ಯಾತ್ರಿ ನಿವಾಸ್ ಕಾಮಗಾರಿಗೆ ಚಾಲನೆ
Team Udayavani, Jan 7, 2020, 3:23 PM IST
ತರೀಕೆರೆ: ಅಕ್ಕನಾಗಲಾಂಬಿಕೆ ಐಕ್ಯ ಸ್ಥಳವಾದ ಅಕ್ಕನಾಗಮ್ಮನ ಗದ್ದುಗೆಯಲ್ಲಿ ನಿರಂತರ ಚಟುವಟಿಕೆಗಳು ನಡೆಯಬೇಕು. ಅನುಭವ ಮಂಟಪದಲ್ಲಿ ಶರಣರ ವಚನಗಳನ್ನು ದಾಖಲು ಮಾಡಬೇಕೆಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು. ಅಕ್ಕನಾಗಮ್ಮ ಗದ್ದುಗೆ ಬಳಿ ಯಾತ್ರಿ ನಿವಾಸ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಪ್ರವಾಸೋದ್ಯಮ ಇಲಾಖೆಯಿಂದ ಬಿಡುಗಡೆ ಯಾಗಿರುವ 85 ಲಕ್ಷ ರೂ. ವೆಚ್ಚದ ಯಾತ್ರಿ ನಿವಾಸದ ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಇಲ್ಲಿ ಭಕ್ತರು ಕೇವಲ ಮೋಜಿಗಾಗಿ ಪ್ರವಾಸದ ನೆಪದಲ್ಲಿ ಬಂದರೆ ಸಾಲದು. ಇದು ಧಾರ್ಮಿಕ ಶ್ರದ್ಧಾ ಕೇಂದ್ರವಾಗಬೇಕು. ಅಕ್ಕನಾಗಮ್ಮ ಐಕ್ಯವಾಗಿರುವ ಈ ಜಾಗ ಒಂದು ಐತಿಹಾಸಿಕ ಸ್ಥಳ. ಇದೊಂದು ಅಧ್ಯಾತ್ಮಿಕ ತಾಣವಾಗಬೇಕು. ಜನಸಾಮಾನ್ಯರಿಗೆ ಒಂದು ಶಾಂತಿ ತಾಣವಾಗಬೇಕು. 12ನೇ ಶತ ಮಾನದ ಬಸವಾದಿ ಶರಣರ ವಚನಗಳ ಗೀತ ಗಾಯನ ಇಲ್ಲಿ ನಿರಂತರವಾಗಿ ನಡೆಯಬೇಕೆಂದರು.
ಶಾಸಕ ಡಿ.ಎಸ್.ಸುರೇಶ್ ಮಾತನಾಡಿ, ಶ್ರೀಗಳ ನಿರಂತರ ಪ್ರಯತ್ನದಿಂದ ಐತಿಹ್ಯ ಹೊಂದಿರುವ ಅಕ್ಕನಾಗಮ್ಮ ಗದ್ದುಗೆ ಅಭಿವೃದ್ಧಿಯಾಗುತ್ತಿದೆ. ಇಲಾಖೆ 85 ಲಕ್ಷ ರೂ. ಬಿಡುಗಡೆ ಮಾಡಿದೆ. ಆದರೆ, ಇದು ಸಾಲದು. ಭವನ ಪೂರ್ಣಗೊಳ್ಳಲು ಇನ್ನೂ 35 ಲಕ್ಷ ರೂ. ಅಗತ್ಯವಿದೆ. ಸಚಿವರು ಹಾಗೂ ಸರಕಾರದೊಂದಿಗೆ ಚರ್ಚಿಸಿ ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗುವುದು. ಶ್ರೀಗಳ ಆಶಯದಂತೆ ವಚನಗಳನ್ನು ಬರೆಸಲಾಗುವುದು. ಕ್ಷೇತ್ರದ ಅಭಿವೃದ್ಧಿಗೆ 5 ಕೋಟಿ ರೂ. ಅಗತ್ಯವಿದ್ದು, ಬಿಡುಗಡೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು. ಜಿಪಂ ಸದಸ್ಯ ಕೆ.ಆರ್.ಆನಂದಪ್ಪ, ಜಿಪಂ ಮಾಜಿ ಅಧ್ಯಕ್ಷ ಕೆ.ಆರ್. ಧೃವಕುಮಾರ್, ಪುರಸಭಾ ಮಾಜಿ ಅಧ್ಯಕ್ಷ ಡಿ.ವಿ.ಪದ್ಮರಾಜ್, ಡಿ.ಜಿ.ಪರಮೇಶ್, ಚಿತ್ರಶೇಖರಪ್ಪ, ಚರಣ್ ಇನ್ನಿತರರು ಇದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Datta peeta; ಸರಕಾರ ನೇಮಕ ಮಾಡಿದ್ದ ಅರ್ಚಕ ರಾಜೀನಾಮೆ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
MUST WATCH
ಹೊಸ ಸೇರ್ಪಡೆ
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.