20 ಹಳ್ಳಿಗಳಿಗೆ ಟ್ಯಾಂಕರ್ ನೀರುಪೂರೈಸಲು ಕ್ರಿಯಾಯೋಜನೆ ಸಿದ್ಧ
Team Udayavani, Mar 8, 2019, 7:57 AM IST
ಚಿಕ್ಕಮಗಳೂರು: ತಾಲೂಕಿನ 6 ಗ್ರಾಮ ಪಂಚಾಯತ್‌ಗಳ 20 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ನೀಡಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ ಎಂದು ತಾಪಂ ಅಧ್ಯಕ್ಷ ಜಯಣ್ಣ ಹೇಳಿದರು.
ತಾಪಂ ಅಂಬೇಡ್ಕರ್ ಸಭಾಂಗಣದಲ್ಲಿ ನಡೆದ ಮಾಸಿಕ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕುಡಿಯುವ ನೀರಿನ ಸಮಸ್ಯೆ ತಲೆದೋರಿರುವ ಗ್ರಾಮಗಳಿಗೆ ಪ್ರತಿದಿನ 65 ಟ್ಯಾಂಕರ್ ನೀರು ಒದಗಿಸಲಾಗುವುದು ಎಂದರು.
ಲಕ್ಕಮ್ಮನಹಳ್ಳಿ, ಲಕ್ಯಾ, ಹಿರೇಗೌಜ, ಕರ್ತಿಕೆರೆ, ತೇಗೂರು ಸೇರಿದಂತೆ 20 ಹಳ್ಳಿಗಳನ್ನು ಗುರುತಿಸಲಾಗಿದೆ. ನೀರು ಒದಗಿಸುವ ಟ್ಯಾಂಕರ್‌ಗಳಿಗೆ ಜಿಪಿಎಸ್ ಅಳವಡಿಸುವುದು ಕಡ್ಡಾಯವಾಗಿದ್ದು, ಯಾವ ಗ್ರಾಮಗಳಿಗೆ ನೀರು ನೀಡಲಾಗುತ್ತದೆಯೋ ಆ ಗ್ರಾಮವನ್ನು ಪ್ರತಿನಿಧಿಸುವ ಪಂಚಾಯತ್ ಸದಸ್ಯರ ಸಹಿ ಇರಬೇಕು. ಛಾಯಾಚಿತ್ರ ತೆಗೆಸಬೇಕು. ದೃಢೀಕರಣ ಪತ್ರ ತರಬೇಕು. ಎಂದರು.
ಕುಡಿಯುವ ನೀರು ಒದಗಿಸುವುದಕ್ಕೆ ಸಂಬಂಧಿಸಿದಂತೆ ತಲೆದೋರುವ ಲೋಪದೋಷ ಸರಿಪಡಿಸಲು ತಾಪಂ ವತಿಯಿಂದ ಸಿಬ್ಬಂದಿಯೊಬ್ಬರನ್ನು ನೇಮಿಸಲಾಗುವುದು ಈ ಸಿಬ್ಬಂದಿ ಕುಡಿಯುವ ನೀರಿನ ಅವ್ಯವಹಾರ ನಡೆಯದಂತೆ ನೋಡಿಕೊಂಡು ನೀರು ಒದಗಿಸುತ್ತಾರೆ ಎಂದರು.
ಈಗಾಗಲೇ ಕುಡಿಯುವ ನೀರಿನ ಕಾಮಗಾರಿ ಮುಕ್ತಾಯಗೊಂಡಿದ್ದರೆ, ಉದ್ಘಾಟನೆಗೆ ಕಾಯದೆ ಜನರಿಗೆ ನೀರು ನೀಡಲು ಜಿಪಂ ಇಂಜಿನಿಯರಿಂಗ್ ವಿಭಾಗ ಮುಂದಾಗಬೇಕು ಎಂದು ತಿಳಿಸಿದರು. ಶಾಸಕ ಸಿ.ಟಿ. ರವಿ ಅವರು 36 ಗ್ರಾಮಗಳಿಗೆ ಕುಡಿಯುವ ನೀರೊದಗಿಸಲು ಟಾಸ್ಕ್ಫೋರ್ಸ್ ಸಮಿತಿ ವತಿಯಿಂದ 50 ಲಕ್ಷ ರೂ.ಗಳನ್ನು ಮೀಸಲಿಟ್ಟಿದ್ದಾರೆ. ಇದರಿಂದ ತಲೆದೋರಬಹುದಾದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದರು.
ಶಿರವಾಸೆ ಮತ್ತು ಕೈಮರದಲ್ಲಿ 2 ಮಂಗಗಳು ಸಾವನ್ನಪ್ಪಿದ್ದು, ಮಂಗನ ಕಾಯಿಲೆ ದೃಢಪಟ್ಟಿದೆಯೇ ಎಂದು ಅಧ್ಯಕ್ಷರು ಪ್ರಶ್ನಿಸಿದಾಗ, ಈ ಮಂಗಗಳಲ್ಲಿ ಕಾಯಿಲೆ ಹರಡುವ ಉಣ್ಣೆಗಳು ಪತ್ತೆಯಾಗಿಲ್ಲ. ಸುತ್ತಮುತ್ತಲ ಗ್ರಾಮಗಳಲ್ಲಿ ವಾಸಿಸುವ ಜನರಲ್ಲಿ ಜ್ವರ ಕಂಡುಬರುತ್ತಿದೆಯೇ ಎಂದು ಸಮೀಕ್ಷೆ ನಡೆಸಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ| ಸೀಮಾ ತಿಳಿಸಿದರು.
