ಕಸ ನೀಡದ ಮನೆಗೆ ನೀರು ಬಂದ್‌

•ನಗರಸಭೆ ಆಯುಕ್ತರು, ಅಧಿಕಾರಿಗಳ ಸಭೆಯಲ್ಲಿ ಶಾಸಕ ಸಿ.ಟಿ.ರವಿ ಖಡಕ್‌ ಸೂಚನೆ

Team Udayavani, Aug 4, 2019, 12:51 PM IST

cm-tdy-2

ಚಿಕ್ಕಮಗಳೂರು: ನಗರಸಭೆಯಲ್ಲಿ ಶಾಸಕ ಸಿ.ಟಿ.ರವಿ ಆಯುಕ್ತರು ಹಾಗೂ ಅಧಿಕಾರಿಗಳ ಸಭೆ ನಡೆಸಿದರು.

ಚಿಕ್ಕಮಗಳೂರು: ನಗರವನ್ನು ನಿರ್ಮಲ ವಾಗಿಸುವ ಹಿನ್ನೆಲೆಯಲ್ಲಿ ಮನೆಗಳಿಂದ ಒಣ ಮತ್ತು ಹಸಿ ಕಸವನ್ನು ಆಟೋ ಟಿಪ್ಪರ್‌ಗಳಿಗೆ ನೀಡದ ಮನೆಗಳ ನೀರಿನ ಸಂಪರ್ಕವನ್ನು ತಕ್ಷಣ ಕಡಿತಗೊಳಿಸಬೇಕೆಂದು ಶಾಸಕ ಸಿ.ಟಿ.ರವಿ ನಗರಸಭಾ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದರು.

ನಗರದ ನಗರಸಭೆಯಲ್ಲಿ ಹಮ್ಮಿಕೊಂಡಿದ್ದ ಆಯುಕ್ತರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ನಗರದಲ್ಲಿ ಒಟ್ಟು 31,670 ಮನೆಗಳಿವೆ. 2,705 ವಾಣಿಜ್ಯ ಮಳಿಗೆಗಳಿವೆ. ಇವುಗಳಲ್ಲಿ 9 ಸಾವಿರ ಮನೆಗಳಿಂದ ಕಸ ಬರುತ್ತಿಲ್ಲ. ಅವರು ಹಣವನ್ನೂ ನೀಡುತ್ತಿಲ್ಲ. ವಾಣಿಜ್ಯ ಮಳಿಗೆಗಳಲ್ಲಿ 700 ಮಳಿಗೆಗಳವರು ಕಸ ಹಾಗೂ ಹಣ ನೀಡುತ್ತಿಲ್ಲ ಎಂದು ಕಸ ಸಂಗ್ರಹಣೆ ಗುತ್ತಿಗೆದಾರರು ಅಂಕಿ-ಅಂಶ ನೀಡಿದಾಗ ಶಾಸಕರು ಅಧಿಕಾರಿಗಳಿಗೆ ಈ ಸೂಚನೆ ನೀಡಿದರು.

ನಗರದ ಗವನಹಳ್ಳಿಯಲ್ಲಿ 350, ಹಿರೇಮಗಳೂರಿನಲ್ಲಿ 1,000, ಚಂದ್ರಕಟ್ಟೆ, ಕೋಟೆ ಬಡಾವಣೆಯ ಕೆಲವು ಕಡೆ, ಟಿಪ್ಪು ನಗರದ ಕೆಲವು ಮನೆಗಳಲ್ಲಿ ವಾಸಿಸುವವರು ಕಸವನ್ನು ಟಿಪ್ಪರ್‌ಗಳಿಗೆ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಘೋಷಿತ ಕೊಳಗೇರಿಗಳಲ್ಲಿ ಇರುವ ಮನೆಗಳಿಂದ ಕಸ ಸಂಗ್ರಹಣೆಗಾಗಿ ತಿಂಗಳಿಗೆ ತಲಾ 20 ರೂ. ಮತ್ತು ಇತರೆ ಮನೆಗಳಿಂದ ತಿಂಗಳಿಗೆ ಕಡ್ಡಾಯವಾಗಿ 40 ರೂ. ಸಂಗ್ರಹಿಸಬೇಕು. ಆದರೆ, ಅಂತ್ಯೋದಯ ಕಾರ್ಡ್‌ ಹೊಂದಿದ ಕುಟುಂಬಗಳಿಂದ ಹಣ ಸಂಗ್ರಹಿಸಬಾರದೆಂದು ಗುತ್ತಿಗೆದಾರರಿಗೆ ಸೂಚಿಸಿದರು.

