Politics: ಐದು ತಿಂಗಳಲ್ಲಿ ಸರ್ಕಾರ ಬಹಳ ದೊಡ್ಡ ಯಡವಟ್ಟು ಮಾಡ್ಕೊಂಡಿದೆ: ಕೇಂದ್ರ ಸಚಿವೆ ಶೋಭಾ
Team Udayavani, Oct 1, 2023, 11:16 AM IST
ಚಿಕ್ಕಮಗಳೂರು: ಜನರಿಗೆ ಸಿದ್ದರಾಮಯ್ಯ ಸರ್ಕಾರ ಅಂದ್ರೆ ಯಡವಟ್ಟು ಸರ್ಕಾರ ಅನ್ನಿಸ್ತಿದೆ. ಯಾವ ಆಧಾರದಲ್ಲಿ ಎಲೆಕ್ಷನ್ ಗೆದ್ದಿದ್ದಾರೋ ಅದಕ್ಕೆ ಉಲ್ಟಾ ಇದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಅವರು ಚಿಕ್ಕಮಗಳೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಸರ್ಕಾರ ಹೊಸದಾಗಿ ಬಂದಿದ್ದು, ನಾಲ್ಕೈದು ತಿಂಗಳಾಗಿದೆ. ಐದು ತಿಂಗಳಲ್ಲಿ ಸರ್ಕಾರ ಬಹಳ ದೊಡ್ಡ ಯಡವಟ್ಟು ಮಾಡ್ಕೊಂಡಿದೆ ಎಂದು ಹೇಳಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದ ಕೂಪವಾಗಿದೆ., ಸರ್ಕಾರ ಸ್ವಜನ ಪಕ್ಷಪಾತದ ಉತ್ತುಂಗಕ್ಕೆ ಏರಿದೆ, ಕಾವೇರಿ ನೀರಿನ ವಿಚಾರದಲ್ಲಿ ಫೂರ್ತಿ ವಿಫಲವಾಗಿದೆ ಎಂದರು.
ಕಾವೇರಿ ಪ್ರಾಧಿಕಾರ ಹಾಗೂ ಸುಪ್ರೀಂ ಕೋರ್ಟಿಗೆ ಸರಿಯಾದ ಮಾಹಿತಿ ಕೊಡಲಿಲ್ಲ. ಕಣ್ಣೊರೆಸಲು ಮೀಟಿಂಗ್ ಕರೆದು ಮೊದಲೇ ನಿತ್ಯ 15 ಸಾವಿರ ಕ್ಯೂಸೆಕ್ ನೀರು ಬಿಟ್ರು ಎಂದ ಅವರು ಭಾಗ್ಯಗಳನ್ನು ಕೊಟ್ರು, ಆದರೆ ಅರ್ಧ ಜನಕ್ಕಷ್ಟೆ ಭಾಗ್ಯ ಸಿಕ್ಕಿರೋದು. ದಿನಾಲೂ ಸರ್ವರ್ ಡೌನ್, ಫೆಲ್ಯೂರ್ ಅಂತ ನೆಪ ಹೇಳ್ತಿದ್ದಾರೆ ಎಂದು ಹೇಳಿದರು.
ಅವರದ್ದೇ ಶಾಸಕರು ಖುಷಿ ಇಲ್ಲ, ದಿನಕ್ಕೊಂದು ಹೇಳಿಕೆ ಕೊಡ್ತಿದ್ದಾರೆ. ನಾಲ್ಕೇ ತಿಂಗಳಿಗೆ ಅಧಿಕಾರಿಗಳು ಬೇಸತ್ತಿದ್ದಾರೆ, ಅವರಿಗೂ ಖುಷಿ ಇಲ್ಲ. ಇದು ಇಂದಿನ ಕಾಂಗ್ರೆಸ್ ಸರ್ಕಾರದ ಪರಿಸ್ಥಿತಿ. ಸಿಎಂ, ಡಿಸಿಎಂ, ಶಾಸಕರು, ಮಂತ್ರಿಗಳು ಏನು ಮಾಡ್ತಿದ್ದಾರೆ ಎಂದು ಜನ ಗಮನಿಸುತ್ತಿದ್ದಾರೆ ಎಂದರು.
ಕೆಜೆ ಹಳ್ಳಿ-ಡಿಜೆಹಳ್ಳಿ ಕೇಸ್ ವಿಚಾರವಾಗಿ ಮಾತನಾಡಿ, ಕೆಜೆ ಹಳ್ಳಿ-ಡಿಜೆಹಳ್ಳಿ ಕೇಸಲ್ಲಿ ಅವರದ್ದೇ ಶಾಸಕರಿಗೆ ಕಾಂಗ್ರೆಸ್ ಬೆಂಬಲ ಕೊಡ್ಲಿಲ್ಲ. ಕಾಂಗ್ರೆಸ್ ಶಾಸಕರ ಮನೆ ಸುಟ್ಟರೂ ಯಾರೂ ಹೋಗಲಿಲ್ಲ, ನಾವೇ ಹೋಗಿದ್ದು ಎಂದು ಹೇಳಿದರು.
