ಧರ್ಮ ಒಡೆಯೋದು ಆಂತರಿಕ ಭದ್ರತೆಗೆ ಅಪಾಯಕಾರಿ
Team Udayavani, Jul 31, 2017, 1:44 PM IST
ಕೊಪ್ಪ: ಇಂದು ಜಾತಿ, ಧರ್ಮ, ಮತದ ವಿಚಾರದಲ್ಲಿ ಸಮಾಜವನ್ನು ಒಡೆಯುವ ಕೆಲಸ ನಡೆಯುತ್ತಿದೆ. ಇದು ದೇಶದ ಆಂತರಿಕ ಭದ್ರತೆಗೆ ಹೆಚ್ಚು ಆಪಾಯಕಾರಿ ಎಂದು ಶಾಸಕ ಡಿ.ಎನ್. ಜೀವರಾಜ್ ಅಭಿಪ್ರಾಯಪಟ್ಟರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪಟ್ಟಣದ ಪುರಭವನದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನಲ್ಲಿರುವ ಎರಡು ಪತ್ರಕರ್ತರ ಸಂಘಗಳು ಒಂದಾಗಬೇಕಾಗಿದೆ. ನಾವು ಯಾವುದೇ ಸಂಘಟನೆಯನ್ನು ಒಡೆಯುವುದಕ್ಕಿಂತ ಜೋಡಿಸುವ ಕೆಲಸ ಮಹತ್ವದ್ದು ಎಂದ ಅವರು, ಹಿಂದೆ ಒಂದು ಕಾಲಂನಲ್ಲಿ ಬರುತ್ತಿದ್ದ ಸುದ್ದಿ ಇಂದು ಪುಟಗಟ್ಟಲೇ ಬರುವ ಸುದ್ದಿಗಿಂತ ಹೆಚ್ಚು ಪ್ರಭಾವ ಬೀರುತ್ತಿತ್ತು. ಸಮಾಜದ ಸ್ವಾಸ್ಥ ಕಾಪಾಡುವ ಕೆಲಸವನ್ನು ಪತ್ರಿಕೆಗಳು ಮಾಡಬೇಕು. ಜನರ ಭಾವನೆಗೆ ತಕ್ಕಂತೆ ನಡವಳಿಕೆ, ಬರವಣಿಗೆ ಇದ್ದಾಗ ಅಂತಹ ಪತ್ರಕರ್ತರನ್ನು ಸಮಾಜ ಗೌರವಿಸುತ್ತದೆ ಎಂದರು.
ರಾಜ್ಯ ಮಟ್ಟದ ಪತ್ರಿಕೆಗಳು ಇಂದು ಸ್ಥಳೀಯ ಪುರವಣಿ ಮೂಲಕ ಸ್ಥಳೀಯ ವಿಚಾರಗಳಿಗೆ ಹೆಚ್ಚು ಗಮನ ಹರಿಸುತ್ತಿರುವ ಕಾರಣ ಸ್ಥಳೀಯ ಪತ್ರಿಕೆಗಳು ಮಹತ್ವ ಕಳೆದುಕೊಳ್ಳುತ್ತಿದ್ದು, ಸಂಕಷ್ಟವನ್ನೆದುರಿಸುತ್ತಿವೆ. ಸರ್ಕಾರ ಸ್ಥಳೀಯ ಪತ್ರಿಕೆಗಳಿಗೆ ಹೆಚ್ಚಿನ ಸವಲತ್ತು ನೀಡುತ್ತಿದ್ದರೂ ಅದು ಎಷ್ಟರಮಟ್ಟಿಗೆ ಕೆಳಮಟ್ಟಕ್ಕೆ ತಲುಪುತ್ತದೆ ಎಂಬುದರ ಮೇಲೆ ಸ್ಥಳೀಯ ಪತ್ರಿಕೆಗಳ ಅಸ್ತಿತ್ವ ನಿರ್ಧಾರವಾಗುತ್ತದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಜಿಲ್ಲೆಯಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ 25 ಲಕ್ಷ ರೂ. ಹಾಗೂ ದುರಸ್ತಿಗೆ 12 ರೂ.ಲಕ್ಷ ನೀಡಿದೆ ಎಂದರು.