ಹಣ ಸಂಗ್ರಹಣೆ ಮಾಡುವಾಗ ರಸೀದಿ ನೀಡಿರುವ ಹ್ಯಾಂಡ್‌ಸೆಟ್ ಅನ್ನೇ ಉಪಯೋಗಿಸಬೇಕು. ಕಸ ಮತ್ತು ಹಣ ನೀಡದಿರುವ ಮನೆಗಳ ಪಟ್ಟಿಯನ್ನು ವಾರ್ಡ್‌ ಪ್ರಕಾರ ಸಿದ್ಧಪಡಿಸಿ ನಗರಸಭಾ ಆಯುಕ್ತರಿಗೆ ನೀಡಬೇಕು. ಆಗ ಅವರು ಅಂತಹ ಮನೆಗಳಿಗೆ ನಿತ್ಯ ಕಸ ನೀಡಲು ಸೂಚಿಸುತ್ತಾರೆ. ಕಸ ಕೊಡದಿದ್ದರೆ ಕುಡಿಯುವ ನೀರಿನ ಸಂಪರ್ಕವನ್ನು ತಕ್ಷಣ ಸ್ಥಗಿತಗೊಳಿಸುತ್ತಾರೆ. ಇದರಲ್ಲಿ ಯಾವುದೇ ರೀತಿಯ ಮಧ್ಯ ಪ್ರವೇಶವೂ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕಠಿಣ ಕ್ರಮ ಅನಿವಾರ್ಯ: ಹಣ ಮತ್ತು ಕಸ ಕೊಡದೇ ಇರುವ ಮನೆಗಳಲ್ಲಿ ಪ್ರತಿನಿತ್ಯ ತ್ಯಾಜ್ಯ ಉತ್ಪಾದನೆಯಾಗುವುದು ಖಚಿತ. ಟಿಪ್ಪರ್‌ಗಳಿಗೆ ಕಸ ನೀಡದವರು ಅದನ್ನು ಮೋರಿಗೆ ಅಥವಾ ಹತ್ತಿರದಲ್ಲೇ ಇರುವ ನೀರಿನ ಮೂಲ ಇಲ್ಲವೇ, ಖಾಲಿ ನಿವೇಶನಗಳಲ್ಲಿ ಹಾಕಿ ಬರುತ್ತಾರೆ. ಈ ಹಿನ್ನೆಲೆಯಲ್ಲಿ ಅಂತಹ ಕುಟುಂಬಗಳಿಗೆ ಅರಿವು ಮೂಡಿಸಲು ಕಠಿಣ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ತಿಳಿಸಿದರು.

ಟಿಪ್ಪರ್‌, ಸಿಬ್ಬಂದಿ ಹೆಚ್ಚಿಸಿ: ನಗರದಲ್ಲಿ ಒಟ್ಟು 27 ಟಿಪ್ಪರ್‌ಗಳ ಮೂಲಕ 54 ಮಂದಿ ಸಿಬ್ಬಂದಿ ಕಸ ಸಂಗ್ರಹಣೆ ಕಾರ್ಯ ನಿರ್ವಹಿಸುತ್ತಾರೆ ಎಂದು ಗುತ್ತಿಗೆದಾರರು ಹೇಳಿದರು. ಆಗ, ತಕ್ಷಣ ಟಿಪ್ಪರ್‌ ಸಂಖ್ಯೆಯನ್ನು 35ಕ್ಕೆ ಏರಿಸಬೇಕು. ಒಟ್ಟು 80 ಮಂದಿ ಸಿಬ್ಬಂದಿ ನಿಯೋಜಿಸಬೇಕು. ಸಮಸ್ಯೆಯಾದರೆ ಕೆಲವು ದಿನಗಳ ಮಟ್ಟಿಗೆ ನಗರಸಭೆ ಸಿಬ್ಬಂದಿ ಈ ಕೆಲಸಕ್ಕೆ ಕೈಜೋಡಿಸುತ್ತಾರೆ ಎಂದು ಶಾಸಕರು ತಿಳಿಸಿದರು.

