ವಾರಾಂತ್ಯದ ಕರ್ಫೂ: ಚಿಕ್ಕಮಗಳೂರಿನಲ್ಲಿ ಎರಡನೇ ದಿನವೂ ಉತ್ತಮ ಬೆಂಬಲ
Team Udayavani, Apr 25, 2021, 12:31 PM IST
ಚಿಕ್ಕಮಗಳೂರು: ಕೋವಿಡ್-19 ಸೋಂಕು ತಡೆಗಟ್ಟಲು ಸರ್ಕಾರ ವಿಧಿಸಿರುವ ವಾರಾಂತ್ಯದ ಕರ್ಫೂಗೆ ಕಾಫಿನಾಡಿನಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಜನಸಂಚಾರ ಮತ್ತು ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿದ್ದು ರಸ್ತೆಗಳೆಲ್ಲ ಖಾಲಿ ಖಾಲಿಯಾಗಿ ಬಿಕೋ ಎನ್ನುತ್ತಿವೆ.
ಭಾನುವಾರ ಬೆಳಿಗ್ಗೆ 6ಗಂಟೆಯಿಂದ 10 ಗಂಟೆಯವರೆಗೂ ಅಗತ್ಯ ವಸ್ತುಗಳಾದ ಹಾಲು, ಹಣ್ಣು, ಹೂವು, ದಿನಸಿ ಸೇರಿದಂತೆ ಇತರೆ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು. ಭಾನುವಾರವಾದ ಹಿನ್ನೆಲೆಯಲ್ಲಿ ಹಾಲು ಹಣ್ಣು ಖರೀದಿ ಗಿಂತ ಮೀನು, ಮಾಂಸ, ಮೊಟ್ಟೆ ಖರೀದಿಗೆ ಜನರು ಮುಗಿಬಿದಿದ್ದರು. ಚಿಕನ್, ಮೀನು ಮಾಂಸಗಳ ಅಂಗಡಿ ಮುಂದೆ ಜನರು ಸಾಲುಗಟ್ಟಿ ನಿಂತಿದ್ದರು.
ಇದನ್ನೂ ಓದಿ:ಹಂಪಿಯ ಪ್ರಸಿದ್ಧ ಬಡವಿಲಿಂಗ ದೇವಸ್ಥಾನದ ಅರ್ಚಕ ಕೃಷ್ಣ ಭಟ್ ಇನ್ನಿಲ್ಲ
10 ಗಂಟೆಯ ಬಳಿಕ ಪೊಲೀಸರು ಎಲ್ಲಾ ಅಂಗಡಿ ಬಂದ್ ಮಾಡಿಸಿದ್ದರಿಂದ ಕೆಲವರಿಗೆ ಮೀನು ಮಾಂಸ ಸಿಕ್ಕದೆ ನಿರಾಸೆಯಿಂದ ಮನೆ ಕಡೆಗೆ ಹೆಜ್ಜೆ ಹಾಕಿದರು. 11 ಗಂಟೆಯ ವೇಳೆಗೆ ಗಿಜುಗುಡುತ್ತಿದ್ದ ಮಾರುಕಟ್ಟೆಗಳೆಲ್ಲ ಸ್ತಬ್ದಗೊಂಡವು. ಕೆಎಸ್ ಆರ್ ಟಿಸಿ ಬಸ್ ಸಂಚಾರವಿದ್ದರೂ ಪ್ರಯಾಣಿಕರು ನಿಲ್ದಾಣದ ಕಡೆ ಸುಳಿಯಲಿಲ್ಲ.
ಆಟೋ ಟ್ಯಾಕ್ಸಿ ವಾಹನಗಳು 10 ಗಂಟೆಯವರೆಗೂ ಸಂಚಾರ ನಡೆಸಿದರು. 10 ಗಂಟೆಯ ನಂತರ ಸಂಪೂರ್ಣ ಸ್ತಬ್ದಗೊಂಡಿತು. ಔಷಧಿ ಅಂಗಡಿ , ಪೊಟ್ರೋಲ್ ಬಂಕ್, ಆಸ್ಪತ್ರೆ ಹೊರತು ಪಡಿಸಿದಂತೆ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು., ಜನರು ಸ್ವಯಂಪ್ರೇರಿತವಾಗಿ ಮನೆಯಲ್ಲೆ ಲಾಕ್ ಆಗುವ ಮೂಲಕ ಕರ್ಫೂಗೆ ಬೆಂಬಲ ವ್ಯಕ್ತಪಡಿಸಿದರು.
ಇದನ್ನೂ ಓದಿ:ಮಹಿಳೆಯರು ಋತುಚಕ್ರದ ಐದು ದಿನಗಳ ಮೊದಲು ಮತ್ತು ನಂತರ ಕೋವಿಡ್ ಲಸಿಕೆ ಪಡೆಯಬಹುದೆ?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
Chikkamagaluru: ಕೇರಳದಿಂದ “ಸುರಕ್ಷಿತ’ ಮಲೆನಾಡಿನತ್ತ “ನಕ್ಸಲರು’?
Naxalite: ಮಲೆನಾಡಿಗೆ ನಕ್ಸಲರ ಭೇಟಿ ದೃಢ; 3 ಬಂದೂಕು-ಮದ್ದುಗುಂಡು ವಶ
ಚಿಕಿತ್ಸೆಗೆಂದು ಬಂದಿದ್ದ ರೋಗಿ ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರ ಆರೋಪ
Chikkamagaluru: ಮನೆಯೊಂದರಲ್ಲಿ ಬಂದೂಕು ಪತ್ತೆ; ನಕ್ಸಲ್ ಓಡಾಟ ಶಂಕೆ
MUST WATCH
ಹೊಸ ಸೇರ್ಪಡೆ
Bantwala: ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಮೃತ್ಯು
Kanguva Movie: ಪ್ರೇಕ್ಷಕರ ಮನದಲ್ಲಿ ಕಂಗೊಳಿಸಿದ ʼಕಂಗುವʼ..ಸಿನಿಮಾ ನೋಡಿದವರು ಹೇಳಿದ್ದೇನು?
IPL 2025: ಸಾತಂತ್ರ್ಯ ನೀಡುವ ತಂಡವೇ ನನ್ನ ಆದ್ಯತೆ: ಕೆ.ಎಲ್.ರಾಹುಲ್
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.