ಸಾಹಿತಿ ಬರಗೂರು ವಿರುದ್ಧ ಆಕ್ರೋಶ
Team Udayavani, Aug 18, 2017, 2:27 PM IST
ಸಾಗರ: ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಭಾಷಾ ಪುಸ್ತಕದಲ್ಲಿ “ಯುದ್ಧ ಒಂದು ಉದ್ಯಮ’ ಎಂಬ ಪಠ್ಯದಲ್ಲಿ ಸೈನಿಕರನ್ನು ಅವಮಾನಿಸಿರುವುದನ್ನು ಖಂಡಿಸಿ ಮಾಜಿ ಯೋಧರ ಕಲ್ಯಾಣ ಟ್ರಸ್ಟ್ ವತಿಯಿಂದ ಪ್ರತಿಭಟನೆ ನಡೆಸಿ ಉಪವಿಭಾಗಾ ಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಯೋಧ ಹಾಗೂ ವನವಾಸಿ ಕಲ್ಯಾಣ ಸಮಿತಿಯ ಪ್ರಚಾರಕ್ ಕೃಷ್ಣಮೂರ್ತಿ ಕೆ., ಸೈನಿಕರನ್ನು ಅವಮಾನಿಸುವ ಕೆಲಸ ಮಾಡಿರುವ ಬರಗೂರು ಅವರ ಬರಹ ಖಂಡನೀಯ. ಸೈನಿಕರು ತಮ್ಮ ಕುಟುಂಬವರ್ಗವನ್ನು ಬಿಟ್ಟು ಗಡಿಯನ್ನು ದೇಶ ಕಾಯುತ್ತಿರುವುದರಿಂದಲೇ ದೇಶವಾಸಿಗಳು ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ. ಅಂತಹ ಸೈನಿಕರನ್ನು, ಅವರ ಕುಟುಂಬವನ್ನು ಅವಹೇಳನಕಾರಿಯಾಗಿ ಚಿತ್ರಿಸುವುದು, ಪಠ್ಯಗಳಲ್ಲಿ ಅವರ ಕುರಿತು ಅವಹೇಳನೆಯಾಗಿ ಬರೆಯುವುದು ಅಕ್ಷಮ್ಯ ಅಪರಾಧ ಎಂದು ದೂರಿದರು.
ಸೈನಿಕರು ದೇಶದ ಮುಕುಟವಿದ್ದಂತೆ. ಇಂತಹ ಸೈನಿಕರ ಕುರಿತು ಮಂಗಳೂರು ವಿಶ್ವವಿದ್ಯಾಲಯದ 2017-18ನೇ ಸಾಲಿನ ಶೈಕ್ಷಣಿಕ ವರ್ಷದ ಭಾಷಾ ಪುಸ್ತಕದಲ್ಲಿ ಪದಚಿತ್ತಾರ ಎಂಬ ಕನ್ನಡ ಪುಸ್ತಕದಲ್ಲಿ ಬರಗೂರು ಪಾಠವನ್ನು ಬರೆದಿದ್ದಾರೆ. ಇದು ಸೈನಿಕರ ಮಾನಸಿಕ ಸ್ಥೈರ್ಯ ಕುಗ್ಗಿಸುವಂತಹದ್ದಾಗಿದೆ. ಇಂತಹ ಬರಹಗಳಿಂದ ಯುವಜನರು ಸೈನ್ಯಕ್ಕೆ ಸೇರಲು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಬರಗೂರು ಅವರು ಹೊಂದಿರುವ ಎಲ್ಲ ಸಾಂವಿಧಾನಿಕ ಹುದ್ದೆಗಳಿಂದ ಉಚ್ಚಾಟಿಸಬೇಕು. ಇದುವರೆಗೆ ಬರಗೂರು ಅವರಿಗೆ ನೀಡಿದ ಎಲ್ಲ ಪ್ರಶಸ್ತಿಗಳನ್ನು ಹಿಂದಕ್ಕೆ ಪಡೆಯಬೇಕು. ಮುಂದೆ ಸರ್ಕಾರದ ಯಾವುದೇ ಹುದ್ದೆ ಅಥವಾ ಪ್ರಶಸ್ತಿಗೆ ಇವರ ಹೆಸರನ್ನು ಪರಿಗಣಿಸಬಾರದು ಎಂದು ಒತ್ತಾಯಿಸಿದರು.