ಕಸ ಸಂಗ್ರಹಣೆ ಸಿಬ್ಬಂದಿಯಲ್ಲಿ ಕೆಲವರು ಸರಿಯಾಗಿ ಕೆಲಸಕ್ಕೆ ಬರುತ್ತಿಲ್ಲ. ಕೆಲವರು ಹಾಜರಿ ಹಾಕಿ ಕೆಲಸಕ್ಕೆ ತಪ್ಪಿಸಿಕೊಳ್ಳುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ 5ಕ್ಕಿಂತ ಹೆಚ್ಚು ದಿನ ಗೈರು ಹಾಜರಾದಲ್ಲಿ ಅಂತಹವರನ್ನು ತಕ್ಷಣ ಕೆಲಸದಿಂದ ತೆಗೆದುಹಾಕಬೇಕು. ಯಾವುದೇ ರೀತಿಯ ರಿಯಾಯಿತಿ ನೀಡದೇ ಕ್ರಮ ಕೈಗೊಂಡರೆ ಎಲ್ಲವೂ ಸರಿಯಾಗುತ್ತದೆ. ಸಿಬ್ಬಂದಿಗೆ ಸೂಕ್ತ ಸಮಯದಲ್ಲಿ ಸಂಬಳ ನೀಡಬೇಕು. ವಾರಕ್ಕೆ ಒಂದು ರಜೆ ಕೊಡಬೇಕು. ಮೇಲ್ವಿಚಾರಣೆ ಇನ್ನಷ್ಟು ಬಿಗಿಯಾಗಬೇಕೆಂದು ಶಾಸಕರು ಸೂಚಿಸಿದರು.

ಕಸ ಸಂಗ್ರಹಣೆಯಿಂದ ಬರುವ ಹಣದಲ್ಲಿ ಸಂಬಳ ನೀಡಿ ಯಂತ್ರೋಪಕರಣಗಳನ್ನು ನಿರ್ವಹಿಸುವುದು ಕಷ್ಟವಾಗಿದೆ ಎಂದು ಗುತ್ತಿಗೆದಾರರು ತಿಳಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಮೊದಲು ನಗರಸಭಾ ಆಯುಕ್ತರೊಂದಿಗೆ ಕುಳಿತು ಸಂಗ್ರಹಣಾ ಶುಲ್ಕದ ಒಟ್ಟು ಮೊತ್ತ ಹಾಗೂ ಪ್ರತಿ ತಿಂಗಳ ಖರ್ಚನ್ನು ಆಯಾ ವಾರ್ಡ್‌ ಪ್ರಕಾರ ಲೆಕ್ಕಹಾಕಬೇಕು. ಅನಂತರ ಕೊರತೆಯನ್ನು ನಗರಸಭೆ ತುಂಬಿ ಕೊಡುವ ಬಗ್ಗೆ ಆಲೋಚಿಸುತ್ತದೆ ಎಂದು ತಿಳಿಸಿದರು.

ಟಾಪ್ ನ್ಯೂಸ್

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

Naxal-encounter-Vikram-1

Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ

Arrest

Ullala: ತ್ರಿವಳಿ ತಲಾಖ್‌ ಪ್ರಕರಣ: ಆರೋಪಿಯ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-dp

Datta peeta; ಸರಕಾರ ನೇಮಕ ಮಾಡಿದ್ದ ಅರ್ಚಕ ರಾಜೀನಾಮೆ

Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ

Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ

13-

Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ

Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.