ಬಿರುಕುಬಿಟ್ಟ ಯೋಗಾನರಸಿಂಹ ದೇವಾಲಯ ಗೋಪುರ

Team Udayavani, May 12, 2020, 7:15 AM IST

ಬಿರುಕುಬಿಟ್ಟ ಯೋಗಾನರಸಿಂಹ ದೇವಾಲಯ ಗೋಪುರ

ಅಜ್ಜಂಪುರ: ಸಮೀಪದ ಬಗ್ಗವಳ್ಳಿಯ ಇತಿಹಾಸ ಪ್ರಸಿದ್ಧ ಯೋಗಾನರಸಿಂಹ ದೇಗುಲದ ಪ್ರಧಾನ ಗೋಪುರದಲ್ಲಿ ಬಿರುಕು ಕಾಣಿಸಿಕೊಂಡಿದೆ. ದೇಗುಲದ ಹಿಂಭಾಗದ ಗೋಡೆಯೂ ಎಡಕ್ಕೆ ವಾಲಿದೆ. ಒಟ್ಟಾರೆ ಶಿಥಿಲಾವಸ್ಥೆಗೆ ಜಾರುತ್ತಿದೆ. ಇದರ ಕಾಯಕಲ್ಪಕ್ಕೆ ಸಿದ್ಧತೆ ನಡೆಯುತ್ತಿದೆ.

ಬಗ್ಗವಳ್ಳಿ ಗ್ರಾಮದ ಸಮಾನ ಮನಸ್ಕರು ರಚಿಸಿರುವ ಯೋಗಾನರಸಿಂಹಸ್ವಾಮಿ ದೇವಾಲಯ ಅಭಿವೃದ್ಧಿ ಸಮಿತಿ ಈ ಕಾರ್ಯಕ್ಕೆ ಮುಂದಾಗಿದೆ. ಹಿಂದೆ ಹಲವು ರಾಜರು ದಾಳಿ ನಡೆಸಿ, ಅಪೂರ್ವ ಶಿಲಾಮೂರ್ತಿಗಳನ್ನು ಭಗ್ನಗೊಳಿಸಿದ್ದು ಇತಿಹಾಸ ಆಗಿದೆ. ಆದರೆ ಇಲ್ಲಿನ ಅಮೂಲ್ಯ ವಿಗ್ರಹಗಳು ಇಂದಿಗೂ ಭಂಜನೆಗೆ ಒಳಪಡುತ್ತಿವೆ. ಕಿಡಿಗೇಡಿಗಳು ದೇಗುಲದ ಸುತ್ತಲಿನ ಕಲ್ಲುಗಳ ಮೇಲೆ ಹೆಸರನ್ನು ಕೆತ್ತುತ್ತಿದ್ದಾರೆ. ಸೂಕ್ಷ್ಮ ಕಲಾಕುಸುರಿಯುಳ್ಳ ಜಯ-ವಿಜಯ ದ್ವಾರಪಾಲಕರು, ಶಿಲಾಬಾಲಕಿ, ನಾಗಕನ್ನಿಕೆ, ಗಣೇಶ, ಪಾಶ ಹಿಡಿದು ನಿಂತ ಯಮನ ವಿಗ್ರಹಗಳನ್ನು ವಿರೂಪಗೊಳಿಸಿದ್ದಾರೆ. ಇದು ಕೊಳಕು ಮನಸ್ಥಿತಿಯವರ ಕುಕೃತ್ಯಕ್ಕೆ ಸಾಕ್ಷಿಯಾಗಿದೆ.

ದೇಗುಲದ ಚನ್ನಕೇಶವ ಮೂರ್ತಿ ಇರುವ ಗರ್ಭಗುಡಿ ಮೇಲ್ಭಾಗದಲ್ಲಿನ ಎತ್ತರದ ಗೋಪುರ ಕುಸಿಯುವ ಭೀತಿ ಮೂಡಿಸಿದೆ. ಗೋಪುರದಲ್ಲಿ ಅರ್ಧ ಅಡಿಗಿಂತಲೂ ಹೆಚ್ಚು ಅಂತರದ ಬಿರುಕು ಕಾಣಿಸಿಕೊಂಡಿದೆ. ಮಳೆ-ಗಾಳಿಗೆ ಸಿಲುಕಿ ಗೋಡೆಗಳೂ ವಾಲಿವೆ. ಇಡೀ ಗೋಪುರ ಹಿಂಭಾಗದಲ್ಲಿ ಎಡಭಾಗಕ್ಕೆ ಸ್ವಲ್ಪ ಮಟ್ಟಿಗೆ ಕುಸಿದಿರುವಂತೆ ಕಾಣುತ್ತಿದೆ. ಐತಿಹಾಸಿಕ ದೇಗುಲ ಉಳಿಯಬೇಕು. ಉತ್ತಮ ಶಿಲ್ಪಕಲಾ ಗೋಪುರ ಹಾಳಾಗಬಾರದು. ಗೋಪುರ ಕುಸಿಯದಂತೆ ತಡೆಯಲು ತಕ್ಷಣ ಗೋಪುರಕ್ಕೆ ಸಿಮೆಂಟ್‌ ಕಂಭ ಬಳಸಿ ಆಸರೆ ಒದಗಿಸಬೇಕು. ಮಳೆ ನೀರು ತಾಗದಂತೆ ಗೋಪುರಕ್ಕೆ ತಾಡಪಾಲು ಹಾಕಬೇಕು. ಇದು ತುರ್ತಾಗಿ ಆಗಬೇಕು ಎಂದು ದೇವಾಲಯ ಅಭಿವೃದ್ಧಿ ಸಮಿತಿಯ ಶಾಂತಪ್ಪ ಒತ್ತಾಯಿಸಿದ್ದಾರೆ.

