ಬಡವರಿಗೆ ಆಹಾರ ಧಾನ್ಯ ಪೂರೈಸಿ: ಶೋಭಾ
Team Udayavani, Apr 19, 2020, 1:21 PM IST
ತರೀಕೆರೆ: ಸಂಸದೆ ಶೋಭಾ ಕರಂದ್ಲಾಜೆ ಎಪಿಎಂಸಿ ಹಮಾಲಿ ಕಾರ್ಮಿಕರಿಗೆ ಪಡಿತರ ಕಿಟ್ ವಿತರಿಸಿದರು.
ತರೀಕೆರೆ: ಕ್ಷೇತ್ರದಲ್ಲಿ ಯಾವುದೇ ವ್ಯಕ್ತಿ ಹಸಿವಿನಿಂದ ಬಳಲಬಾರದು. ಗ್ರಾಮೀಣ ಭಾಗದಲ್ಲಿರುವ ಬಡಜನರು, ನಿರಾಶ್ರಿತರಿಗೆ ಆಹಾರ ಧಾನ್ಯ ಪೂರೈಕೆಯಾಗಬೇಕು. ಪಡಿತರ ತಲುಪದವರಿಗೆ ಸಂಸದರ ಮತ್ತು ಶಾಸಕರು ವಿತರಣೆ ಮಾಡುತ್ತಿರುವ ಕಿಟ್‌ಗಳನ್ನು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಎಪಿಎಂಸಿ ಸಭಾಂಗಣದಲ್ಲಿ ಹಮಾಲಿ ಕಾರ್ಮಿಕರಿಗೆ ಆಹಾರ ಧಾನ್ಯದ ಕಿಟ್ ವಿತರಣೆ ಮಾಡಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಟಾಸ್ಕ್ಫೋರ್ಸ್ ಸಭೆಯಲ್ಲಿ ಮಾತನಾಡಿದರು. ದಿನಸಿ ಸಾಮಗ್ರಿಗಳ ಬೆಲೆ ದಿನೇ ದಿನೆ ಏರಿಕೆಯಾಗುತ್ತಿರುವ ಮತ್ತು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಎಪಿಎಂಸಿ ಆವರಣದಲ್ಲಿರುವ ಹೋಲ್‌ಸೇಲ್ ಅಂಗಡಿಗಳಲ್ಲಿ ಮತ್ತು ಚಿಲ್ಲರೆ ಮಾರಾಟ ಮಾಡುವ ಅಂಗಡಿಗಳಲ್ಲಿ ದಿನಸಿ ಸಾಮಗ್ರಿಗಳ ದರ ಪಟ್ಟಿಯನ್ನು ಕಡ್ಡಾಯವಾಗಿ ಹಾಕಬೇಕು. ದಿನಸಿಯನ್ನು ಹೆಚ್ಚು ದರದಲ್ಲಿ ಮಾರಾಟ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕು ವೈದ್ಯಾಧಿಕಾರಿ ಡಾ| ಚಂದ್ರಶೇಖರ್ ಮಾತನಾಡಿ, ಹೊರದೇಶದಿಂದ ಬಂದ 36 ಮಂದಿಯನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ. 35 ಜನರನ್ನು ತಪಾಸಣೆಗೆ ಒಳಪಡಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. 262 ನಿರ್ಗತಿಕರು, ನಿರಾಶ್ರಿತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಶಾಸಕ ಡಿ.ಎಸ್.ಸುರೇಶ್, ತಾಪಂ ಅಧ್ಯಕ್ಷೆ ಪದ್ಮಾವತಿ, ಎಪಿಎಂಸಿ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷ ನಾಗರಾಜ್, ಉಪವಿಭಾಗಾಧಿಕಾರಿ ರೇಣುಕಾ ಪ್ರಸಾದ್, ಡಿವೈಎಸ್‌ಪಿ ರೇಣುಕಾ ಪ್ರಸಾದ್, ತಹಶೀಲ್ದಾರ್ ಸಿ.ಜಿ.ಗೀತಾ, ಎಪಿಎಂಸಿ ಸದಸ್ಯರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗುಜರಾತ್‌ಗೆ ತಲುಪಿಸಬೇಕಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ಅಡಿಕೆಯ ವಂಚಿಸಿದ ಖದೀಮರ ಸೆರೆ
C.T.Ravi ಪರವಾಗಿ ಸ್ವಾಮಿ ಕೊರಗಜ್ಜನ ಮೊರೆ ಹೋದ ಬಿಜೆಪಿ ಕಾರ್ಯಕರ್ತರು
Mahakumbha Mela: ಕುಂಭಮೇಳದಲ್ಲಿ ಶೃಂಗೇರಿ ಸಹಿತ 4 ಆಮ್ನಾಯ ಪೀಠದ ಶ್ರೀಗಳು ಭಾಗಿ
Threat letter: ಚಿಕ್ಕಮಗಳೂರು ಅಂಚೆ ಕಚೇರಿಯಿಂದ ಸಿ.ಟಿ.ರವಿಗೆ ಬೆದರಿಕೆಗೆ ಪತ್ರ ರವಾನೆ!
Kottigehara: ಸ್ವೀಟ್ ಬಾಕ್ಸ್‌ನಲ್ಲಿ ಗೋಮಾಂಸ ಇಟ್ಟು ಮಾರಾಟ: ಇಬ್ಬರ ಸೆರೆ
MUST WATCH
ಹೊಸ ಸೇರ್ಪಡೆ
Mulki: ಮಾದಕ ವಸ್ತು ತಡೆ-88 ಪ್ರಕರಣ: 6.80 ಕೋಟಿ ರೂ. ಮೌಲ್ಯದ ವಸ್ತು ನಾಶ: ಕಮಿಷನರ್
Kaup: 9.50 ಲಕ್ಷ ರೂ.ಗೆ ಮಾರಾಟ ಮಾಡಿದ್ದ ಬಸ್ ಕದ್ದೊಯ್ದ ಮಾಲಕರು
Puttur:ಬ್ಯಾನರ್‌ಗೆ ಚಪ್ಪಲಿ ಹಾರ ಹಾಕಿದ್ದ ಪ್ರಕರಣ:”ಬಿ’ ರಿಪೋರ್ಟ್ ತಿರಸ್ಕರಿಸಿದ ನ್ಯಾಯಾಲಯ
Kundapura: ಪಾದಚಾರಿ ಸಾವು ಹಿಟ್ ಆ್ಯಂಡ್ ರನ್
Mangaluru: ನಾಳೆ(ಜ.17) ಸಿಎಂ ಮಂಗಳೂರಿಗೆ… ಬಹು ಸಂಸ್ಕೃತಿ ಉತ್ಸವದಲ್ಲಿ ಭಾಗಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.