ಹೊರಗುತ್ತಿಗೆ ನೌಕರರ ಧರಣಿ
ಕೆಲಸದಲ್ಲಿ ಮುಂದುವರಿಸಲು ಜಿಲ್ಲಾಸ್ಪತ್ರೆ, ಬಿಸಿಎಂ ಹಾಸ್ಟೆಲ್ ಕಾರ್ಮಿಕರ ಆಗ್ರಹ
Team Udayavani, Aug 3, 2019, 11:28 AM IST
ಚಿಕ್ಕಮಗಳೂರು: ಹೊರಗುತ್ತಿಗೆ ನೌಕರರು ತಮ್ಮ ಕೆಲಸ ಮುಂದುವರಿಸುವಂತೆ ಒತ್ತಾಯಿಸಿ ಎಐಟಿಯುಸಿ ಮತ್ತು ಬಿಎಸ್‌ಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಚಿಕ್ಕಮಗಳೂರು: ಮಲ್ಲೇಗೌಡ ಜಿಲ್ಲಾ ಸಾರ್ವ ಜನಿಕ ಆಸ್ಪತ್ರೆ ಮತ್ತು ಬಿಸಿಎಂ ಹಾಸ್ಟೆಲ್ನಲ್ಲಿ ತೆಗೆದು ಹಾಕಿರುವ ಹೊರಗುತ್ತಿಗೆ ನೌಕರ ರನ್ನು ಕೆಲಸದಲ್ಲಿ ಮುಂದುವರೆಸುವಂತೆ ಒತ್ತಾಯಿಸಿ ಎಐಟಿಯುಸಿ ಮತ್ತು ಬಿಎಸ್‌ಪಿ ನೇತೃತ್ವದಲ್ಲಿ ಉಚ್ಚಾಟಿತ ನೌಕರರು ಧರಣಿ ನಡೆಸಿದರು.
ಕಳೆದು 15-20 ವರ್ಷದಿಂದ ಕೆಲಸ ಮಾಡುತ್ತಿರುವ ಮಹಿಳೆಯರು- ಪುರುಷ ರನ್ನು ಕೆಲಸದಿಂದ ವಜಾಗೊಳಿಸಿ, ಮೂರ್‍ನಾಲ್ಕು ತಿಂಗಳ ಹಿಂದಷ್ಟೇ ಕೆಲಸಕ್ಕೆ ಹಾಜರಾದವರನ್ನು ಮುಂದುವರೆಸಿರುವುದು ಎಷ್ಟು ಸರಿ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಹೊರಗುತ್ತಿಗೆ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷೆ ರಾಧಾ ಸುಂದರೇಶ್ ಮಾತ ನಾಡಿ, ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ 20 ವರ್ಷಗಳಿಂದಲೂ ದಿನಗೂಲಿ ಮತ್ತುಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಬಂದಿದ್ದಾರೆ. ಈ ಹಿಂದೆ ಚುನಾವಣೆ ಸಂದರ್ಭದಲ್ಲಿ 38 ಜನರಿಗೆ ಧಿಡೀರನೆ ಕೆಲಸಕ್ಕೆ ಬರಬೇಡಿ ಎಂದು ಹೇಳಿದ್ದರು. ಆ ಸಂದರ್ಭದಲ್ಲಿ ಸರ್ಕಾರದ ಪ್ರತಿನಿಧಿಗ ಳೊಂದಿಗೆ ಮಾತುಕತೆ ನಡೆಸಿ ಕೂಡಲೇ ಅದಕ್ಕೆ ತಡೆಯಾಜ್ಞೆ ನೀಡಿ ಕೆಲಸದಲ್ಲಿಮುಂದುವರೆಸುವಂತೆ ಆದೇಶ ಮಾಡಿಸಲಾಗಿತ್ತು. ಈಗ ಬಿ.ಎಸ್. ಯಡಿಯೂರಪ್ಪಮುಖ್ಯಮಂತ್ರಿಯಾದಾಕ್ಷಣ ಹೊರಗುತ್ತಿಗೆ ನೌಕರರನ್ನು ತೆಗೆದು ಹಾಕಿ ಯಾರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಡಿ ಎಂದು ಆದೇಶ ಮಾಡಿದ್ದಾರೆ ಎಂದು ದೂರಿದರು.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿ ಗಳೊಂದಿಗೆ ಮಾತನಾಡಿದಾಗ, ನಾವು ಇವರನ್ನು ಕೆಲಸಕ್ಕೆ ತೆಗೆದುಕೊಂಡರೆ ನಮ್ಮ ಕೈಯಿಂದ ಸಂಬಳ ನೀಡಬೇಕಾಗುತ್ತದೆ. ಹಾಗಾಗಿ, ಸರ್ಕಾರದೊಂದಿಗೆ ಮಾತನಾಡ ಬೇಕೆಂದು ತಿಳಿಸಿದ್ದಾರೆ ಎಂದರು.
