ಟಿಪ್ಪು, ಬಾಬರ್, ಘಜ್ನಿ, ಘೋರಿ ಟೀಕಿಸಿದರೆ ಸಿದ್ಧುಗೇಕೆ ಉರಿ?
Team Udayavani, Jun 1, 2022, 3:37 PM IST
ಚಿಕ್ಕಮಗಳೂರು: ಟಿಪ್ಪು ಸುಲ್ತಾನ್, ಬಾಬರ್, ಘಜ್ನಿ, ಘೋರಿ, ಮೊಘಲ್ ರನ್ನು ಟೀಕೆ ಮಾಡಿದರೆ ಸಿದ್ದರಾಮಯ್ಯ ಅವರು ಏಕೆ ಎದೆ ಬಡಿದುಕೊಳ್ಳುತ್ತಾರೆ. ಇವರಿಗ್ಯಾಕೆ ಉರಿ ಹತ್ತಿದಂತೆ ಆಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ. ರವಿ ಪ್ರಶ್ನಿಸಿದರು.
ಆರ್‌ಎಸ್‌ಎಸ್ ಬಗ್ಗೆ ಮಾತ ನಾಡಿದರೆ ಬಿಜೆಪಿಯವರು ಏಕೆ ಎದೆಬಡಿಕೊಳ್ಳುತ್ತಾರೆಂಬ ಸಿದ್ದರಾಮಯ್ಯ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಆರ್‌ಎಸ್‌ಎಸ್‌ಗೂ ನಮಗೂ ವೈಚಾರಿಕ ಸಂಬಂಧವಿದೆ. ಆರ್‌ಎಸ್ ಎಸ್‌ನಿಂದ ನಾವು ಪ್ರೇರಿತರಾಗಿದ್ದೇವೆ. ಕಾಂಗ್ರೆಸ್‌ನವರಿಗೆ ಟಿಪ್ಪು, ಬಾಬರ್, ಔರಂಗಜೇಬ್, ಘಜನಿ ಜತೆ ಯಾವ ಸಂಬಂಧವಿದೆ ಎಂದು ಹೇಳಲಿ. ಟಿಪ್ಪು ಕಳ್ಳ, ಕನ್ನಡ ವಿರೋಧಿ, ಅತ್ಯಾಚಾರಿ ಎಂದರೆ ಇವರ್ಯಾಕೆ ಮುಖ ಒರೆಸಿಕೊಳ್ಳು ತ್ತಾರೆ. ಇವರಿಗೂ ಟಿಪ್ಪು, ಔರಂಗಜೇಬ್ ನಿಗೂ ಏನು ಸಂಬಂಧ ಎಂದು ಪ್ರಶ್ನಿಸಿದರು.
ರಾಜ್ಯಸಭೆಗೆ ಮೂರನೇ ಅಭ್ಯರ್ಥಿ ಆಯ್ಕೆ ಸಂಬಂಧ ನಮ್ಮಲ್ಲಿ ಹೆಚ್ಚುವರಿ 32 ಮತಗಳಿವೆ. ಚುನಾವಣೆ ನಂಬರ್ ಗೇಮ್. ಬರಬಹುದು, ಬರದೇ ಇರಬಹುದು. ನಾವು ನಮ್ಮನ್ನು ಪರೀಕ್ಷೆ ಮಾಡಿಕೊ ಳ್ಳೋಕೆ, ವಿರೋಧಿಗಳು ಮಾತು ಕೊಟ್ಟಂತೆ ನಡೆದುಕೊ ಳ್ಳುತ್ತಾರಾ ಎನ್ನುವುದು ತಿಳಿದುಕೊಳ್ಳಲು ಇದೊಂದು ಪರೀಕ್ಷೆಯಾಗಿದೆ. ರಣನೀತಿಯನ್ನು ಮಾಧ್ಯಮದಲ್ಲಿ ಚರ್ಚೆ ಮಾಡೋಕೆ ಸಾಧ್ಯವಿಲ್ಲ. ಫಲಿತಾಂಶ ಬಂದ ನಂತರ ಯಾರು ಅಡ್ಡ ಮತ ಹಾಕಿದ್ದಾರೆ. ಉದ್ದ ಮತ ಹಾಕಿದ್ದಾರೆ ಗೊತ್ತಾಗುತ್ತದೆ. ನಮಗೂ 32 ಮತಗಳಿವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಪಕ್ಷದ ಬಿಕ್ಕಟ್ಟು ಪರಿಹಾರ ಮಾಡಿ ಮೇಲೇಳುತ್ತೇವೆ: ಕೋಟ ಆಶಯ
Kota Srinivas Poojary: ಅಲೆಖಾನ್ ಹೊರಟ್ಟಿಯಲ್ಲಿ ಉಪಗ್ರಹ ಆಧಾರಿತ ದೂರ ಸಂಪರ್ಕ ಸೇವೆ
Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು
Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!
Kalasa: ವೈದ್ಯನ ಶರ್ಟ್ ಹರಿದು ಹಲ್ಲೆ… ತಡೆಯಲು ಬಂದ ಮಹಿಳಾ ಸಿಬ್ಬಂದಿ ಮೇಲೂ ಹಲ್ಲೆ ಯತ್ನ