒಟ್ಟೂ ಆರು ಮನೆಗಳಿಗೆ ಬೆಂಕಿ ತಾಗಿದ್ದು, 2 ಮನೆಗಳು ಸಂಪೂರ್ಣ ಭಸ್ಮ
ಗೊಂಡಿವೆ. ಮನೆಯಲ್ಲಿ ಯಾರೂ ಇಲ್ಲದ್ದರಿಂದ ಯಾವುದೇ ಪ್ರಾಣಹಾನಿಯಾಗಲಿಲ್ಲ. ಇದಲ್ಲದೆ ಗ್ರಾಮ ಪಂಚಾಯತಿಗೆ ಸೇರಿದ ಎರಡು ವಾಣಿಜ್ಯ ಮಳಿಗೆಗಳು, ಪೆಟ್ಟಿಗೆ ಅಂಗಡಿ ಹಾಗೂ ಬಸ್ ಶೆಲ್ಟರ್ ಸಂಪೂರ್ಣ ಹಾಳಾಗಿವೆ. ಅಗ್ನಿ ಶಾಮಕ ದಳದ 150ಕ್ಕೂ ಹೆಚ್ಚು ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡಬೇಕಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ
BJP ಸರಕಾರ ಕಾಲದ ಕೋವಿಡ್, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ
MUST WATCH
ಹೊಸ ಸೇರ್ಪಡೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.