ಮುತ್ತೋಡಿ ವನ್ಯಜೀವಿ ತಾಣಕ್ಕೆ ಹರಿದು ಬಂದ ಪ್ರವಾಸಿಗರ ದಂಡು
Team Udayavani, Dec 28, 2020, 5:06 PM IST
ಚಿಕ್ಕಮಗಳೂರು: ದತ್ತ ಜಯಂತಿ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಮುಳ್ಳಯ್ಯನಗಿರಿ ಪ್ರದೇಶ, ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಧವಿಧಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯ ಮುತ್ತೋಡಿ ವನ್ಯಜೀವಿ ಪ್ರವಾಸಿತಾಣಕ್ಕೆ ಪ್ರವಾಸಿಗರ ದಂಡೇ ಹರಿದು ಬಂದಿತ್ತು.
ಹೊಸ ವರ್ಷಾಚರಣೆ, ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದ ಪ್ರವಾಸಿಗರುಜಿಲ್ಲೆಗೆ ಆಗಮಿಸಿದ್ದಾರೆ. ಆದರೆ, ಪ್ರವಾಸಿಗರನೆಚ್ಚಿನ ತಾಣ ಮುಳ್ಳಯ್ಯನಗಿರಿ ಸುತ್ತಮುತ್ತಲಪ್ರವಾಸಿ ತಾಣಗಳಿಗೆ ದತ್ತ ಜಯಂತಿ ಹಿನ್ನೆಲೆಯಲ್ಲಿಜಿಲ್ಲಾಡಳಿತ ನಿರ್ಬಂಧ ವಿಧಿಸಿದ್ದರಿಂದ ಬಹುತೇಕ ಪ್ರವಾಸಿಗರು ಮುತ್ತೋಡಿ ವನ್ಯಜೀವಿ ತಾಣವನ್ನು ಆಯ್ಕೆ ಮಾಡಿಕೊಂಡಿದ್ದರು. ಜಿಲ್ಲೆಯಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡ ಬಳಿಕ ಮುತ್ತೋಡಿ ಪ್ರವಾಸಿ ತಾಣದಲ್ಲಿ ಸಫಾರಿಗೆ ನಿರ್ಬಂಧ ವಿಧಿಸಲಾಗಿತ್ತು. ಮತ್ತೋಡಿವನ್ಯಜೀವಿ ತಾಣದಲ್ಲಿ ಪ್ರವಾಸಿರ ದಂಡುಇಲ್ಲದೇ ವಾಹನ ಭರಾಟೆ ಇಲ್ಲದೆ. ಪ್ರಾಣಿಗಳು ಸ್ವತ್ಛಂದವಾಗಿ ವಿಹರಿಸುತ್ತಿದ್ದವು. ಸದ್ಯ ಕೋವಿಡ್ ಕಡಿಮೆಯಾಗುತ್ತಿರುವುದರಿಂದ ಇತ್ತೀಚೆಗಷ್ಟೇ ಸಫಾರಿಗೆ ಅರಣ್ಯ ಇಲಾಖೆ ಅವಕಾಶ ಕಲ್ಪಿಸಿಕೊಟ್ಟಿದೆ. ಶುಕ್ರವಾರದಿಂದ ಭಾನುವಾರದವರೆಗೂಸಾಲು ಸಾಲು ರಜೆ ಹಾಗೂ ಹೊಸ ವರ್ಷದಹಿನ್ನೆಲೆಯಲ್ಲಿ ಜಿಲ್ಲೆಗೆ ಆಗಮಿಸಿದ್ದ ಪ್ರವಾಸಿಗರು ಮುತ್ತೋಡಿಯನ್ನು ಆಯ್ಕೆ ಮಾಡಿಕೊಂಡಿದ್ದರು.ಮುತ್ತೋಡಿ ವನ್ಯಜೀವಿ ತಾಣಕ್ಕೆ ಭಾರೀ ಪ್ರಮಾಣದ ಪ್ರವಾಸಿಗರು ವನ್ಯಜೀವಿ ದರ್ಶನ ಪಡೆದುಕೊಳ್ಳಲು ಕಾತುರದಿಂದ ಸಫಾರಿಗೆತೆರಳಿದ್ದರು. ಭಾರೀ ಪ್ರಮಾಣದ ಪ್ರವಾಸಿಗರುಹಾಗೂ ವಾಹನ ಭರಾಟೆಯಿಂದ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ನಿರಾಸೆ ಉಂಟು ಮಾಡಿತು.
ಪ್ರವಾಸಿಗರು ಒಮ್ಮೆಲೆ ಲಗ್ಗೆ ಇಟ್ಟ ಪರಿಣಾಮ ಸ್ವಚ್ಚಂದವಾಗಿ ಓಡಾಡಿಕೊಂಡಿದ್ದ ವನ್ಯ ಜೀವಿಗಳು ದಟ್ಟರಣ್ಯ ಸೇರಿದ್ದು, ಅಲ್ಲೊಂದು ಇಲ್ಲೊಂದುಕಡೆಗಳಲ್ಲಿ ಕಾಡುಕೋಣದ ದಂಡು, ಜಿಂಕೆ, ನವಿಲುಮಾತ್ರ ದರ್ಶನ ನೀಡಿವೆ. ಆನೆ, ಹುಲಿ ಚಿರತೆದರ್ಶನ ಆಸೆ ಹೊತ್ತು ಬಂದ ಪ್ರವಾಸಿಗರಿಗೆ ನಿರಾಸೆಮೂಡಿಸಿದೆ. ಪ್ರತೀ ದಿನ 80 ಜನ ಪ್ರವಾಸಿಗರಿಗೆ ಸಫಾರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ. ಆದರೆ. ಒಮ್ಮಗೆ ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಬಂದ ಕಾರಣ ಸಫಾರಿಗೂ ಒತ್ತಡಹೆಚ್ಚಾಗಿತ್ತು. ತಮಿಳುನಾಡು, ಆಂದ್ರಪ್ರದೇಶ,ಬೆಂಗಳೂರು ದೂರದ ನಗರದಿಂದ ಪ್ರವಾಸಿಗರಿಗೆಸಫಾರಿ ತೆರಳಲು ಅವಕಾಶ ಸಿಗದೆ ನಿರಾಸೆಯಿಂದ ವಾಪಸ್ ತೆರಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.