ಕಾಂಗ್ರೆಸ್ ಶಾಸಕರಿಗೆ ನೈತಿಕ ಬೆಂಬಲವನ್ನೂ ಕೊಡ್ಲಿಲ್ಲ. ಕೆಜೆ ಹಳ್ಳಿ-ಡಿಜೆಹಳ್ಳಿ-ಹುಬ್ಬಳ್ಳಿ ಕೇಸ್ ಆದ ಸಂದರ್ಭದಲ್ಲಿ ಕಾಂಗ್ರೆಸ್ ದೇಶದ್ರೋಹಿಗಳ ಪರ ನಿಂತಿತ್ತು. ಅಲ್ಲಿ ತಪ್ಪು ಮಾಡಿದ್ದಾರೆ ಎಂದು ಕಾಂಗ್ರೆಸ್ಸಿಗೆ ಇಂದು ಅರಿವಾಗ್ತಿದೆ ಎಂದರು.
ಪೊಲೀಸ್ ಸ್ಟೇಷನ್, ಮನೆ, ವಾಹನ ಎಲ್ಲವನ್ನೂ ಸುಟ್ಟರು. ಕೆಜೆ ಹಳ್ಳಿ-ಡಿಜೆಹಳ್ಳಿ ಒಂದು ರೀತಿ ಸ್ಮಶಾನವಾಗಿತ್ತು. ಅದಕ್ಕೆ ಕಾಂಗ್ರೆಸ್ ಕುಮ್ಮಕ್ಕಿತ್ತು. ಸರ್ಕಾರಕ್ಕೆ ಕೆಟ್ಟ ಹೆಸರು ತರುವುದರ ಜೊತೆಗೆ ಒಂದು ಸಮುದಾಯದ ಓಲೈಕೆಗೆ ಮುಂದಾಗಿದ್ರು. ಇವತ್ತು ನ್ಯಾಯುತವಾದ ತನಿಖೆ ಮಾಡಿ ತಪ್ಪು ಮಾಡಿದ್ದು ಯಾರೆಂದು ಗೊತ್ತಾಗುತ್ತೆ ಎಂದು ಹೇಳಿದರು.
ಬಿಜೆಪಿ ಮಾಜಿ ಶಾಸಕರು ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿ, ನಮ್ಮ ಮುಖಂಡರು, ಮಾಜಿ ಶಾಸಕರಿಗೆ ಆಮಿಷ ಒಡ್ಡಿ ಸೆಳೆಯುತ್ತಿದ್ದಾರೆ. ಆಂತರಿಕವಾಗಿ ಕಾಂಗ್ರೆಸ್ ಸೇಫ್ ಇಲ್ಲ, ಆಂತರಿಕವಾಗಿ ಕಾಂಗ್ರೆಸ್ ಗಲಿಬಿಲಿಯಲ್ಲಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮುಂದುವರೆದು ಮಾತನಾಡಿ, ಅವರಿಗೆ ಅಸುರಕ್ಷತೆ ಕಾಡ್ತಿದೆ, ಅದಕ್ಕೆ ಬಿಜೆಪಿಯಿಂದ ಕರೆದುಕೊಳ್ತಿದ್ದಾರೆ. ಪ್ರಧಾನಿ ಮೋದಿ ಪ್ರಪಂಚದಲ್ಲಿ ಭಾರತದವನ್ನು ಅಗ್ರಸ್ಥಾನದಲ್ಲಿ ನಿಲ್ಲುಸುವ ಕೆಲಸ ಮಾಡ್ತಿದ್ದಾರೆ. ಮೋದಿ ಜೊತೆ ಕೈ ಜೋಡಿಸಿ, 2024ಕ್ಕೆ ಅತ್ಯಧಿಕ ಮತಗಳ ಅಂತರದಲ್ಲಿ ಮೋದಿ ಗೆಲ್ಲಿಸೋಣ ಎಂದು ಹೇಳಿದರು.
ಶಾಸಕರು, ಎಂ.ಪಿ. ಅಧಿಕಾರ ಇರಬಹುದು, ಇಲ್ಲದಿರಬಹುದು ಆದರೆ, ದೇಶ ಉಳಿಯೋದು ಮುಖ್ಯ. ಹಾಗಾಗಿ, ಎಲ್ಲರಿಗೂ ಪ್ರಾರ್ಥನೆ ಮಾಡ್ತೀನಿ, ಮೋದಿ ದೇಶಕ್ಕಾಗಿ ಕೆಲಸ ಮಾಡಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕರೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್; ತನಿಖೆ ಚುರುಕು
Karnataka Congress; ‘ಭ್ರಷ್ಟ’ಆರೋಪ ಮಧ್ಯೆ ವಿಪಕ್ಷಗಳಿಗೆ ಮರ್ಮಾಘಾತ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.