ಏಕತಾ ದಿನಾಚರಣೆ: ಪ್ರತಿಜ್ಞಾ ವಿಧಿ ಸ್ವೀಕಾರ
Team Udayavani, Nov 2, 2021, 1:12 PM IST
ಚಿಕ್ಕಮಗಳೂರು: ನಮ್ಮಲ್ಲಿ ಐಕ್ಯತೆ, ಒಗ್ಗಟ್ಟು ಇದ್ದರೆ ಮಾತ್ರ ಎಂತಹ ಸಮಸ್ಯೆಗಳನ್ನುಎದುರಿಸಬಹುದು ಎಂಬುದನ್ನು ರಾಷ್ಟ್ರೀಯಏಕತಾ ದಿನವನ್ನು ಆಚರಣೆ ಮಾಡುವಮೂಲಕ ಜಗತ್ತಿಗೆ ಪರಿಚಯಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ತಿಳಿಸಿದರು.
ಭಾನುವಾರ ನಗರದ ಸುಭಾಷ್ ಚಂದ್ರಬೋಸ್ ಆಟದ ಮೈದಾನದಲ್ಲಿ ಪೊಲೀಸ್ ಇಲಾಖೆ, ಅರಣ್ಯ, ಅಗ್ನಿಶಾಮಕದಳ, ಹೋಮ್‌ಗಾರ್ಡ್ ಹಾಗೂ ಎನ್‌ಸಿಸಿ ವತಿಯಿಂದ ಆಯೋಜಿಸಿದ್ದ ಏಕತಾ ದಿನದ ಪ್ರತಿಜ್ಞಾ ವಿಧಿ ಸ್ವೀಕಾರದ ಬಳಿಕ ಅವರು ಮಾತನಾಡಿದರು.
ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಸಂದೇಶವನ್ನು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನಮ್ಮ ಹಿರಿಯರು ನೀಡಿದ್ದಾರೆ. ಅದು ಇಡೀ ಪ್ರಪಂಚಕ್ಕೆ ಮಾದರಿ. ಆ ಸಂದೇಶವನ್ನುಸಾರುವ ಹಿನ್ನೆಲೆಯಲ್ಲಿ ಮತ್ತೂಮ್ಮೆ ಏಕತಾದಿನವನ್ನು ಆಚರಣೆ ಮಾಡಲಾಗುತ್ತಿದೆ ಎಂದರು.
ಎಸ್ಪಿ ಎಂ.ಎಚ್ ಅಕ್ಷಯ್ ಮಾತನಾಡಿ, ನಾವೆಲ್ಲರೂ ಜಾತಿ, ಧರ್ಮ, ವರ್ಗವನ್ನುಮೀರಿ ದೇಶದ ಏಕತೆಯನ್ನು ಕಾಪಾಡಬೇಕು. ಸಮಾಜದಲ್ಲಿ ಶಾಂತಿ ಕಾಪಾಡುವದೃಷ್ಟಿಯಿಂದ ಪೊಲೀಸ್ ಇಲಾಖೆಯ ಜೊತೆಗೆಸಾರ್ವಜನಿಕರು ಕೈಜೋಡಿಸಬೇಕೆಂದು ಮನವಿ ಮಾಡಿದರು.
ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ. ಪ್ರಭು ಮಾತನಾಡಿ, ಭಾರತ ದೇಶ ಪ್ರಪಂಚದಲ್ಲಿ ಒಂದು ಖಂಡದ ರೀತಿಯಲ್ಲಿ ಗುರುತಿಸಲ್ಪಟ್ಟಿದೆ. ಅದಕ್ಕೆಕಾರಣ ಒಂದು ಖಂಡದಲ್ಲಿ ಸಿಗುವವೈವಿದ್ಯತೆ ಒಂದು ದೇಶದಲ್ಲಿ ಅಡಕವಾಗಿದೆಎಂದರೆ ಅದು ಭಾರತ. ಇಡೀ ಪ್ರಪಂಚಭಾರತ ನಡೆದು ಬಂದ ಮೂರು ಸಾವಿರ ವರ್ಷದ ಇತಿಹಾಸವನ್ನು ಸೂಕ್ಷ್ಮತೆ ಯಿಂದನೋಡುತ್ತಿದೆ ಇದಕ್ಕೆ ಕಾರಣ ನಮ್ಮ ಏಕತೆ ಎಂದರು.
ನಗರದ ಹನುಮಂತಪ್ಪ ವೃತ್ತದಿಂದಎಂ.ಜಿ. ರಸ್ತೆಯ ಮೂಲಕ ಜಿಲ್ಲಾ ಆಟದಮೈದಾನದವರೆಗೆ ಪೊಲೀಸ್, ಅರಣ್ಯ,ಅಗ್ನಿಶಾಮಕ, ಹೋಂಗಾರ್ಡ್ಸ್, ಎನ್‌ಸಿಸಿ ವತಿಯಿಂದ ಕವಾಯತು ನಡೆಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
Chikkamagaluru: ಕೇರಳದಿಂದ “ಸುರಕ್ಷಿತ’ ಮಲೆನಾಡಿನತ್ತ “ನಕ್ಸಲರು’?
Naxalite: ಮಲೆನಾಡಿಗೆ ನಕ್ಸಲರ ಭೇಟಿ ದೃಢ; 3 ಬಂದೂಕು-ಮದ್ದುಗುಂಡು ವಶ
ಚಿಕಿತ್ಸೆಗೆಂದು ಬಂದಿದ್ದ ರೋಗಿ ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರ ಆರೋಪ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.