ದೇವಸ್ಥಾನದಲ್ಲಿ ಮಹಿಳೆ ವಾಸ್ತವ್ಯ
Team Udayavani, May 21, 2020, 6:04 AM IST
ಆಲ್ದೂರು: ಪಟ್ಟಣದಲ್ಲಿ ಕಳೆದ 2 ವಾರಗಳಿಂದ ಮಹಿಳೆಯೊಬ್ಬರು ಪಟ್ಟಣದ ದೇವಸ್ಥಾನವೊಂದರಲ್ಲಿ ವಾಸ್ತವ್ಯ ಹೂಡಿದ್ದು ಜನರಲ್ಲಿ ಕುತೂಹಲದ ಜೊತೆಗೆ ಆತಂಕ ಹುಟ್ಟಿಸಿದೆ.
ಕಳೆದ 2 ವಾರಗಳಿಂದ ಮಹಿಳೆ ಏಕಾಂಗಿಯಾಗಿ ಪಟ್ಟಣದ ಅಂಬೇಡ್ಕರ್ ವೃತ್ತಕ್ಕೆ ಸಮೀಪವಿರುವ ನಿರ್ಮಾಣ ಹಂತದಲ್ಲಿರುವ ದೇವಸ್ಥಾನದ ಜಗುಲಿಯ ಮೇಲೆ ಬಿಡಾರ ಹೂಡಿದ್ದು ಈ ಮಹಿಳೆಯ ಬಗ್ಗೆ ಯಾರೊಬ್ಬರಿಗೂಮಾಹಿತಿಯಿಲ್ಲ. ಕೋವಿಡ್ ಮಹಾಮಾರಿ ಜಿಲ್ಲೆಯನ್ನು ತಲ್ಲಣಗೊಳಿಸಿದ್ದು ಇಂತಹ ಸಂದರ್ಭದಲ್ಲಿ ಒಂಟಿ ಮಹಿಳೆ ಏಕಾಂಗಿಯಾಗಿ ದೇವಸ್ಥಾನದ ಜಗುಲಿಯ ಮೇಲೆ ವಾಸ್ತವ್ಯ ಹೂಡಿರುವುದು ಆತಂಕದ ಜೊತೆಗೆ ಅನುಮಾ ಮೂಡಿಸಿದೆ. ದೇವಸ್ಥಾನದ ಮುಂಬಾಗದಲ್ಲಿರುವ ಅಂಗಡಿ ವ್ಯಾಪಾರಿಗಳು ಈ ವಿಚಾರವನ್ನು ಆಲ್ದೂರು ಠಾಣೆಗೆ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ಸ್ಥಳೀಯ ಅಂಗಡಿಗಳ ವ್ಯಾಪಾರಿಗಳು ದೂರಿದ್ದಾರೆ.
ಮಹಿಳೆಯನ್ನು ವಿಚಾರಿಸಿದರೆ ನಾನು 3 ತಿಂಗಳಿನಿಂದ ಇಲ್ಲೇ ಇದ್ದೇನೆ . ಬಳ್ಳಾರಿಯಿಂದ ಬಂದಿದ್ದೇನೆ. ನಾನು ಇಲ್ಲೆ ಇರುತ್ತೇನೆ. ಯಾರಿಗೆ ಬೇಕಾದರೂ ಹೇಳಿಕೊಳ್ಳಿ ಎಂದು ಎದುರುತ್ತರ ನೀಡುತ್ತಿದ್ದು ಸಂಬಂಧಿಸಿದವರಿಗೆ ದೂರು ನೀಡುತ್ತೇವೆ ಎಂದು ಅಂಗಡಿ ವ್ಯಾಪಾರಿಗಳು ಅಲ್ಲಿಂದ ಹಿಂದಿರುಗಿದ್ದಾರೆ. ಮಹಿಳೆ ಮೇಲ್ನೋಟಕ್ಕೆ ಮಾನಸಿಕ ಅಸ್ವಸ್ಥೆಯಂತೆಯೂ ಕಾಣುತ್ತಿಲ್ಲ. ಭಿಕ್ಷುಕಿಯಂತೆಯೂ ಕಾಣುತ್ತಿಲ್ಲ. ವೃದ್ಧೆಯೂ ಅಲ್ಲ. ಆದರೂ ಒಂಟಿಯಾಗಿ ಇಲ್ಲಿರಲು ಕಾರಣವೇನು ಎಂಬುದೇ ಕುತೂಹಲ ಮೂಡಿಸಿದೆ. ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಮಹಿಳೆಯನ್ನು ವಿಚಾರಣೆ ನಡೆಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.