ಡಿಕೆಶಿ ಅಲ್ಲ ಇಡೀ ಕಾಂಗ್ರೆಸ್ ಪಕ್ಷವೇ ಟಾರ್ಗೆಟ್ ಆಗಿದೆ!: ಸಿಟಿ ರವಿ
ಡಿಕೆಶಿಗೆ ಸೋನಿಯಾ ಗಾಂಧಿ, ಬೊಮ್ಮಾಯಿಗೆ ಮೋದಿಯೇ ದೇವರು
Team Udayavani, May 11, 2022, 12:32 PM IST
ಚಿಕ್ಕಮಗಳೂರು: ದೇಶದ ಜನರೇ ಕಾಂಗ್ರೆಸ್‌ನ್ನು ಟಾರ್ಗೆಟ್ ಮಾಡಿದ್ದಾರೆ, ಡಿಕೆಶಿ ಅವರನ್ನು ಟಾರ್ಗೆಟ್ ಮಾಡುವ ಅವಶ್ಯಕತೆ ಇಲ್ಲ. ಅವರು ತಮ್ಮನ್ನು ತಾವು ವೈಭವೀಕರಿಸಿಕೊಳ್ಳಬಹುದು. ಅವರ ವೈಯಕ್ತಿಕ ಸಾಮರ್ಥ್ಯದ ಬಗ್ಗೆ ನಾನು ಪ್ರಶ್ನೆ ಮಾಡಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ರಾಜಕೀಯ ಸಾಮರ್ಥ್ಯ ಸಾಬೀತು ಮಾಡಿರುವುದು ಕನಕಪುರದಲ್ಲಷ್ಟೆ. ಉಪ್ಪು ತಿಂದವರು ನೀರು ಕುಡಿಯುತ್ತಾರೆ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ. ಅವರು ಏನು ತಪ್ಪು ಮಾಡಿಲ್ಲ ಅಂದರೆ ಆತಂಕ ಪಡುವ ಅವಶ್ಯಕತೆ ಇಲ್ಲ. ರಾಜಕೀಯದಲ್ಲಿ ಇದ್ದೇನೆಂದು ರಕ್ಷಣೆ ತೆಗೆದುಕೊಳ್ಳಲು ಆಗಲ್ಲ. ತಪ್ಪುಮಾಡದೆ ಜೈಲಿಗೆ ಹೋದರೆ ಅದೊಂದು ಶಕ್ತಿ ಆಗುತ್ತದೆ. ತಪ್ಪು ಮಾಡಿದವರ ರಾಜಕೀಯ ಅಂತ್ಯ ಆಗುತ್ತದೆ ಎಂದರು.
ಯುಪಿಯಲ್ಲಿ ಮೈ ಲಡಕಿ ಹೂಂ, ಲಡ್ ಸಕ್ತಿ ಹೂಂ ಅಂತ ಪ್ರಿಯಾಂಕ ಗಾಂಧಿ ನೇತೃತ್ವ ಚುನಾವಣೆ ವಹಿಸಿದ್ದರು. 387 ಕ್ಷೇತ್ರದಲ್ಲಿ ಕಾಂಗ್ರೆಸ್ ಡೆಪಾಸಿಟ್ ಹೋಯಿತು. ಅವರೇ ಅಧಿಕಾರದಲ್ಲಿದ್ದ ಪಂಜಾಬ್ ನಲ್ಲಿ ಹೀನಾಯವಾಗಿ ಸೋತರು. ಆಮ್ ಆದ್ಮಿಗೆ ರೆಡ್ ಕಾರ್ಪೆಟ್ ಹಾಸಿ ಕರ್ಕೊಂಡ್ ಬಂದು ಕೂರಿಸಿದ್ದಾರೆ. ದೇಶದ ಜನರೇ ಕಾಂಗ್ರೆಸ್ ತಿರಸ್ಕರಿಸಿರುವಾಗ ಡಿಕೆಶಿ ಟಾರ್ಗೆಟ್ ಮಾಡಿ ಏನಾಗಬೇಕು. ಡಿಕೆಶಿಗೆ ಸೋನಿಯಾ ಗಾಂಧಿ, ಬೊಮ್ಮಾಯಿಗೆ ಮೋದಿಯೇ ದೇವರು ಎಂದರು.
ಸಿ.ಎಂ.ಇಬ್ರಾಹಿಂ ಹೇಳಿಕೆ ಕುರಿತು ಮಾತನಾಡಿ, ಇಬ್ರಾಹಿಂ ಅವರನ್ನು ರಾಜಕೀಯ ವಿಧೂಷಕ ಅನ್ನುತ್ತಾರೆ, ನಾನು ಹಾಗೇ ಹೇಳಲ್ಲ. ಅವರನ್ನು ರಾಜಕೀಯದಲ್ಲಿ ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಅವರು ಎಲ್ಲಿ, ಯಾವ ಪಾತ್ರಕ್ಕೆ ಬೇಕಾದರೂ ಸೂಕ್ತವಾದ ವ್ಯಕ್ತಿ ಎಂದರು.
ಇದನ್ನೂ ಓದಿ:ಕಾಂಗ್ರೆಸ್‌ನಿಂದ ಬಿಜೆಪಿಗೆ ಪಕ್ಷಾಂತರ ಮಾಡಿದ್ದ ಇಬ್ಬರು ಪುರಸಭೆ ಸದಸ್ಯರ ಸದಸ್ಯತ್ವ ಅನರ್ಹ
ಜನತಾ ಪಕ್ಷದಲ್ಲಿದ್ದಾಗ ಇಂದಿರಾಗಾಂಧಿ ಬಗ್ಗೆ ಹೇಳಿದ್ದ ಮಾತುಗಳನ್ನು ನೆನಪು ಮಾಡಲು ನನ್ನಿಂದ ಆಗಲ್ಲ. ಕಾಂಗ್ರೆಸ್ ಬಂದಾಗ ದೇವೇಗೌಡರ ಬಗ್ಗೆ ಮಾತನಾಡಿದ್ದ ಹಳೇ ಕ್ಯಾಸೆಟ್ ಹಾಕಿ ನೋಡಿ. ಆಗ ಇಬ್ರಾಹಿಂಗೆ ದೇವೇಗೌಡರ ಮೇಲಿರೋ ಪ್ರಾಮಾಣಿಕ ಭಾವನೆ ಏನೆಂದು ವ್ಯಕ್ತವಾಗುತ್ತದೆ. ನಮಗೆ ಭಾರತ ಮಾತೆಯೇ ದೇವರು, ಎಲ್ಲಾ ದೇವರಿಗಿಂತ ಭಾರತಮಾತೆಯೇ ದೊಡ್ಡವಳು. ನಾಯಕರನ್ನು ನಾಯಕರ ಸ್ಥಾನದಲ್ಲೇ ನೋಡುತ್ತೇವೆ, ದೇವರ ಸ್ಥಾನದಲ್ಲಿ ಅಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: ಅರ್ಹರಿಗಷ್ಟೇ ಬಿಪಿಎಲ್ ಕಾರ್ಡ್: ಸಿಎಂ ಸಿದ್ದರಾಮಯ್ಯ
Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ
Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್
Karnataka Lokayukta: ನಾಲ್ವರಿಗೆ ಲೋಕಾ ಶಾಕ್: 27 ಕೋಟಿ ರೂ. ಆಸ್ತಿ ಪತ್ತೆ
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.