ಬಿಸಿಎಂ ಹಾಸ್ಟೆಲ್ನಲ್ಲಿ ಕೆಲಸ ಮಾಡುತ್ತಿದ್ದ 40ಜನರನ್ನು ನೇರ ನೇಮಕಾತಿ ಮುಖಾಂತರ ಕೆಲವು ಸ್ಥಳಕ್ಕೆ ಆಯೋಜನೆ ಮಾಡಿದ್ದರು. ಕುಮಾರಸ್ವಾಮಿ ನೇತೃತ್ವದ ಸರ್ಕಾರದಲ್ಲೂ ಅವರನ್ನು ಮುಂದುವರೆಸಿದ್ದರು. ಜೂನ್ 27ರಂದು ಮತ್ತೂಂದು ಆದೇಶ ಹೊರಡಿಸಿ, 6 ತಿಂಗಳು ಮುಂದುವರೆಸುವಂತೆ ಕುಮಾರಸ್ವಾಮಿ ಹೇಳಿದ್ದರು. ಆದರೂ, ಹೊಸ ಸರ್ಕಾರ ಬಂದ ಕೂಡಲೇ ಅದನ್ನು ರದ್ದುಪಡಿಸಿ ಕೆಲಸದಿಂದ ತೆಗೆಯುವಂತೆ ಆದೇಶಿಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಎಸ್‌ಪಿ ಜಿಲ್ಲಾ ಸಂಚಾಲಕ ಕೆ.ಟಿ. ರಾಧಾಕೃಷ್ಣ ಮಾತನಾಡಿ, ಮಹಿಳೆಯರಿಗಾಗಿ ಅನೇಕ ಕಾನೂನುಗಳಿವೆ ಎಂದು ರಾಜಕಾರಣಿಗಳು, ಸರ್ಕಾರದ ಪ್ರತಿನಿಧಿಗಳು ಮಾತನಾಡುತ್ತಾರೆ. ಮಹಿಳೆ ಯರಿಗೆ ರಕ್ಷಣೆ ನೀಡುತ್ತೇವೆ, ಹಕ್ಕು ಕೊಡುತ್ತೇವೆ ಎಂದೆಲ್ಲಾ ಹೇಳುತ್ತಾರೆ. ಆದರೆ, ಅವೆಲ್ಲಾ ಭಾಷಣಕ್ಕೆ ಮಾತ್ರ ಸೀಮಿತವಾಗಿವೆಯೇ ಹೊರತು ಯಾವುದೂ ಕಾರ್ಯಗತವಾಗಿಲ್ಲ. ಜಿಲ್ಲೆಯಲ್ಲಿ ಹೊರಗುತ್ತಿಗೆ ನೌಕರರು ಒಂದು ರೀತಿ ಸರ್ಕಾರಿ ಜೀತ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 25 ವರ್ಷಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಅಧಿಕಾರಕ್ಕೆ ಬಂದಿವೆ. ಯಾರು ಏನು ಮಾಡಿದ್ದಾರೆ. ಮೂರೂ ಪಕ್ಷಗಳು ಅಧಿಕಾರದಲ್ಲಿದ್ದ ಸಂದರ್ಭ ರಾಜ್ಯದಲ್ಲಿ ಲಕ್ಷಾಂತರ ಮುಗ್ಧ ಜನರನ್ನು ಜೀತದಾಳುಗಳನ್ನಾಗಿ ಇಟ್ಟುಕೊಂಡು ಅನ್ಯಾಯವನ್ನೇ ಮಾಡಿವೆ ಎಂದು ದೂರಿದರು.
2ಸಾವಿರ ರೂ.ಗೆ ಕೆಲಸ ಆರಂಭಿಸಿ ಕಳೆದ 18-20 ವರ್ಷಗಳಿಂದ ನಿರಂತರವಾಗಿ ಕೆಲಸ ಮಾಡುತ್ತ, ಬಂದ ಸಂಬಳದಲ್ಲೇ ಮಕ್ಕಳಿಗೆ ಶಿಕ್ಷಣ ಕೊಡಿಸಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಈಗ ಏಕಾಏಕಿ ಕೆಲಸದಿಂದ ತೆಗೆದು ಹಾಕಿ ಅನ್ನಕ್ಕೆ ಸಂಚಕಾರ ತಂದಿದ್ದಾರೆ. ಅವರನ್ನು ಕೆಲಸದಲ್ಲಿ ಮುಂದುವರೆಸದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರುಕ್ಮಿಣಿ, ಜಯಂತಿ, ಕಿರಣ್, ಗಂಗೇಗೌಡ, ಶರತ್, ವಾಣಿ, ವಾಣಿ ಮತ್ತಿತರ ಕಾರ್ಮಿಕ ಮುಖಂಡು ಹಾಗೂ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Udupi; ಸ್ವಯಂ ರಕ್ಷಣೆಗಾಗಿ ಕರಾಟೆ ಕಲೆಯ ಅಭ್ಯಾಸ ಇಂದಿನ ಅಗತ್ಯತೆ: ಪುತ್ತಿಗೆ ಶ್ರೀ
MUST WATCH
ಹೊಸ ಸೇರ್ಪಡೆ
Australia vs Pakistan T20: ಪಾಕ್ ವಿರುದ್ಧ ಆಸೀಸ್‌ಗೆ 2-0 ಸರಣಿ ಜಯ
Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್ ಮಗುಚಿ ಇಬ್ಬರು ನಟಿಯರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.