![rahul-gandhi](https://www.udayavani.com/wp-content/uploads/2025/02/rahul-gandhi-2-415x281.jpg)
![rahul-gandhi](https://www.udayavani.com/wp-content/uploads/2025/02/rahul-gandhi-2-415x281.jpg)
Team Udayavani, Jan 29, 2025, 11:18 PM IST
ಚಿಕ್ಕಮಗಳೂರು: ಮೂರು ವರ್ಷಗಳ ಹಿಂದೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಕೇವಲ 6 ಮತಗಳಿಂದ ಪರಾಭವಗೊಂಡಿದ್ದ ಎ.ವಿ.ಗಾಯತ್ರಿ ಶಾಂತೇಗೌಡ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದು, ಮುಂದಿನ 30 ದಿನದೊಳಗೆ ಮರು ಮತ ಎಣಿಕೆ ನಡೆಸುವಂತೆ ನ್ಯಾಯಾಲಯ ಆದೇಶಿಸಿದೆ.
ಬುಧವಾರ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ಕೈಗೆತ್ತಿಕೊಂಡಿತ್ತು.
ಏನಿದು ಪ್ರಕರಣ?: 3 ವರ್ಷದ ಹಿಂದೆ ನಡೆದ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ, ಕೇವಲ 6 ಮತಗಳ ಅಂತರದಲ್ಲಿ ಬಿಜೆಪಿ ಪರ ಅಭ್ಯರ್ಥಿ ಪ್ರಾಣೇಶ್ ವಿರುದ್ದ ಪರಾಭವಗೊಂಡಿದ್ದರು.
ಫಲಿತಾಂಶದಿಂದ ಅಸಮಾಧಾನಗೊಂಡ ಗಾಯತ್ರಿ ಶಾಂತೇಗೌಡ ಸರಕಾರದ 12 ಜನ ನಾಮ ನಿರ್ದೇಶಕರ ಮತದಾನ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಈ 12 ಮತಗಳನ್ನು ಹೊರತುಪಡಿಸಿ ಮಾ. 7ರ ಒಳಗೆ ಮರು ಮತ ಎಣಿಕೆ ಮಾಡಿ ವರದಿ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಪ್ರಾಣೇಶ್ ಸದ್ಯ ಪರಿಷತ್ ಉಪಸಭಾಪತಿ ಹುದ್ದೆ ಅಲಂಕರಿಸಿದ್ದಾರೆ.
NR Pura: ಭದ್ರಾ ನದಿಯಲ್ಲಿ ಈಜಲು ಹೋಗಿ ನೀರು ಪಾಲಾದ ಯುವಕ… ಮುಂದುವರೆದ ಶೋಧ ಕಾರ್ಯ
Mudigere: ಸುತ್ತಿಗೆಯಿಂದ ತಲೆಗೆ ಹೊಡೆದು ಅತ್ತೆಯ ಹತ್ಯೆ… ಅಳಿಯ ಪರಾರಿ, ಪೊಲೀಸರಿಂದ ಶೋಧ
Kottigehara: 35 ವರ್ಷಗಳ ಹಿಂದೆ ಸೇವಿಸಿದ್ದ ಊಟದ ಬಿಲ್ ಪಾವತಿ!
Kudremukh-ಎಸ್.ಕೆ.ಬಾರ್ಡರ್ ರಾಜ್ಯ ಹೆದ್ದಾರಿ; ಗುಂಡಿಗಳ ರಸ್ತೆ
Chikkamagaluru: ಕಿರುಕುಳ, ಮಹಿಳೆ ಬ್ಲ್ಯಾಕ್‌ಮೇಲ್‌ಗೆ ಬೇಸತ್ತು ಸರ್ವೇ ಸಿಬಂದಿ ಆತ್ಮಹತ್ಯೆ
You seem to have an Ad Blocker on.
To continue reading, please turn it off or whitelist Udayavani.