ಟ್ರಸ್ಟ್‌ನ ಗೌರವಾಧ್ಯಕ್ಷ ಬಿ.ಟಿ. ಸೋಮನ್ ಮಾತನಾಡಿ, ರಾಮಚಂದ್ರಪ್ಪ ಅವರು, ಸೈನಿಕ ಕ್ರೂರಿಯಾಗಿರುತ್ತಾನೆ. ಮದ್ಯಮಾಂಸ ಸೇವನೆ ಲಾಲಸೆಯಿಂದ ಆತನನ್ನು ಸೈನ್ಯಕ್ಕೆ ಸೆಳೆಯಲಾಗುತ್ತದೆ. ಗಡಿಭಾಗದಲ್ಲಿ ಸೈನಿಕರು ಅತ್ಯಾಚಾರ ಎಸಗುತ್ತಾರೆ. ಸೈನಿಕರ ಮಡದಿಯರು ಒಂಟಿತನ ಕಾಡಿ ತಪ್ಪು ದಾರಿ ಹಿಡಿಯುತ್ತಾರೆ. ಜೀವದ ಹಂಗು ತೊರೆದು ತಾಯ್ನಾಡಿನ ರಕ್ಷಣೆ ಮಾಡುವ ಯುದ್ಧವನ್ನು ಬರಗೂರು ರಾಮಚಂದ್ರಪ್ಪ
ಯುದೊದ್ಯಮ ಎಂದು ಉಲ್ಲೇಖೀಸುವ ಮೂಲಕ ತಮ್ಮ ಕೀಳುಮಟ್ಟದ ಸಾಹಿತ್ಯಬುದ್ಧಿಯನ್ನು ಪ್ರದರ್ಶಿಸಿದ್ದಾರೆ ಎಂದು
ಆಕ್ರೋಶ ವ್ಯಕ್ತಪಡಿಸಿದರು.
ಟ್ರಸ್ಟ್ ಅಧ್ಯಕ್ಷ ರಂಗರಾಜು ಬಾಳೆಗುಂಡಿ ಮಾತನಾಡಿ, ಬರವಣಿಗೆಯಿಂದ ಸಮಸ್ತ ಸೈನಿಕರಿಗೆ ಅವಮಾನವಾಗಿದೆ. ಇಂತಹ ಅವಹೇಳನಕಾರಿ ವಿಷಯವನ್ನು ವಿಶ್ವವಿದ್ಯಾಲಯದ ಪಠ್ಯ ವಿಷಯದಲ್ಲಿ ಪ್ರಕಟಿಸಲು ಭಾಗಿಯಾದ ಪಠ್ಯ ಸಮಿತಿಯ ಮುಖ್ಯಸ್ಥರನ್ನು ಮತ್ತು ಸದಸ್ಯರನ್ನು ಈ ಕೂಡಲೇ
ವಜಾಗೊಳಿಸಿ, ಶಿಸ್ತುಕ್ರಮ ಜರುಗಿಸಬೇಕು. ಅವರಿಗೆ ನೀಡಿರುವ ಸರ್ಕಾರಿ ಸವಲತ್ತುಗಳನ್ನು ಹಿಂದಕ್ಕೆ ಪಡೆಯಬೇಕು. ಮುಂದಿನ ದಿನಗಳಲ್ಲಿ ಸೈನಿಕರ ಕುರಿತ ಅಸತ್ಯ ಸಂಗತಿಗಳನ್ನು ಯಾವುದೇ ಪುಸ್ತಕದಲ್ಲಿ ಪ್ರಕಟಿಸದಂತೆ ಸರ್ಕಾರ ನಿಗಾವಹಿಸಬೇಕು ಎಂದು ಆಗ್ರಹಿಸಿದರು.
ಟ್ರಸ್ಟ್‌ನ ಕಾರ್ಯದರ್ಶಿ ವಿಷ್ಣು ಹೆಗಡೆ, ಉಪಾಧ್ಯಕ್ಷ ಈಶ್ವರಪ್ಪ, ಕೃಷ್ಣಮೂರ್ತಿ, ವೆಂಕಟೇಶ್, ದಿನೇಶ್ ಜೆ.ವಿ. ಗಂಗಾಧರ ಟಿ., ಅಣ್ಣಪ್ಪ ಡಿ.ಕೆ., ಮಮತಾ ಭಾಸ್ಕರ, ನೇತ್ರಾವತಿ ನಾರಾಯಣ, ಗಿರಿಜಾ ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ಶಾಸಕರಿಗೆ ಬಿಜೆಪಿ ಆಫರ್; ರವಿ ಗಣಿಗ ಆರೋಪಕ್ಕೆ ಶಾಸಕ ತಮ್ಮಯ್ಯ ಸ್ಪಷ್ಟನೆ
Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
Chikkamagaluru: ಕೇರಳದಿಂದ “ಸುರಕ್ಷಿತ’ ಮಲೆನಾಡಿನತ್ತ “ನಕ್ಸಲರು’?
Naxalite: ಮಲೆನಾಡಿಗೆ ನಕ್ಸಲರ ಭೇಟಿ ದೃಢ; 3 ಬಂದೂಕು-ಮದ್ದುಗುಂಡು ವಶ
MUST WATCH
ಹೊಸ ಸೇರ್ಪಡೆ
Agriculture: ಕೃಷಿಗೆ ಶೂನ್ಯ ಬಡ್ಡಿ ಸಾಲಕ್ಕೆ ಬೇಕಿದೆ ಮಾರ್ಗೋಪಾಯ
udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.