ಕಡೂರು: ಆರ್ ಎಸ್ಎಸ್ ಮುಖಂಡನ ಕಾರಿನ ಮೇಲೆ ‘ಜಿಹಾದಿ’ ಬರಹ ಗೀಚಿದ್ದ ಇಬ್ಬರ ಬಂಧನ
Team Udayavani, Sep 29, 2022, 1:54 PM IST
ಚಿಕ್ಕಮಗಳೂರು: ಕಡೂರು ಪಟ್ಟಣದಲ್ಲಿ ಇತ್ತೀಚೆಗೆ ಆರ್ ಎಸ್ಎಸ್ ಮುಖಂಡನ ಕಾರಿನ ಮೇಲೆ ಅಶ್ಲೀಲ ಪದಗಳನ್ನು ಬರೆದು, ಜಿಹಾದ್ ಎಂದು ಗೀಚಿದ್ದಲ್ಲದೇ ಕೊಲ್ಲುವುದಾಗಿ ಬರೆದಿದ್ದ ಆರೋಪಿಗಳನ್ನು ಕೇವಲ ಎರಡೇ ದಿನಗಳಲ್ಲಿ ಪತ್ತೆ ಮಾಡುವಲ್ಲಿ ಕಡೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕರು ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದ್ದು, ಸೆ.24 ರಂದು ರಾತ್ರಿ ಕಡೂರು ಪಟ್ಟಣದ ಲಕ್ಷ್ಮೀಶ ನಗರದ ಚಾರ್ಟೆಡ್ ಇಂಜಿನಿಯರ್ ಹಾಗೂ ಆರ್ ಎಸ್ಎಸ್ ಧರ್ಮ ಜಾಗೃತಿ ಸಮಿತಿಯ ಜಿಲ್ಲಾ ಸಂಚಾಲಕ ಡಾ.ಶಶಿಧರ್ ಎಂಬವರು ತಮ್ಮ ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ನಾಲ್ಕು ಚಕ್ರಗಳಲ್ಲಿ ಗಾಳಿ ಬಿಟ್ಟು, ಬಾನೆಟ್, ಗ್ಲಾಸ್ ಮತ್ತು ಎಡ ಡೋರ್ ಮೇಲೆ ಕಲ್ಲಿನಿಂದ ಗೀಚಿ ಅಶ್ಲೀಲ ಮತ್ತು ಕೊಲೆ ಬೆದರಿಕೆ ಪದಗಳನ್ನು ಬರೆಯಲಾಗಿತ್ತು. ಈ ಬಗ್ಗೆ ಸೆ.25 ರಂದು ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಈ ಪ್ರಕರಣದ ತನಿಖೆ ನಡೆಸಿದ ಕಡೂರು ಠಾಣೆಯ ಪಿಎಸ್ ಐ ರಮ್ಯ ಎನ್. ಕೆ. ನೇತೃತ್ವದ ತಂಡ ಸಾಂಧರ್ಬಿಕ ಸಾಕ್ಷ್ಯಗಳ ಆಧಾರದ ಮೇರೆಗೆ 48 ಗಂಟೆಯೊಳಗಾಗಿ ಈ ಕೃತ್ಯವನ್ನು ಎಸಗಿದ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕರನ್ನು ಪತ್ತೆ ಮಾಡಿದ್ದಾರೆ.
ಈ ಬಾಲಕರು ಸೆ.24 ರಂದು ರಾತ್ರಿ ಕಡೂರಿನಲ್ಲಿ ಆರ್ಕೆಸ್ಟ್ರಾ ಕಾರ್ಯಕ್ರಮ ನೋಡಿಕೊಂಡು ವಾಪಸ್ಸು ಮನೆಗೆ ಹೋಗುತ್ತಿದ್ದಾಗ ರಸ್ತೆ ಬದಿ ನಿಲ್ಲಿಸಿದ್ದ ಕಾರು ಚೆನ್ನಾಗಿರುವುದನ್ನು ಕಂಡು, ನಾವು ಈ ತರಹದ ಕಾರನ್ನು ತೆಗೆದುಕೊಳ್ಳಲು ಆಗುವುದಿಲ್ಲ. ಆಗದಿದ್ದರೂ ಪರವಾಗಿಲ್ಲ, ಇದನ್ನು ಹಾಳು ಮಾಡೋಣವೆಂದು ಈ ಕೃತ್ಯವನ್ನು ಎಸಗಿರುವುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಎಸ್ ಪಿ ಕಚೇರಿಯ ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Charmadi Ghat: ಚಾಲಕನ ನಿಯಂತ್ರಣ ತಪ್ಪಿ ಬಂಡೆಕಲ್ಲಿಗೆ ಡಿಕ್ಕಿ ಹೊಡೆದ ಕಾರು.. ಮಹಿಳೆ ಗಂಭೀರ
Hebbe Falls: ಸ್ನೇಹಿತರ ಜೊತೆ ಹೆಬ್ಬೆ ಜಲಪಾತದಲ್ಲಿ ಈಜಲು ಹೋಗಿ ಜೀವ ಕಳೆದುಕೊಂಡ ಪ್ರವಾಸಿಗ
Mudigere: ಬೀದಿನಾಯಿ ಅಡ್ಡಬಂದು ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Chikkamagaluru: ಮಳೆಯ ನಡುವೆಯೂ ಬೆಟ್ಟ ಹತ್ತಿ ದೇವಿರಮ್ಮನ ದರ್ಶನ ಪಡೆದ ಸಾವಿರಾರು ಭಕ್ತರು
Tanker Overturns: ಚಾರ್ಮಾಡಿ ಘಾಟ್ ನಲ್ಲಿ ಟ್ಯಾಂಕರ್ ಪಲ್ಟಿ.. ಪೆಟ್ರೋಲ್ – ಡಿಸೇಲ್ ಸೋರಿಕೆ
MUST WATCH
ಹೊಸ ಸೇರ್ಪಡೆ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.