ಉಪನ್ಯಾಸ ನೀಡಿದ ಸಾಮಾಜಿಕ ಚಿಂತಕ ನೆಂಪೆ ದೇವರಾಜ್, ಇಂದಿನ ದಿನಗಳಲ್ಲಿ ಮುದ್ರಣ ಮಾದ್ಯಮ ಮತ್ತು ದೃಶ್ಯಮಾಧ್ಯಮಕ್ಕಿಂತ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಸುದ್ಧಿ ಬಿತ್ತರವಾಗುತ್ತಿದೆ. ಪ್ರತಿಯೊಬ್ಬರು ಪತ್ರಕರ್ತರಾಗುತ್ತಿದ್ದಾರೆ. ಒಂದು ಕಾಲದಲ್ಲಿ ಸುದ್ದಿಗೆ ಪ್ರಾತಿನಿದ್ಯ ನೀಡುತ್ತಿದ್ದ ಪತ್ರಿಕಾರಂಗ ಆರ್ಥಿಕ ಉದಾರೀಕರಣ ನೀತಿಯ ನಂತರ ಪತ್ರಿಕೋದ್ಯಮವಾಗಿ ಬೆಳೆದಿದೆ. ದೊಡ್ಡ ದೊಡ್ಡ ಕಂಪೆನಿಗಳು,ಶ್ರೀಮಂತರು ಇಂದು ಶೇ.80ರಷ್ಟು ಮಾಧ್ಯಮ ಕ್ಷೇತ್ರವನ್ನು ನಿಯಂತ್ರಿಸುತ್ತಿವೆ. ಪತ್ರಿಕೆಗಳ ಬೆಳವಣಿಗೆಯ ದೃಷ್ಟಿಯಿಂದ ಜಾಹೀರಾತುಗಳು ಬೇಕೆ ವಿನಃ ಜಾಹೀರಾತಿಗಾಗಿ ಪತ್ರಿಕೆ ಇರಬಾರದು ಎಂದರು.
ಕಾರ್ಯಕ್ರಮಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಯಕ್ಷಗಾನ ಕಲಾವಿದ ರಾಮಚಂದ್ರರಾವ್, ಅಟೋಚಾಲಕ ಸುಧಾಕರ, ಪ್ರಗತಿ ಪರ ಕೃಷಿಕ ಮಹಿಳೆ ಕೆಂಪಮ್ಮ, ಪತ್ರಿಕಾ ವಿತರಕರಾದ ಚಂದ್ರಶೇಖರ್, ರಮೇಶ್ ಮುಂತಾದವರನ್ನು ಸನ್ಮಾನಿಸಲಾಯಿತು. ಪತ್ರಿಕಾ ದಿನಾಚರಣೆ ಆಂಗವಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿನೇಶ್ ಇರ್ವತ್ತೂರು ಅಧ್ಯಕ್ಷತೆ ವಹಿಸಿದ್ದರು. ಸಂಘದ ರಾಜ್ಯಾಧ್ಯಕ್ಷ ಎನ್.ರಾಜು, ಕಾಂಗ್ರೇಸ್ ಮುಖಂಡ ಟಿ.ಡಿ. ರಾಜೇಗೌಡ, ಜೆಡಿಎಸ್ ರಾಜ್ಯ ಪ್ರಧಾನ ಎಚ್.ಜಿ. ವೆಂಕಟೇಶ್, ಸಹಕಾರ ಸಾರಿಗೆ ಅಧ್ಯಕ್ಷ ಈ.ಎಸ್. ಧರ್ಮಪ್ಪ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
Chikkamagaluru: ಕೇರಳದಿಂದ “ಸುರಕ್ಷಿತ’ ಮಲೆನಾಡಿನತ್ತ “ನಕ್ಸಲರು’?
Naxalite: ಮಲೆನಾಡಿಗೆ ನಕ್ಸಲರ ಭೇಟಿ ದೃಢ; 3 ಬಂದೂಕು-ಮದ್ದುಗುಂಡು ವಶ
ಚಿಕಿತ್ಸೆಗೆಂದು ಬಂದಿದ್ದ ರೋಗಿ ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರ ಆರೋಪ
Chikkamagaluru: ಮನೆಯೊಂದರಲ್ಲಿ ಬಂದೂಕು ಪತ್ತೆ; ನಕ್ಸಲ್ ಓಡಾಟ ಶಂಕೆ
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.