ತಾಲೂಕಿನಲ್ಲಿ 4 ಎಚ್1ಎನ್1 ಪ್ರಕರಣ ಪತ್ತೆಯಾಗಿದೆ. ಡೆಂಘೀ ಮತ್ತು ಮಲೇರಿಯಾ ಕಂಡುಬಂದಿಲ್ಲ. ತಿಂಗಳ ಮೊದಲ ಶುಕ್ರವಾರ ಮತ್ತು ಕೊನೆ ಶುಕ್ರವಾರದಲ್ಲಿ ಲಾರ್ವಾ ಸರ್ವೇ ನಡೆಸಲಾಗುತ್ತಿದೆ. ಈ ಕುರಿತು ಎಎನ್ ಎಂ ಮತ್ತು ಆಶಾಕಾರ್ಯಕರ್ತೆಯರಿಗೆ ನಿರ್ದೇಶನ ನೀಡಲಾಗಿದೆ ಎಂದರು.
ದೀನ್‌ದಯಾಳ್ ಉಪಾಧ್ಯಾಯ ಯೋಜನೆಯಡಿ ಸಮರ್ಪಕವಾಗಿ ಕೆಲಸವಾಗದಿರುವ ಬಗ್ಗೆ ಅಧ್ಯಕ್ಷರು ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಭವ್ಯಾನಟೇಶ್
ಅಸಮಾಧಾನ ವ್ಯಕ್ತಪಡಿಸಿದರು. ಅಂಗನವಾಡಿಗಳ ನಿರ್ವಹಣೆಗೆ ವಿಶೇಷ ಅನುದಾನ ಬಂದಿಲ್ಲವೆಂದು ಶಿಶುಅಭಿವೃದ್ಧಿ ಯೋಜನಾಧಿಕಾರಿ ಕೃಷ್ಣಪ್ಪ ತಿಳಿಸಿದಾಗ ಸರ್ಕಾರಿ ಕಟ್ಟಡಗಳು ಉತ್ತಮ ರೀತಿ ನಿರ್ವಹಣೆಯಾಗದಿದ್ದರೆ, ಅಧಿಕಾರಿಗಳು ಮಾಡುವ ತಪ್ಪಿಗೆ ಪೋಷಕರು ಖಾಸಗಿ ಶಾಲೆಗಳತ್ತ ಮುಖ ಮಾಡಬೇಕಾಗುತ್ತದೆ.
ಅಧಿಕಾರಿಗಳಿಂದ ವಿಶೇಷ ಅನುದಾನ ತರಲು ಸಾಧ್ಯವಾಗದಿದ್ದರೆ, ಅದನ್ನು ನಮ್ಮ ಗಮನಕ್ಕೆ ತರಬೇಕು. ವಿಶೇಷ ಅನುದಾನಕ್ಕೆ ಯತ್ನಿಸಲು ಸಾಧ್ಯವಾಗುತ್ತದೆ ಎಂದು ಅಧ್ಯಕ್ಷರು ಹೇಳಿದರು. ಒಣಗಿರುವ ಪ್ರತಿ ತೆಂಗಿನ ಮರಗಳಿಗೆ ಸರ್ಕಾರ 400 ರೂ. ಪರಿಹಾರ ನೀಡುತ್ತಿದ್ದು, ಈ ತಾಲೂಕಿಗೆ 2 ಕೋಟಿ ರೂ. ಬಂದಿದೆ. ಒಟ್ಟು 3462 ಅರ್ಜಿಗಳು ಸಲ್ಲಿಕೆಯಾಗಿದ್ದು, 2980 ಅರ್ಜಿಗಳಿಗೆ ಪರಿಹಾರ ವಿತರಿಸಲಾಗಿದೆ ಎಂದು ತೋಟಗಾರಿಕಾ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕರು ತಿಳಿಸಿದರು. ತಾಪಂ ಉಪಾಧ್ಯಕ್ಷ ರಮೇಶ್, ಇಒ ಎಚ್.ಸಿ. ತಾರನಾಥ್ ಇದ್ದರು.
ಲಕ್ಕಮ್ಮನಹಳ್ಳಿ, ಲಕ್ಯಾ, ಹಿರೇಗೌಜ, ಕರ್ತಿಕೆರೆ, ತೇಗೂರು ಸೇರಿದಂತೆ 20 ಹಳ್ಳಿಗಳನ್ನು ಗುರುತಿಸಲಾಗಿದೆ. ನೀರು ಒದಗಿಸುವ ಟ್ಯಾಂಕರ್‌ಗಳಿಗೆ ಜಿಪಿಎಸ್ ಅಳವಡಿಸುವುದು ಕಡ್ಡಾಯವಾಗಿದ್ದು, ಯಾವ ಗ್ರಾಮಗಳಿಗೆ ನೀರು ನೀಡಲಾಗುತ್ತದೆಯೋ ಆ ಗ್ರಾಮವನ್ನು ಪ್ರತಿನಿಧಿಸುವ ಪಂಚಾಯತ್ ಸದಸ್ಯರ ಸಹಿ ಇರಬೇಕು. ಛಾಯಾಚಿತ್ರ ತೆಗೆಸಬೇಕು. ದೃಢೀಕರಣ ಪತ್ರ ತರಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್ ಬೋರ್ಡ್ ಗೆ ಬರೆಯುವುದು ಬೇರೆ: ಸಿ.ಟಿ ರವಿ
Kaduru: ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದ ಕಾರ್ಯಕರ್ತ
Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ
Chikkamagaluru: ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾದ ಗುಡಿಸಲು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.