ದೇವಸ್ಥಾನ ಅಭಿವೃದ್ಧಿ ಸೇರಿ ಪ್ರವಾಸಿಗರಿಗೆ ತಂಪು ವಾತಾವರಣ ಸೃಷ್ಟಿಗೆ ಉದ್ಯಾನ ರೂಪಿಸಬೇಕು. ಜನಮನ ಸೆಳೆಯಲು ಕಾರಂಜಿ, ಮಕ್ಕಳಿಗೆ ಆಟಿಕೆ, ಜಾರುಬಂಡಿ, ಉಯ್ನಾಲೆ ವ್ಯವಸ್ಥೆಗೊಳಿಸಬೇಕು ಎಂಬ ಯೋಜನೆ ದೇವಾಲಯ ಅಭಿವೃದ್ಧಿ ಸಮಿತಿ ಮುಂದಿದೆ. ಇದಕ್ಕೆ ಸಹಕಾರ ನೀಡಲು ಗ್ರಾಮಸ್ಥರು, ಯೋಗ ವಿಸ್ಮಯಟ್ರಸ್ಟ್‌ ನ ಯೋಗಾ ಶಿಭಿರಾರ್ಥಿಗಳು, ಅನಂತ್‌ ಜೀ ಯವರ ವಿದೇಶೀ ಅಭಿಮಾನಿಗಳೂ ಮುಂದೆ ಬಂದಿದ್ದಾರೆ. ಎಂಟು ಮಂದಿ ಮುಸ್ಲಿಂ ಬಾಂಧವರೂ ದೇಣಿಗೆ ನೀಡಿದ್ದಾರೆ. ಸರ್ಕಾರ ದೇಗುಲದ ಪುನಶ್ಚೇನಕ್ಕೆ ಮುಂದಾಗಬೇಕು. ಇಲ್ಲವಾದರೆ ನಮಗಾದರೂ ಅವಕಾಶ ಮಾಡಿಕೊಡಬೇಕು. ಬದಲಿಗೆ ಐತಿಹಾಸಿಕ ದೇಗುಲವನ್ನು ಅಳಿವಿನಂಚಿಗೆ ಜಾರಲು ಬಿಡಬಾರದು ಎಂದು ಶಿವಮೊಗ್ಗದ ಯೋಗ ವಿಸ್ಮಯ ಟ್ರಸ್ಟ್‌ ನ ಸಂಸ್ಥಾಪಕರು ಹಾಗು ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆದ ಅನಂತ್‌ ಜೀ ಮನವಿ ಮಾಡಿದ್ದಾರೆ.

ಶಿಥಿಲಾವಸ್ಥೆಯಲ್ಲಿರುವ ದೇಗುಲದ ರಕ್ಷಣೆಗೆ ರಾಜ್ಯ ಪ್ರಾಚ್ಯವಸ್ತು ಇಲಾಖೆ ಮುಂದಾಗಬೇಕು. ಅಪೂರ್ವ ಕಲೆ, ಇತಿಹಾಸ ಸಾರುವ ದೇವಾಲಯವನ್ನು ಮುಂದಿನ ಪೀಳಿಗೆಗೆ ಉಳಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಶೀಘ್ರ ಕ್ರಮವಹಿಸಬೇಕು ಎಂದು ಸಮಿತಿಯ ಸಿ.ಎಸ್‌. ಸಿದ್ದೇಗೌಡ ಒತ್ತಾಯಿಸಿದ್ದಾರೆ

ಟಾಪ್ ನ್ಯೂಸ್

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

ಕೇರಳದಿಂದ “ಸುರಕ್ಷಿತ’ ಮಲೆನಾಡಿನತ್ತ “ನಕ್ಸಲರು’?

Chikkamagaluru: ಕೇರಳದಿಂದ “ಸುರಕ್ಷಿತ’ ಮಲೆನಾಡಿನತ್ತ “ನಕ್ಸಲರು’?

19-naxalite

Naxalite: ಮಲೆನಾಡಿಗೆ ನಕ್ಸಲರ ಭೇಟಿ ದೃಢ; 3 ಬಂದೂಕು-ಮದ್ದುಗುಂಡು ವಶ

17-2

ಚಿಕಿತ್ಸೆಗೆಂದು ಬಂದಿದ್ದ ರೋಗಿ ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರ ಆರೋಪ

Chikkamagaluru: ಮನೆಯೊಂದರಲ್ಲಿ ಬಂದೂಕು ಪತ್ತೆ; ನಕ್ಸಲ್‌ ಓಡಾಟ ಶಂಕೆ

Chikkamagaluru: ಮನೆಯೊಂದರಲ್ಲಿ ಬಂದೂಕು ಪತ್ತೆ; ನಕ್ಸಲ್‌ ಓಡಾಟ ಶಂಕೆ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.